Last Updated:
2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಅಶ್ವಿನ್, ಇದುವರೆಗೆ 221 ಪಂದ್ಯಗಳನ್ನು ಆಡಿದ್ದು, 187 ವಿಕೆಟ್‌ಗಳನ್ನು ಪಡೆದಿದ್ದಾರೆ. ಸಿಎಸ್‌ಕೆ ಜೊತೆಗೆ, ಅವರು ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳನ್ನ ಪ್ರತಿನಿಧಿಸಿದ್ದಾರೆ.
ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಂದ ನಿವೃತ್ತಿ ಘೋಷಿಸಿದ್ದಾರೆ. ವಿದೇಶಿ ಲೀಗ್‌ಗಳಲ್ಲಿ ಆಡುವ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ‘ಇದು ವಿಶೇಷ ದಿನ. ವಿಶೇಷ ಆರಂಭ. ಪ್ರತಿ ಅಂತ್ಯವೂ ಇನ್ನೊಂದಕ್ಕೆ ಹೊಸ ಆರಂಭಕ್ಕೆ ನಾಂದಿ. ಐಪಿಎಲ್‌ನೊಂದಿಗಿನ ನನ್ನ ಸಮಯ ಇಂದು ಕೊನೆಗೊಳ್ಳುತ್ತದೆ. ಆದರೆ ವಿವಿಧ ಟಿ20 ಲೀಗ್‌ಗಳಲ್ಲಿ ಆಟವನ್ನ ಅನ್ವೇಷಿಸುವ ಸಮಯ ಇಂದು ಪ್ರಾರಂಭವಾಗುತ್ತದೆ. ಐಪಿಎಲ್‌ನಲ್ಲಿ ನನಗೆ ಅಚ್ಚುಮೆಚ್ಚಿನ ನೆನಪುಗಳನ್ನು ನೀಡಿದ್ದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಮತ್ತು ಬಿಸಿಸಿಐಗೆ ಧನ್ಯವಾದಗಳು. ನನ್ನ ಮುಂದಿರುವ ಅವಕಾಶಗಳನ್ನು ಆನಂದಿಸಲು ಮತ್ತು ಸದುಪಯೋಗಪಡಿಸಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.
2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಅಶ್ವಿನ್, ಇದುವರೆಗೆ 221 ಪಂದ್ಯಗಳನ್ನು ಆಡಿದ್ದು, 187 ವಿಕೆಟ್‌ಗಳನ್ನು ಪಡೆದಿದ್ದಾರೆ. ಸಿಎಸ್‌ಕೆ ಜೊತೆಗೆ, ಅವರು ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳನ್ನ ಪ್ರತಿನಿಧಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮಧ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಶ್ವಿನ್ ಇದೀಗ ಐಪಿಎಲ್‌ಗೂ ವಿದಾಯ ಹೇಳಿದ್ದಾರೆ.
ಕಳೆದ ವರ್ಷ ಸಿಎಸ್‌ಕೆ ತಂಡಕ್ಕೆ ರೀಎಂಟ್ರಿ ಪ್ರವೇಶ ಪಡೆದ ಅಶ್ವಿನ್ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಅಶ್ವಿನ್ ಅವರನ್ನು ಸಿಎಸ್‌ಕೆ ತಂಡದಿಂದ ತೆಗೆದುಹಾಕುವ ಬಗ್ಗೆ ಚರ್ಚೆ ನಡೆದಿತ್ತು. ಹಾಗಾಗಿ ಮಿನಿ ಹರಾಜಿಗೂ ಮುನ್ನ ಸ್ವತಃ ಅಶ್ವಿನ್ ನಿವೃತ್ತಿ ಘೋಷಿಸಿದ್ದು ಗಮನಾರ್ಹ.
2008 ರಲ್ಲಿ, ಅಶ್ವಿನ್ ಅವರನ್ನು ಸಿಎಸ್‌ಕೆ 12 ಲಕ್ಷ ರೂ.ಗಳಿಗೆ ಖರೀದಿಸಿತ್ತು. ನಂತರ ಅದೇ ಬೆಲೆಗೆ ಮೂರು ಋತುಗಳಿಗೆ ತಂಡದಲ್ಲಿ ಮುಂದುವರೆದಿದ್ದರು. ಈ ಮೂರು ವರ್ಷಗಳ ಅವಧಿಯಲ್ಲಿ ಅವರ ಅಸಾಧಾರಣ ಪ್ರದರ್ಶನದಿಂದಾಗಿ ಅವರ ಬೆಲೆ ಅಪಾರವಾಗಿ ಹೆಚ್ಚಾಯಿತು. 2011 ರ ಹರಾಜಿನಲ್ಲಿ, ಅಶ್ವಿನ್ ಅವರನ್ನು ಸಿಎಸ್‌ಕೆ 3 ಕೋಟಿ 91 ಲಕ್ಷ ರೂ.ಗಳ ಭಾರಿ ಬೆಲೆಗೆ ಮರಳಿ ಖರೀದಿಸಿತು. ಅವರು 2013 ರವರೆಗೆ ಅದೇ ಬೆಲೆಯಲ್ಲಿ ಮುಂದುವರೆದರು. 2014 ರಲ್ಲಿ, ಸಿಎಸ್‌ಕೆ ಅವರನ್ನು ಮತ್ತೆ 7 ಕೋಟಿ 50 ಲಕ್ಷ ರೂ.ಗಳಿಗೆ ಖರೀದಿಸಿತು. 2015 ರ ಋತುವಿನಲ್ಲಿಯೂ ಸಿಎಸ್‌ಕೆ ಪರ ಆಡಿದ್ದ ಅಶ್ವಿನ್, 2016 ರ ಋತುವಿನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ಗೆ ಸ್ಥಳಾಂತರಗೊಂಡರು.
ಪುಣೆ ತಂಡವು ಅವರನ್ನು 7 ಕೋಟಿ 50 ಲಕ್ಷ ರೂ.ಗಳಿಗೆ ಖರೀದಿಸಿತು. 2017 ರ ಸೀಸನ್ ವರೆಗೆ ಆ ತಂಡದಲ್ಲಿ ಆಡಿದ್ದ ಅಶ್ವಿನ್ 2018 ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಥಳಾಂತರಗೊಂಡರು. ಪಂಜಾಬ್ ತಂಡವು ಅವರನ್ನು 7 ಕೋಟಿ 60 ಲಕ್ಷ ರೂ.ಗಳಿಗೆ ಖರೀದಿಸಿತು. 2019 ರವರೆಗೆ ಪಂಜಾಬ್ ಪರ ಆಡಿದ್ದ ಅಶ್ವಿನ್ 2020 ರಲ್ಲಿ ಅದೇ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತೆರಳಿದರು. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ, ಅಶ್ವಿನ್ ಅವರನ್ನು ರಾಜಸ್ಥಾನ ರಾಯಲ್ಸ್ 5 ಕೋಟಿ ರೂ.ಗಳಿಗೆ ಖರೀದಿಸಿತು. 2024 ರವರೆಗೆ ಆ ತಂಡದಲ್ಲಿ ಆಡಿದ್ದ ಅಶ್ವಿನ್ ಕಳೆದ ವರ್ಷ ತಮ್ಮ ತವರು ತಂಡಕ್ಕೆ ಮರಳಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು 9 ಕೋಟಿ 75 ಲಕ್ಷ ರೂ.ಗಳಿಗೆ ಖರೀದಿಸಿತ್ತು. ಇದು ಅಶ್ವಿನ್ ಅವರ ಐಪಿಎಲ್ ವೃತ್ತಿಜೀವನದಲ್ಲಿ ದಾಖಲೆಯ ಬೆಲೆಯಾಗಿದೆ.
August 28, 2025 6:00 PM IST
Ravichandran Ashwin: ಐಪಿಎಲ್ ಸೇರಿ ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ! ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅಶ್ವಿನ್ ಗಳಿಸಿದ್ದೆಷ್ಟು ಗೊತ್ತಾ?