RCB: ಅನ್‌ಬಾಕ್ಸ್ ಈವೆಂಟ್‌ನಲ್ಲೇ ಬಾಲ್‌ ಮೈದಾನದಿಂದ ಹೊರಕ್ಕೆ ಅಟ್ಟಿದ ವಿಂಡೀಸ್ ದೈತ್ಯ! ಈತ ಮಿಂಚಿದ್ರೆ ಕಪ್ ನಮ್ದೇ ಅಂತಿದ್ದಾರೆ ಫ್ಯಾನ್ಸ್ | Romario Shepherd shines with a big six at RCB Unboxing event

RCB: ಅನ್‌ಬಾಕ್ಸ್ ಈವೆಂಟ್‌ನಲ್ಲೇ ಬಾಲ್‌ ಮೈದಾನದಿಂದ ಹೊರಕ್ಕೆ ಅಟ್ಟಿದ ವಿಂಡೀಸ್ ದೈತ್ಯ! ಈತ ಮಿಂಚಿದ್ರೆ ಕಪ್ ನಮ್ದೇ ಅಂತಿದ್ದಾರೆ ಫ್ಯಾನ್ಸ್ | Romario Shepherd shines with a big six at RCB Unboxing event

Last Updated:

ಬೆಂಗಳೂರಿನ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ತಂಡದ ಅನ್‌ಬಾಕ್ಸ್ ಈವೆಂಟ್ ಕಾರ್ಯಕ್ರಮ ಮಾಡಿದೆ. ಕಾರ್ಯಕ್ರಮದಲ್ಲಿ ತಂಡದ ಬಹುತೇಕ ಆಟಗಾರರು ಪಾಲ್ಗೊಂಡಿದ್ದರು.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಐಪಿಎಲ್ 2025ಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 22ರಿಂದ ಮೊದಲ ಮ್ಯಾಚ್ ಆರಂಭವಾಗಲಿದೆ. ಈ ನಡುವೆ ಆರ್‌ಸಿಬಿ (RCB) ಮ್ಯಾನೇಜ್‌ಮೆಂಟ್ ಇಂದು (ಮಾರ್ಚ್ 17) ಬೆಂಗಳೂರಿನ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (M Chinnaswamy International Stadium Bangalore) ತಂಡದ ಅನ್‌ಬಾಕ್ಸ್ ಈವೆಂಟ್ (RCB Unbox Event) ಕಾರ್ಯಕ್ರಮ ಮಾಡಿದೆ. ಕಾರ್ಯಕ್ರಮದಲ್ಲಿ ತಂಡದ ಬಹುತೇಕ ಆಟಗಾರರು ಪಾಲ್ಗೊಂಡಿದ್ದರು. ಈ ವೇಳೆ ವೆಸ್ಟ್ ಇಂಡಿಸ್‌ನ ಆಲ್ರೌಂಡರ್ ಸಿಡಿಸಿದ ಸಿಕ್ಸರ್‌ಗೆ ಅಭಿಮಾನಿಗಳು (RCB fans) ಫಿದಾ ಆಗಿದ್ದಾರೆ.

ರೊಮಾರಿಯೋ ಶೆಫರ್ಡ್ ಸಿಕ್ಸರ್‌ಗೆ ಫಿದಾ

ಅನ್‌ಬಾಕ್ಸ್ ಈವೆಂಟ್ ಕಾರ್ಯಕ್ರಮದಲ್ಲಿ ಆಟಗಾರರು ಅಭಿಮಾನಿಗಳಿಗಾಗಿ ಕೆಲವು ಚಟುವಟಿಕೆಗಳನ್ನು ನಡೆಸಿದರು. ಅದರಲ್ಲಿ ಲಾಂಗ್ ಸಿಕ್ಸರ್ ಸಿಡಿಸುವ ಚಟುವಟಿಕೆ ಕೂಡ ಒಂದಾಗಿದೆ. ಇದರಲ್ಲಿ ವಿಂಡೀಸ್‌ನ ದೈತ್ಯ ಆಲ್ರೌಂಡರ್ ರೊಮಾರಿಯೋ ಶೆಫರ್ಡ್ ಸಿಡಿಸಿದ ಆ ಒಂದು ಸಿಕ್ಸರ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಇದನ್ನೂ ಓದಿ: IPL 2025: ಐಪಿಎಲ್‌ ಇತಿಹಾಸದಲ್ಲೇ ಅದೊಂದು ‘ಬಿಗ್ ಮಿಸ್ಟೇಕ್’! ಧೋನಿಯಿಂದ ಶಾಕಿಂಗ್ ಸ್ಟೇಟ್‌ಮೆಂಟ್

ಈ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್

ಹೌದು, ಅನ್‌ಬಾಕ್ಸ್ ಈವೆಂಟ್‌ನಲ್ಲಿ ರೊಮಾರಿಯೋ ಶೆಫರ್ಡ್ ಸಿಡಿಸಿದ ಒಂದು ಸಿಕ್ಸ್ ಮೈದಾನದಿಂದ ಆಚೆ ಹೋಗಿ ಬಿದ್ದಿದೆ. ಇದನ್ನು ನೋಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಅಷ್ಟೇ ಅಲ್ಲ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಈತ ಈ ಬಾರಿ ತಂಡದಲ್ಲಿ ಆಡಿದ್ರೆ ಕಪ್ ನಮ್ದೇ ಎಂದು ಈಗಾಗಲೇ ಹೇಳುತ್ತಿದ್ದಾರೆ.

ಫ್ಯಾನ್ಸ್ ಮೆಚ್ಚುಗೆಗೆ ಕಾರಣವಾಯ್ತು ಕಿಂಗ್ ಕೊಹ್ಲಿ ಕ್ಯಾಚ್

ಇದರ ಜೊತೆಗೆ ಆರ್‌ಸಿಬಿ ಕ್ರಿಕೆಟಿಗರಿಗೆ ಇನ್ನೂ ಹಲವು ಟಾಸ್ಕ್ ನೀಡಲಾಗಿತ್ತು. ಅದರಲ್ಲಿ ವಿರಾಟ್ ಕೊಹ್ಲಿ ಅವರು ಹಿಡಿದ ಕ್ಯಾಚ್ ಒಂದು ಅಭಿಮಾನಿಗಳನ್ನು ರಂಚಿಸಿತು. ಮೈದಾನದಲ್ಲಿದ್ದ ಆರ್‌ಸಿಬಿ ಕ್ರಿಕೆಟಿಗರು ಕ್ಯಾಚಿಂಗ್ ಚಟುವಟಿಕೆ ನಡೆಸಿದರು. ಈ ವೇಳೆ ಗಗನದೆತ್ತರಕ್ಕೆ ಹೋದ ಚೆಂಡನ್ನು ವಿರಾಟ್ ಕೊಹ್ಲಿ ಓಡಿ ಹೋಗಿ ಹಿಡಿಯುವ ಮೂಲಕ ಅಭಿಮಾನಿಗಳನ್ನು ರಂಚಿಸಿದರು. ಈ ವೇಳೆ ಅಭಿಮಾನಿಗಳು ಕೂಡ ವಿರಾಟ್ ಕೊಹ್ಲಿ ಅವರಿಗೆ ಶಿಳ್ಳೆ ಚಪ್ಪಾಳೆ ಮೂಲಕ ರಂಚಿಸಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

RCB: ಅನ್‌ಬಾಕ್ಸ್ ಈವೆಂಟ್‌ನಲ್ಲೇ ಬಾಲ್‌ ಮೈದಾನದಿಂದ ಹೊರಕ್ಕೆ ಅಟ್ಟಿದ ವಿಂಡೀಸ್ ದೈತ್ಯ! ಈತ ಮಿಂಚಿದ್ರೆ ಕಪ್ ನಮ್ದೇ ಅಂತಿದ್ದಾರೆ ಫ್ಯಾನ್ಸ್