Railway Stop: ಸುಬ್ರಹ್ಮಣ್ಯ ರೈಲು ನಿಲ್ದಾಣದ ಪಕ್ಕದಲ್ಲಿರುವ ಈ ಸ್ಥಳದಲ್ಲಿ ರೈಲು ನಿಲ್ಲಿಸಿ, ಸಾರ್ವಜನಿಕರಿಂದ ಹೆಚ್ಚಾದ ಒತ್ತಾಯ! | Kodimbala railway station | ದಕ್ಷಿಣ ಕನ್ನಡ

Railway Stop: ಸುಬ್ರಹ್ಮಣ್ಯ ರೈಲು ನಿಲ್ದಾಣದ ಪಕ್ಕದಲ್ಲಿರುವ ಈ ಸ್ಥಳದಲ್ಲಿ ರೈಲು ನಿಲ್ಲಿಸಿ, ಸಾರ್ವಜನಿಕರಿಂದ ಹೆಚ್ಚಾದ ಒತ್ತಾಯ! | Kodimbala railway station | ದಕ್ಷಿಣ ಕನ್ನಡ

Last Updated:

ಕಡಬ ಹಾಗೂ ಸುತ್ತಮುತ್ತಲಿನ ಜನರು ಕೊಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗಾಗಿ ಮುಕುಲ್ ಶರಣ್ ಮಾಥೂರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕುಕ್ಕೆ (Kukke) ಸುಬ್ರಹ್ಮಣ್ಯ ರೈಲು (Train) ನಿಲ್ದಾಣದ ಪಕ್ಕದಲ್ಲೇ ಇರುವ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಬೇಕೆಂದು ಕಡಬ (Kadaba) ಹಾಗೂ ಸುತ್ತಮುತ್ತಲಿನ ಗ್ರಾಮದ ಜನ ರೈಲ್ವೆ ಇಲಾಖೆಗೆ ಮನವಿಯನ್ನು (Request) ಸಲ್ಲಿಸಿದ್ದಾರೆ. ದಕ್ಷಿಣ ಪಶ್ಚಿಮ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಶರಣ್ ಮಾಥೂರ್ ಅವರಿಗೆ ಅಧಿಕೃತ ಮನವಿಯನ್ನು ಸಾರ್ವಜನಿಕರೆಲ್ಲಾ ಸೇರಿ ಸಲ್ಲಿಸಲಾಗಿದೆ.

ರೈಲು ನಿಲುಗಡೆಗೆ ಒತ್ತಾಯ

ನೆಟ್ಟಣ ರೈಲು ನಿಲ್ದಾಣದ ಭೇಟಿಗೆ ಆಗಮಿಸಿದ್ದ ಅಧಿಕಾರಿಯನ್ನು ಭೇಟಿ ಮಾಡಿದ ಸ್ಥಳೀಯ ಮುಖಂಡರು ಸಲ್ಲಿಸಿದ ಮನವಿ ಪತ್ರದಲ್ಲಿ, ಕಡಬ ಪಟ್ಟಣ ಹಾಗೂ ಸುತ್ತಮುತ್ತಲಿನ ಸಾವಿರಾರು ನಿವಾಸಿಗಳು ಪ್ರತಿದಿನ ಪ್ರಯಾಣಕ್ಕೆ ಈ ಮಾರ್ಗವನ್ನು ಅವಲಂಭಿಸಿರುವುದರಿಂದ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಅಗತ್ಯ ಎಂದು ತಿಳಿಸಿದ್ದಾರೆ. ಪ್ರಸ್ತುತ ಯಾವುದೇ ಎಕ್ಸ್‍ಪ್ರೆಸ್ ರೈಲು ಕೊಡಿಂಬಾಳ ನಿಲ್ದಾಣದಲ್ಲಿ ನಿಲ್ಲದಿರುವುದರಿಂದ ಜನರು ದೂರದ ನಿಲ್ದಾಣಗಳಿಗೆ ತೆರಳಿ ರೈಲು ಹಿಡಿಯುವ ಪರಿಸ್ಥಿತಿ ಉಂಟಾಗಿದ್ದು, ಇದರಿಂದ ಹೆಚ್ಚುವರಿ ಖರ್ಚು, ಸಮಯ ನಷ್ಟ ಹಾಗೂ ಅಸೌಕರ್ಯ ಎದುರಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಹಲವರಿಗೆ ಆಗಲಿದೆ ಉಪಯೋಗ

ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಚಿಕಿತ್ಸೆಗಾಗಿ ಪ್ರಯಾಣಿಸುವ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗವನ್ನು ಬಳಸುತ್ತಿರುವುದರಿಂದ ನಿಲುಗಡೆ ಸೌಲಭ್ಯ ಅತ್ಯಂತ ಅವಶ್ಯಕ ಎಂದು ಪಂಚಾಯತ್ ಅಧ್ಯಕ್ಷರು ಗಮನ ಸೆಳೆದಿದ್ದಾರೆ.