Last Updated:
ಮಂಗಳೂರು-ಬೆಂಗಳೂರು ರೈಲ್ವೆ ಹಳಿ ವಿದ್ಯುದೀಕರಣ ಕಾಮಗಾರಿ ಡಿಸೆಂಬರ್ ನಲ್ಲಿ ಮುಗಿಯಲಿದೆ, ಇದರಿಂದ ರೈಲು ವೇಗ ಹೆಚ್ಚಾಗಿ ಪ್ರಯಾಣ ಸಮಯ ಕಡಿಮೆಯಾಗಲಿದೆ.
ಮಂಗಳೂರು-ಬೆಂಗಳೂರು (Bengaluru) ರೈಲ್ವೆ ಹಳಿಯ ವಿದ್ಯುದೀಕರಣ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈ ಕಾಮಗಾರಿ ಸಂಪೂರ್ಣಗೊಂಡಲ್ಲಿ ಮಂಗಳೂರು (Mangaluru)-ಬೆಂಗಳೂರು ದೂರದ ಅವಧಿ (Time) ಮತ್ತಷ್ಟು ಕಡಿಮೆಯಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ರೈಲ್ವೆ ಇಲಾಖೆ ಮಂಗಳೂರಿನಿಂದ ಪುತ್ತೂರಿನವರೆಗೆ ಹಳಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳಿಸಿ ಇದೀಗ ರೈಲುಗಳು (Trains) ವಿದ್ಯುತ್ ಮೂಲಕವೇ ಸಂಚರಿಸುತ್ತಿವೆ. ಅದೇ ರೀತಿ ಪುತ್ತೂರಿನಿಂದ ಸುಬ್ರಹ್ಮಣ್ಯವರೆಗಿನ ಕಾಮಗಾರಿಗಳ ವೇಗವೂ ಹೆಚ್ಚಾಗಿದೆ. ಅದರಲ್ಲೂ ಸುಬ್ರಹ್ಮಣ್ಯ ದಿಂದ ಸಕಲೇಶಪುರ ತನಕ ಹಳಿ ವಿದ್ಯುದೀಕರಣ ಕಾಮಗಾರಿ ಅತ್ಯಂತ ಕ್ಲಷ್ಟಕರವಾಗಿದ್ದರೂ ಆ ಭಾಗದಲ್ಲಿ ಕಾಮಗಾರಿಗಳು ರೈಲ್ವೆ ಇಲಾಖೆ ನಿಗದಿಪಡಿಸಿದ ವೇಳಾಪಟ್ಡಿಯಂತೆ ಸಾಗುತ್ತಿದೆ.
ಶಿರಾಡಿಘಾಟ್‍ನ ಮಧ್ಯಭಾಗದಲ್ಲಿ ಹಾದುಹೋಗುವ ರೈಲ್ವೆ ಹಳಿಗಳಿಗೆ ವಿದ್ಯುದೀಕರಣ ಸಂಪರ್ಕ ಕಲ್ಪಿಸುವುದು ತ್ರಾಸದಾಯಕ ಕೆಲಸವಾಗಿದ್ದರೂ, ರೈಲ್ವೆ ಇಲಾಖೆ ಈ ಕಾರ್ಯವನ್ನು ಚಾಲೆಂಜ್ ಆಗಿ ತೆಗೆದುಕೊಂಡು ಕಾಮಗಾರಿಯನ್ನು ತ್ವರಿತಗತಿಯನ್ನು ಮುಗಿಸುವ ಹಂತದಲ್ಲಿದೆ.
ಇಲಾಖೆಯ ವೇಳಾಪಟ್ಟಿಗೆ ಅನುಗುಣವಾಗಿ ಡಿಸೆಂಬರ್ ತಿಂಗಳಲ್ಲಿ ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಿಂದ ಸಕಲೇಶಪುರದವರೆಗಿನ ಹಳಿ ವಿದ್ಯುದೀಕರಣ ಕಾಮಗಾರಿ ಮುಗಿಯಲಿದೆ. ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಿಂದ ಸಕಲೇಶಪುರ ತನಕ ಸಂಚರಿಸಲು ರೈಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಲ್ಲದೆ, ರೈಲಿಗೆ ಈ ಪ್ರದೇಶದಲ್ಲಿ ಎರಡು ಇಂಜಿನ್ ಗಳನ್ನೂ ಜೋಡಿಸಲಾಗುತ್ತದೆ. ರೈಲಿನ ಎದುರಿಗೊಂದು ಇಂಜಿನ್ ಮತ್ತು ರೈಲಿನ ಹಿಂದೆಗೊಂಡು ಇಂಜಿನ್ ಅಳವಡಿಸಿ, ಶಿರಾಢಿಘಾಟ್ ನಲ್ಲಿ ರೈಲನ್ನು ಓಡಿಸಲಾಗುತ್ತಿದೆ.
ಒಂದು ವೇಳೆ ಈ ಟ್ರ್ಯಾಕ್ ಗೆ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಲ್ಲಿ ಶಿರಾಢಿಘಾಟ್ ನಲ್ಲಿ ರೈಲಿನ ವೇಗ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದರಿಂದಾಗಿ ಮಂಗಳೂರು ಮತ್ತು ಬೆಂಗಳೂರು ಮಧ್ಯೆ ತಲುಪಲು ಕ್ರಮಿಸುವ ಸಮಯ ಕಡಿಮೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಡಿಸೆಂಬರ್ ವೇಳೆಗೆ ಹಳಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಲ್ಲಿ, ರೈಲಿನ ವೇಗವೂ ಹೆಚ್ಚುವ ನಿರೀಕ್ಷೆಯಲ್ಲಿ ರೈಲು ಪ್ರಯಾಣಿಕರಿದ್ದಾರೆ.
Dakshina Kannada,Karnataka
November 14, 2025 6:56 PM IST