Last Updated:
ಟಾಸ್ ಗೆದ್ದ ಕೇರಳ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಬಿಟ್ಟು ಮಹಾರಾಷ್ಟ್ರ ಸೇರಲು ಹೊರಟ ಪೃಥ್ವಿ ಶಾ, ಈ ತಂಡದೊಂದಿಗೆ ತನ್ನ ಅದೃಷ್ಟ ಬದಲಾಗುತ್ತದೆ ಎಂದು ಆಶಿಸಿದ್ದರು. ಆದರೆ ಅದು ಆಗಲಿಲ್ಲ. ಪಂದ್ಯದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಕೇರಳದ ಎಂಡಿ ನಿದೀಶ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಆದರು. ಆ ನಂತರ ಬಂದ ಮೂವರು ಕೂಡ ಡಕ್ ಆದರು.
025ರ ರಣಜಿ ಟ್ರೋಫಿ (Ranji Trophy) ಬುಧವಾರದಿಂದ ಆರಂಭವಾಗಿದ್ದು, ಏಕಕಾಲದಲ್ಲಿ ಮೊದಲ ಸುತ್ತಿನಲ್ಲಿ 16 ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯಗಳಲ್ಲಿ ಕೇರಳ ಮತ್ತು ಮಹಾರಾಷ್ಟ್ರ (Kerala vs Maharashtra) ನಡುವಿನ ಪಂದ್ಯ ರೋಚಕ ಆರಂಭ ಪಡೆದುಕೊಂಡಿದೆ. ಎರಡು ತಂಡಗಳಲ್ಲೂ ಸ್ಟಾರ್ ಆಟಗಾರರಿದ್ದು, ಈ ಪಂದ್ಯ ಎಲ್ಲರ ಗಮನ ಸೆಳೆದಿತ್ತು. ಅಲ್ಲದೆ ಪೃಥ್ವಿ ಶಾ (Prithvi Shaw) ಮುಂಬೈ ಬಿಟ್ಟು ಮಹರಾಷ್ಟ್ರ ಸೇರಿಕೊಂಡಿದ್ದರಿಂದ ಈ ಪಂದ್ಯದತ್ತಾ ಹಲವು ಕ್ರಿಕೆಟ್ ಪ್ರಿಯರು ಆಕರ್ಷಿತರಾಗಿದ್ದರು.
ಟಾಸ್ ಗೆದ್ದ ಕೇರಳ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಬಿಟ್ಟು ಮಹಾರಾಷ್ಟ್ರ ಸೇರಲು ಹೊರಟ ಪೃಥ್ವಿ ಶಾ, ಈ ತಂಡದೊಂದಿಗೆ ತನ್ನ ಅದೃಷ್ಟ ಬದಲಾಗುತ್ತದೆ ಎಂದು ಆಶಿಸಿದ್ದರು. ಆದರೆ ಅದು ಆಗಲಿಲ್ಲ. ಪಂದ್ಯದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಕೇರಳದ ಎಂಡಿ ನಿದೀಶ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಆದರು. ಅವರು ಕೇವಲ ನಾಲ್ಕು ಎಸೆತಗಳನ್ನು ಮಾತ್ರ ಆಡುವಲ್ಲಿ ಯಶಸ್ವಿಯಾದರು. ಭಾರತೀಯ ತಂಡಕ್ಕೆ ಮರಳಲು ಉತ್ಸುಕರಾಗಿದ್ದ ಪೃಥ್ವಿ ಶಾ, ಹೊಸ ರಣಜಿ ಟ್ರೋಫಿ ಋತುವಿಗೆ ಕೆಟ್ಟ ಆರಂಭವನ್ನು ಪಡೆದರು.
ಕೇರಳ ಬೌಲರ್‌ಗಳ ದಾಳಿ ಅಲ್ಲಿಗೆ ನಿಲ್ಲಲಿಲ್ಲ. ಅವರು ಮಹಾರಾಷ್ಟ್ರದ ಅಗ್ರ ಕ್ರಮಾಂಕವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು. ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಕೂಡ ಪೃಥ್ವಿ ಶಾ ರಂತೆ ಶೂನ್ಯಕ್ಕೆ ಔಟಾದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಾಯಕ ಅಂಕಿತ್ ಬಾವ್ನೆ ಕೂಡ ಬಾಸಿಲ್ ಬೌಲಿಂಗ್ನಲ್ಲಿ ಶೂನ್ಯಕ್ಕೆ ಔಟಾದರು. ಹೀಗಾಗಿ, ಮಹಾರಾಷ್ಟ್ರ ಕೇವಲ ಐದು ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು, ಮೊದಲ ಐವರಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರು. 23 ಎಸೆತಗಳಲ್ಲಿ 12 ರನ್ ಗಳಿಸಿ ನಿಧೇಶ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದ ಸೌರಭ್ ನವಲೆ ರೂಪದಲ್ಲಿ ಮತ್ತೊಂದು ವಿಕೆಟ್ ಪತನವಾಯಿತು. ಮಹಾರಾಷ್ಟ್ರ 18 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಇದರಲ್ಲಿ ನಾಲ್ವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು, ಕ್ರಿಕೆಟ್ ಜಗತ್ತಿನಲ್ಲಿ ಅಚ್ಚರಿಗೆ ಕಾರಣವಾಯಿತು.
18ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ಅನುಭವಿ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಮತ್ತು ಜಲಜ್ ಸಕ್ಸೇನಾ ನಿಧಾನವಾಗಿ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. ಇವರಿಬ್ಬರು 35.4 ಓವರ್ಗಳ ಕಾಲ ಬ್ಯಾಟಿಂಗ್ 122 ರನ್ಗಳನ್ನ ಸೇರಿಸಿದರು. ಸಕ್ಸೇನಾ 106 ಎಸೆತಗಳಲ್ಲಿ 4 ಬೌಂಡರಿ ಸಹಿತ 49 ರನ್ಗಳಿಸಿ ಅವರೂ ಕೂಡ ನಿದೇಶ್ಗೆ ವಿಕೆಟ್ ಒಪ್ಪಿಸಿದರು.
ಕೇರಳ ಪರ ನೆಡುಮಂಕುಳಿ ಬಾಸಿಲ್ 57ಕ್ಕೆ3, ಎಂಡಿ ನಿಧೀಶ್ 49ಕ್ಕೆ5,ಇಡೆನ್ ಆಪಲ್ ಹಾಗೂ ಅಂಕಿತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
October 16, 2025 4:32 PM IST