Last Updated:
10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಚೇತನ್ ಸಕಾರಿಯ 29 ರನ್ಗಳಿಸಿ ತಮ್ಮ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು. ಕೇವಲ ಇನ್ನು ಒಂದು ದಿನದ ಆಟ ಬಾಕಿ ಉಳಿದಿರುವುದರಿಂದ ಈ ಪಂದ್ಯ ಡ್ರಾ ಆಗುವುದು ಬಹುತೇಕ ಖಚಿತವಾಗಿದ್ದು, ಕರ್ನಾಟಕ 3 ಅಂಕ ಪಡೆಯುವ ಅವಕಾಶವನ್ನ ಕಳೆದುಕೊಂಡಿದೆ.
ಕರ್ನಾಟಕ ಮತ್ತು ಸೌರಾಷ್ಟ್ರ (Karnataka vs Saurashtra) ನುಡುವಿನ ರಣಜಿ (Ranji) ಪಂದ್ಯದ 3ನೇ ದಿನ ರೋಚಕ ಹಣಾಹಣಿಗೆ ಸಾಕ್ಷಿಯಾಗಿದೆ. ಎರಡೂ ತಂಡಗಳು ಇನ್ನಿಂಗ್ಸ್ ಮುನ್ನಡೆ ಪಡೆಯಲು ಅತ್ಯುತ್ತಮವಾಗಿ ಪೈಪೋಟಿ ನೀಡಿದವು. ಆದರೆ ಚೇತನ್ ಸಕಾರಿಯಾ ಕೊನೆಯಲ್ಲಿ ಸಿಡಿಸಿದ ಒಂದು ಸಿಕ್ಸರ್ ಕರ್ನಾಟಕಕ್ಕೆ ಹಿನ್ನಡೆಯನ್ನುಂಟು ಮಾಡಿತು. ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ತಂಡ 372 ರನ್ಗಳಿಸಿದರೆ, ಇದಕ್ಕೆ ಉತ್ತರವಾಗಿ ಸೌರಾಷ್ಟ್ರ 376ಕ್ಕೆ ಆಲೌಟ್ ಆಯಿತು. ಕೊನೆಯಲ್ಲಿ ಚೇತನ್ ಸಕಾರಿಯ 29 ರನ್ಗಳಿಸಿ ತಮ್ಮ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು. ಕೇವಲ ಇನ್ನು ಒಂದು ದಿನದ ಆಟ ಬಾಕಿ ಉಳಿದಿರುವುದರಿಂದ ಈ ಪಂದ್ಯ ಡ್ರಾ ಆಗುವುದು ಬಹುತೇಕ ಖಚಿತವಾಗಿದ್ದು, ಕರ್ನಾಟಕ 3 ಅಂಕ ಪಡೆಯುವ ಅವಕಾಶವನ್ನ ಕಳೆದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕರ್ನಾಟಕ ತಂಡ ದೇವದತ್ ಪಡಿಕ್ಕಲ್ 96 ರನ್, ಕರುಣ್ ನಾಯರ್ 73, ಸ್ಮರಣ್ ರವಿಚಂದ್ರನ್ 77 ಹಾಗೂ ಶ್ರೇಯಸ್ ಗೋಪಾಲ್ 56, ಶೇಖರ್ ಶೆಟ್ಟಿ ಸಿಡಿಸಿದ 41 ರನ್ಗಳ ನೆರವಿನಿಂದ 372 ರನ್ಗಳಿಸಿತ್ತು. ಧರ್ಮೇಂದ್ರ ಜಡೇಜಾ 124 ರನ್ಗಳಿಗೆ 7 ವಿಕೆಟ್ ಪಡೆದು ಕರ್ನಾಟಕ ದೊಡ್ಡ ಮೊತ್ತ ಪೇರಿಸಲು ತಡೆಗೋಡೆಯಾದರು. ಜಯದೇವ್ ಉನಾದ್ಕಟ್ ಯುವರಾಜ್ಸಿನ್ಹಾ ದೋಡಿಯಾ ಹಾಗೂ ಸಮ್ಮರ್ ಗಜ್ಜರ್ ತಲಾ 1 ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್ ಆರಂಭಿಸಿದ ಸೌರಾಷ್ಟ್ರ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 39.4 ಓವರ್ಗಳಲ್ಲಿ 140 ರನ್ಗಳಿಸಿತು. ಈ ಸಂದರ್ಭದಲ್ಲಿ ಸೌರಾಷ್ಟ್ರ ಸಂಪೂರ್ಣ ಪ್ರಾಬಲ್ಯ ಸಾಧಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಂತರ ಶ್ರೇಯಸ್ ಗೋಪಾಲ್ ಎಲ್ಲರ ಲೆಕ್ಕಾಚಾರವನ್ನ ಉಲ್ಟಾ ಮಾಡಿದರು. 41 ರನ್ಗಳಿಸಿದ್ದ ಹಾರ್ವಿಕ್ ದೇಸಾಯಿಯನ್ನ ಮೊಹ್ಶಿನ್ ಖಾನ್ ವಿಕೆಟ್ ಉಡಾಯಿಸಿ ಬ್ರೇಕ್ ಕೊಟ್ಟರೆ, ನಂತರ ಗೋಪಾಲ್ 148 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ 90 ರನ್ಗಳಿಸಿದ್ದ ಚಿರಾಗ್ ಜನಿ ವಿಕೆಟ್ ಪಡೆದು ಮತ್ತೊಂದು ಬ್ರೇಕ್ ನೀಡಿದರು.
ಆರಂಭಿಕರ ನಂತರ ಬಂದ ಜಯ್ ಗೋಹ್ಲಿ ಕೇವಲ 3 ರನ್ಗಳಿಸಿ ಗೋಪಾಲ್ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ಅನ್ಶ್ ಗೋಸಾಯ್ 19 ರನ್ಗಳಿಸಿ ಸ್ಮರಣ್ಗೆ ಕ್ಯಾಚ್ ನೀಡಿದರು.
2ನೇ ದಿನದಾಟಕ್ಕೆ 200 ರನ್ಗಳಿಸಿದ್ದ ಸೌರಾಷ್ಟ್ರ 4 ವಿಕೆಟ್ ಕಳೆದುಕೊಂಡಿತ್ತು. ಮುನ್ನಡೆಗಾಗಿ 3ನೇ ದಿನ ಇನ್ನೂ 173 ರನ್ಗಳಿಸಬೇಕುತ್ತು. ನಿನ್ನಡೆ ಬ್ಯಾಟಿಂಗ್ ಕಾಯ್ಸದಿರಿಸಿದ್ದ ಅರ್ಪಿತ್ ವಾಸವದಾ ಹಾಗೂ ಪ್ರೇರಕ್ ಮಂಕಡ್ ಇಂದು 66 ರನ್ ಸೇರಿಸಿದರು, ಮಂಕಡ್ 27 ರನ್ಗಳಿಸಿ ಗೋಪಾಲ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಅರ್ಪಿತ್ ಜೊತೆ ಸೇರಿದ ಗಜ್ಜರ್ 5ನೇ ವಿಕೆಟ್ಗೆ 54 ರನ್ ಸೇರಿಸಿದರು. ಈ ಹಂತದಲ್ಲಿ ವಾಸವದಾ ಕೂಡ 58 ರನ್ಗಳಿಸಿ ಗೋಪಾಲ್ಗೆ 5ನೇ ಬಲಿಯಾದರು.
ಅರ್ಪಿತ್ ವಿಕೆಟ್ ಬೀಳುತ್ತಿದ್ದಂತೆ ಕರ್ನಾಟಕ ತಂಡ ಮೇಲುಗೈ ಸಾಧಿಸಿತು. 234ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಸೌರಾಷ್ಟ್ರ ಗೋಪಾಲ್ ದಾಳಿಗೆ ತತ್ತರಿಸಿ 318 ರನ್ಗಳಾಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ಇದರಲ್ಲಿ 6 ವಿಕೆಟ್ ಗೋಪಾಲ್ ಪಡೆದರು. ಮುನ್ನಡೆ ಪಡೆಯಲು ಸೌರಾಷ್ಟ್ರಕ್ಕೆ ಇನ್ನೂ55 ರನ್ಗಳ ಅವಶ್ಯಕತೆ ಇತ್ತು. ಆದರೆ ಗಜ್ಜರ್ 122 ಎಸೆತಗಳಲ್ಲಿ 45 ರನ್, 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಚೇತನ್ ಸಕಾರಿಯಾ 72 ಎಸೆತಗಳಲ್ಲಿ 3 ಸಿಕ್ಸರ್ಗಳ ನೆರವಿನಿಂದ 29 ರನ್ಗಳಿಸಿ 4 ರನ್ಗಳ ಮುನ್ನಡೆ ಪಡೆಯಲು ನೆರವಾದರು.
ಸಕಾರಿಯಾ 9ನೇ ವಿಕೆಟ್ಗೆ ಗಜ್ಜರ್ ಜೊತೆಗೆ 24 ರನ್ ಹಾಗೂ 10ನೇ ವಿಕೆಟ್ ಜೊತೆಯಾಟದಲ್ಲಿ ಯುವರಾಜ್ಸಿನ್ಹಾ ಜೊತೆಗೆ 34 ರನ್ಗಳ ಜೊತೆಯಾಟ ನಡೆಸಿ ಮುನ್ನಡೆ ತಂಡದುಕೊಡಲು ನೆರವಾದರು. ಶ್ರೇಯಾಸ್ ಗೋಪಾಲ್ 8 ವಿಕೆಟ್ ಪಡೆದರೆ, ಶಿಖರ್ ಶೆಟ್ಟಿ ಹಾಗೂ ಮೊಹ್ಶಿನ್ ಖಾನ್ ತಲಾ 1 ವಿಕೆಟ್ ಪಡೆದರು.
ಕರ್ನಾಟಕ ತಂಡ 3ನೇ ದಿನದಾಟದ ಅಂತ್ಯಕ್ಕೆ 28 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 89 ರನ್ಗಳಿಸಿದೆ. ನಾಯಕ ಮಯಾಂಕ್ ಅಗರ್ವಾಲ್ ಅಜೇಯ 31, ದೇವದತ್ ಪಡಿಕ್ಕಲ್ ಅಜೇಯ 18 ರನ್ಗಳಿಸಿದರು. ನಿಕಿನ್ ಜೋಶ್ 34 ರನ್ಗಳಿಸಿ ಔಟ್ ಆದರು.
October 17, 2025 4:47 PM IST