Last Updated:
ರಾಜ್ ಬಿ ಶೆಟ್ಟಿ ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ಬಿಸಿಲೆ ಪ್ರದೇಶದಲ್ಲಿ ಹೊಸ ಸಿನಿಮಾ ಶೂಟಿಂಗ್ ನಡೆಸುತ್ತಾ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ: ಸು ಫ್ರಮ್ ಸೋ ಸಿನಿಮಾ (Film) ಪ್ರೇಕ್ಷಕರನ್ನು ಎಷ್ಟು ನಗಿಸಿದೆ ಎಂದು ಎಲ್ಲರಿಗೂ ಗೊತ್ತೆ ಇದೆ. ಅದರ ನಿರ್ಮಾಪಕರು, ಖ್ಯಾತ ಸಿನಿಮಾ ನಟ (Hero), ನಿರ್ದೇಶಕ ರಾಜ್.ಬಿ.ಶೆಟ್ಟಿ (Raj B Shetty) ತನ್ನ ಹೊಸ ನಿನಿಮಾ ನಿರ್ಮಾಣದ ಬ್ಯುಸಿಯಲ್ಲಿದ್ದಾರೆ. ಈ ಬಾರಿ ಇನ್ನೊಂದು ಡಿಫರೆಂಟ್, ಇಂಟ್ರೆಸ್ಟಿಂಗ್ ಸ್ಟೋರಿಯೊಂದಿಗೆ ಸಿನಿಪ್ರಿಯರ ಸೆಳೆಯಲು ರೆಡಿಯಾಗುತ್ತಿರುವ ರಾಜ್ ಶೆಟ್ಟಿ ಕಳೆದ ಒಂದು ವಾರದಿಂದೀಚೆಗೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಬ್ರಹ್ಮಣ್ಯ, ಬಿಸಿಲೆ ಪರಿಸರದಲ್ಲಿ ಬೀಡು ಬಿಟ್ಟಿದ್ದಾರೆ. ಹೊಸ ಚಿತ್ರದ ಶೂಟಿಂಗ್ ಬಿಸಿಲೆ ಘಾಟ್ ಭಾಗದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ರಾತ್ರಿ ವೇಳೆಯಲ್ಲಿ ರಾಜ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಚಿತ್ರತಂಡದ ಜೊತೆ ಆಗಮಿಸಿ ಪೂಜೆಯಲ್ಲಿ ಭಾಗಿಯಾಗಿರುವ ರಾಜ್ ಶೆಟ್ಟಿ ತನ್ನ ಹೊಸ ಸಿನಿಮಾ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಯಶಸ್ವಿಯಾಗಲಿ ಎಂದೂ ದೇವರಲ್ಲಿ ಬೇಡಿದ್ದಾರೆ.
ಕರಾವಳಿ ಭಾಗದಲ್ಲಿ ಎಲ್ಲರಿಗೂ ಚಿರಪರಿಚಿತವಾಗಿರುವ ಸಿಂಪಲ್ ಸ್ಟಾರ್ ರಾಜ್ ಶೆಟ್ಟಿ ದೇವಸ್ಥಾನದಲ್ಲಿ ಸಾಮಾನ್ಯ ಭಕ್ತನಂತೆ ಬಂದು ಪೂಜೆ ನೆರವೇರಿಸಿದ್ದಾರೆ. ಬಹುಬಾಷಾ ಸಿನಿಮಾದಲ್ಲಿ ನಟಿಸಿ ಯಶಸ್ವಿ ನಟನಾಗಿ ಗುರುತಿಸಿಕೊಂಡಿರುವ ರಾಜ್ ಶೆಟ್ಟಿ ಯಾವುದೇ ವಿಶೇಷ ಭದ್ರತೆ, ಶೋಕಿ ತೋರಿಸದೆ ಜನಸಾಮಾನ್ಯತೆ ದೇವಸ್ಥಾನಕ್ಕೆ ಬಂದಿರೋದು ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರಿಗೂ ಖುಷಿ ಕೊಟ್ಟಿದೆ. ದೇವಸ್ಥಾನದಲ್ಲಿದ್ದ ಭಕ್ತರೊಂದಿಗೆ ಮುಕ್ತವಾಗಿ ಮಾತನಾಡುತ್ತಾ, ಕೆಲವರೊಂದಿಗೆ ತುಳು ಭಾಷೆಯಲ್ಲಿ, ಇನ್ನು ಕೆಲವರೊಂದಿಗೆ ಕನ್ಮಡ ಭಾಷೆಯಲ್ಲಿ ಆತ್ಮೀಯವಾಗಿ ಮಾತನಾಡೋ ಮೂಲಕ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಜನಮೆಚ್ಚುಗೆ ಗಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಕ್ಕೂ ಒಂದು ತಿಂಗಳ ಮೊದಲು ಇದೇ ಕುಲ್ಕುಂದ ಬಸವೇಶ್ವರ ದೇವಸ್ಥಾನದಲ್ಲಿ ಜಾನುವಾರು ಜಾತ್ರೆಗೆ ಚಾಲನೆ ದೊರೆಯುತ್ತದೆ. ಕೆಲವು ವರ್ಷಗಳ ಹಿಂದಿನವರೆಗೂ ಇಲ್ಲಿ ನಡೆಯುವ ಜಾನುವಾರು ಜಾತ್ರೆ ಭಾರೀ ಜನಮನ್ನಣೆ ಗಳಿಸಿತ್ತು.
ಆದರೆ ಜಾನುವಾರು ಜಾತ್ರೆಯಲ್ಲಿ ಖರೀದಿಯಾಗುವ ಜಾನುವಾರುಗಳು ಖಸಾಯಿಖಾನೆಗಳಿಗೆ ಸೇರುತ್ತಿದೆ ಎನ್ನುವ ಆರೋಪ ಬಂದ ಹಿನ್ನಲೆಯಲ್ಲಿ ಈ ಜಾನುವಾರು ಜಾತ್ರೆಯನ್ನು ರದ್ದುಗೊಳಿಸಿ, ಇದೀಗ ಕೇವಲ ಸಂಪ್ರದಾಯದಂತೆ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಇದೇ ದೇವಸ್ಥಾನಕ್ಕೆ ರಾಜ್ ಶೆಟ್ಟಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು, ಹೊಸ ನಿನಿಮಾದಲ್ಲಿ ಈ ಬಗ್ಗೆ ಉಲ್ಲೇಖಗಳಿವೆಯೇ ಅನ್ನೋದನ್ನ ಕಾದು ನೋಡಬೇಕಿದೆ.
Dakshina Kannada,Karnataka
November 19, 2025 8:13 AM IST