Last Updated:
ರಜತ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಟಿ20ಯಂತೆ ಬ್ಯಾಟಿಂಗ್ ಮಾಡಿ ಕೇವಲ 80 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಇದರಲ್ಲಿ 18 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ರಜತ್ ಜೊತೆಗೆ, ನಾಯಕನಿಗೆ ಸಾಥ್ ನೀಡಿದ ಡ್ಯಾನಿಶ್ ಮಾಲೆವಾರ್ ದ್ವಿಶತಕದ ಸನಿಹ ಬಂದು ನಿಂತಿದ್ದಾರೆ.
ದುಲೀಪ್ ಟ್ರೋಫಿಯ (Duleep Trophy) ಎರಡನೇ ಕ್ವಾರ್ಟರ್ ಫೈನಲ್‌ನಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಸ್ಫೋಟಕ ಶತಕ ಬಾರಿಸಿದ್ದಾರೆ. ಈ ಟೂರ್ನಿಯಲ್ಲಿ ಕೇಂದ್ರ ವಲಯದ (Central Zone) ನಾಯಕರಾಗಿರುವ ರಜತ್, ಇಂದು (ಆಗಸ್ಟ್ 28) ಈಶಾನ್ಯ ವಲಯದ (Northeast) ವಿರುದ್ಧ ಪ್ರಾರಂಭವಾದ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ರಜತ್ ಜೊತೆಗೆ, ಮತ್ತೊಬ್ಬ ಸೆಂಟ್ರಲ್ ಝೋನ್ ಆಟಗಾರ ಕೂಡ ಈ ಪಂದ್ಯದಲ್ಲಿ ಶತಕ ಗಳಿಸಿ ನಾಯಕನಿಗೆ ಸಾಥ್ ನೀಡಿದರು.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಗ್ರೌಂಡ್-ಬಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ, ಟಾಸ್ ಗೆದ್ದ ಈಶಾನ್ಯ ವಲಯವು ಟಾಸ್ ಗೆದ್ದು ಕೇಂದ್ರ ವಲಯವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈಶಾನ್ಯ ವಲಯದ ಆಹ್ವಾನದಂತೆ ಬ್ಯಾಟಿಂಗ್‌ಗೆ ಇಳಿದ ಕೇಂದ್ರ ವಲಯವು ಆರಂಭದಿಂದಲೇ ಆಘಾತವನ್ನು ಅನುಭವಿಸಿತು. ತಂಡದ ಮೊತ್ತ ಕೇವಲ 4 ರನ್ಗಳಾಗುವಷ್ಟರಲ್ಲಿ ಸೆಂಟ್ರಲ್ ಝೋನ್ ತಂಡದ ಆರಂಭಿಕ ಆಯುಷ್ ಪಾಂಡೆ ವಿಕೆಟ್ ಪಡೆದು ಶಾಕ್ ನೀಡಿದರು.
ರಜತ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಟಿ20ಯಂತೆ ಬ್ಯಾಟಿಂಗ್ ಮಾಡಿ ಕೇವಲ 80 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಇದರಲ್ಲಿ 18 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಒಟ್ಟಾರೆ 96 ಎಸೆತಗಳಲ್ಲಿ 125 ರನ್ಗಳಿಸಿದರು. ರಜತ್ ಜೊತೆಗೆ, ನಾಯಕನಿಗೆ ಸಾಥ್ ನೀಡಿದ ಡ್ಯಾನಿಶ್ ಮಾಲೆವಾರ್ ದ್ವಿಶತಕದ ಸನಿಹ ಬಂದು ನಿಂತಿದ್ದಾರೆ. ಅವರು 219 ಎಸೆತಗಳಲ್ಲಿ 35 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 198 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಮಾಲೆವಾರ್ ನಾಯಕ ರಜತ್ ಪಾಟಿದಾರ್ ಜೊತೆ 111 ರನ್‌ಗಳ ಜೊತೆಯಾಟ ನಡೆಸಿದರು. ಇದೀಗ 4ನೇ ವಿಕೆಟ್ ಜೊತೆಯಾಟದಲ್ಲಿ 85 ರನ್ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ವಲಯ ಹಾಗೂ ಪೂರ್ವ ವಲಯ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಉತ್ತರ ವಲಯ 308 6 ವಿಕೆಟ್ ಕಳೆದುಕೊಂಡು ರನ್ಗಳಿಸಿದೆ. ಶುಭಂ ಕಜುರಿಯಾ 26, ನಾಯಕ ಅಂಕಿತ್ ಶರ್ಮಾ 30, ಯಶ್ ಧುಲ್ 39, ಆಯುಷ್ ಬಡೋನಿ 63, ಸಾಹಿಲ್ ಲೋಟ್ರಾ 19, ನಿಶಾಂತ್ ಸಿಂಧು ಅಜೇಯ 42 ಹಾಗೂ ಮಯಾಂಕ್ ಡಾಗರ್ ಅಜೇಯ 28 ರನ್ಗಳಿಸಿದ್ದಾರೆ.
August 28, 2025 4:56 PM IST