Rainfall: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವರುಣನ ಆರ್ಭಟ- ಇನ್ನೂ 5 ದಿನ ಮಳೆ ಎಚ್ಚರಿಕೆ | Heavy rainfall for next 5 days in Dakshina Kannada District 

Rainfall: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವರುಣನ ಆರ್ಭಟ- ಇನ್ನೂ 5 ದಿನ ಮಳೆ ಎಚ್ಚರಿಕೆ | Heavy rainfall for next 5 days in Dakshina Kannada District 

Last Updated:

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಾದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಮೂಡಬಿದಿರೆ, ಕಡಬ, ಬಂಟ್ವಾಳ ತಾಲೂಕುಗಳಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣ ಮತ್ತೆ ತನ್ನ ಆರ್ಭಟ ತೋರಿಸುತ್ತಿದ್ದಾನೆ.ಇಡೀ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಮಳೆಯ ಅಬ್ಬರಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಭಾನುವಾರದಿಂದ ಈವರೆಗೆ ಇಡೀ ಜಿಲ್ಲೆಯಾದ್ಯಂತ ಜೋರಾದ ಗಾಳಿ ಮಿಂಚು-ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಂಗಳೂರು ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿ ಬೊಬ್ಬೆರೆದಿದೆ.

ಅಕ್ಟೋಬರ್ 15 ರ ತನಕ ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಕ್ಟೋಬರ್ 10ರಿಂದ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳನ್ನೂ ಊಹಿಸಲಾಗಿದೆ.

ಇದನ್ನೂ ಓದಿ: Uttara Kannada: ಸಂಭ್ರಮದಿಂದ ನಡೆದ ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬ

ಮಳೆ ಹಲವು ಬೆಳೆಗಳಿಗೆ ಮಾರಕ ತಂದಿದ್ದು, ರೈತರು ಚಿಂತೆಗೀಡಾಗಿದ್ದಾರೆ. ಭತ್ತದ ಎಣೇಲು ಬೆಳೆಯ ಪೈರಿಗೆ ಮಳೆ ನಷ್ಟ ತಂದಿದೆ. ಭಾರೀ ಗಾಳಿ ಮಳೆಗೆ ಪೈರುಗಳೆಲ್ಲಾ ನೆಲ ಕಚ್ಚಿವೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಾದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಮೂಡಬಿದಿರೆ, ಕಡಬ, ಬಂಟ್ವಾಳ ತಾಲೂಕುಗಳಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.

ಮಂಗಳೂರು ನಗರದಲ್ಲೂ ಅನಿರೀಕ್ಷಿತ ಮಳೆ ಜನರಿಗೆ ಕಿರಿ ಕಿರಿ ಉಂಟು ಮಾಡಿದೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶದ ರಸ್ತೆಗಳು ಜಲಾವೃತವಾಗಿವೆ. ದಸರಾ ಸಂಭ್ರಮಕ್ಕೆಂದು ನಗರಕ್ಕೆ ಬಂದವರು ನಿರಂತರ ಮಳೆಯ ನಡುವೆ ಪರದಾಡಿದ್ದಾರೆ.