Rat Snake: ಕೇರೆ ಹಾವು ನಮಗೆ ತೊಂದರೆ ಮಾಡುತ್ತಾ? ಈ ಹಾವಿನ ಬಾಲ ನಿಜಕ್ಕೂ ಅಪಾಯಕಾರಿನಾ? | DakshinaKannada snake expert debunks myths about Rat snakes | ದಕ್ಷಿಣ ಕನ್ನಡ

Rat Snake: ಕೇರೆ ಹಾವು ನಮಗೆ ತೊಂದರೆ ಮಾಡುತ್ತಾ? ಈ ಹಾವಿನ ಬಾಲ ನಿಜಕ್ಕೂ ಅಪಾಯಕಾರಿನಾ? | DakshinaKannada snake expert debunks myths about Rat snakes | ದಕ್ಷಿಣ ಕನ್ನಡ

Last Updated:

ಕೃಷಿಕರ ಸ್ನೇಹಿತ ಕೇರೆ ಹಾವುಗಳು ಇಲಿ-ಹೆಗ್ಗಣ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ, ಆದರೆ ತಪ್ಪು ಕಲ್ಪನೆಗಳಿಂದ ಜನರು ಅವುಗಳನ್ನು ಕೊಲ್ಲುತ್ತಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣಕನ್ನಡ: ಮಳೆಗಾಲದಲ್ಲಿ (Rainy Season) ಹಾವುಗಳು ಬೆಚ್ಚಗಿರುವ ಜಾಗವನ್ನು ಹುಡುಕಿಕೊಂಡು ಬರೋದು ಸಹಜ. ಹೀಗೆ ಬೆಚ್ಚಗಿನ ಜಾಗದಲ್ಲಿ (Warm Place) ಇರುವ ಹಾವಿಗೆ ತಿಳಿಯದೆ ತುಳಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅಂದ ಹಾಗೆ ಇದು ವಿಷಕಾರಿ ಹಾವುಗಳಿಗೆ (Snake) ಮಾತ್ರ ಅನ್ವಯವಾಗುತ್ತೆ. ಭೂಮಿ ಮೇಲೆ ವಿಷಕಾರಿಯಲ್ಲದ ಹಲವು ಜಾತಿಯ ಹಾವುಗಳಿದ್ದು, ಅವುಗಳಲ್ಲಿ ಕೇರೆ ಹಾವು (Rat Snake) ಕೂಡಾ ಒಂದು. ಮನುಷ್ಯನಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡದೆ ಒಂದು ಪ್ರಕಾರದಲ್ಲಿ ಮನುಷ್ಯ ಸ್ನೇಹಿಯಾಗಿ ಕೇರೆ ಹಾವುಗಳಿವೆ.

ನಿಜವಾಗಿಯೂ ಕೇರೆ ಹಾವು ಅಪಾಯಕಾರಿಯಾ?!

ಕೃಷಿ ಭೂಮಿ ಹಾಗೂ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡುವ ಜಾಗಕ್ಕೆ ಇಲಿ-ಹೆಗ್ಗಣಗಳ ತೊಂದರೆ ಹೇಳತೀರದು. ಅಂತಹ ಜಾಗದಲ್ಲೇ ಹೆಚ್ಚಾಗಿ ಠಿಕಾಣಿ ಹೂಡುವ ಈ ಕೇರೆ ಹಾವುಗಳು ಇಲಿ-ಹೆಗ್ಗಣಗಳ ಸಂತತಿಯನ್ನೇ ಸದ್ದಿಲ್ಲದೆ ಇಲ್ಲದಾಗಿಸುತ್ತೆ ಈ ಕೇರೆ ಹಾವುಗಳು. ಕೇರೆ‌ ಹಾವುಗಳ‌ ಬಗ್ಗೆ ಹಲವು ರೀತಿಯ ತಪ್ಪು ಅಭಿಪ್ರಾಯಗಳೂ ಇದ್ದು, ಇವುಗಳು ತಮ್ಮ ಬಾಲದಿಂದ ಹೊಡೆಯುತ್ತವೆ ಅನ್ನೋದು ಇವುಗಳಲ್ಲಿ ಒಂದು.

ಇಲ್ಲಿದೆ ಕೇರೆ ಹಾವಿನ ಸಂಪೂರ್ಣ ಮಾಹಿತಿ

ಹಾಗಾದರೆ ಕೇರೆ ಹಾವುಗಳು ನಿಜವಾಗಿಯೂ ತಮ್ಮ ಬಾಲದ ಮೂಲಕ ಎದುರಾಳಿಗೆ ಹೊಡೆಯುತ್ತದೆಯೋ ಅನ್ನೋದಕ್ಕೆ ಉರಗತಜ್ಞರು ಹೇಳೋದೇ ಬೇರೆ. ಕೇರೆ ಹಾವುಗಳು ಯಾವತ್ತೂ ತಮ್ಮ ಬಾಲದ ಮೂಲಕ ಹೊಡೆಯುವುದಿಲ್ಲ ಎನ್ನುತ್ತಾರೆ ನುರಿತ ಉರಗತಜ್ಞರು. ಕೇರೆ ಹಾವುಗಳು ಅಪಾಯದ ಸಂದರ್ಭದಲ್ಲಿ ಓಡಿ ಹೋಗುವ ಸಂದರ್ಭಗಳಲ್ಲಿ ಕೆಲವೊಮ್ಮೆ ತಮ್ಮ ಬಾಲವನ್ನು ಮೇಲ್ಮುಖವಾಗಿ ಮಾಡಿ ಓಡುತ್ತವೆ. ತಮ್ಮ ಹರಿಯುವ ವೇಗ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೇರೆ ಹಾವುಗಳು ಈ ರೀತಿ ಮಾಡುತ್ತವೆ ವಿನಃ ಆಕ್ರಮಣ ಮಾಡುವ ದೃಷ್ಟಿಯಿಂದ ಈ ರೀತಿ ಮಾಡೋದಿಲ್ಲ ಎನ್ನೋದು ಉರಗತಜ್ಞರ ಅನುಭವದ ಮಾತಾಗಿದೆ.

ದಯಮಾಡಿ ಕೊಲ್ಲದಿರಿ ಪಾಪದ ಹಾವುಗಳನ್ನು