RCB ಹೆಸರು ಹುಟ್ಟಿಕೊಂಡಿದ್ದು ಹೇಗೆ? ವಿಜಯ್ ಮಲ್ಯ ಪ್ಲ್ಯಾನ್ ಕೇಳಿದ್ರೆ ಶಾಕ್ ಆಗ್ತೀರಿ! | Vijay Mallya reveals explosive secret behind RCB name

RCB ಹೆಸರು ಹುಟ್ಟಿಕೊಂಡಿದ್ದು ಹೇಗೆ? ವಿಜಯ್ ಮಲ್ಯ ಪ್ಲ್ಯಾನ್ ಕೇಳಿದ್ರೆ ಶಾಕ್ ಆಗ್ತೀರಿ! | Vijay Mallya reveals explosive secret behind RCB name

Last Updated:

ರಾಯಲ್ ಚಾಲೆಂರ್ಸ್ ಬೆಂಗಳೂರು ಹೆಸರು ನೀಡಿದ್ದರೆ ಬಂದ ಕುರಿತು ವಿಜಯ್ ಮಲ್ಯ ಮಾತನಾಡಿದ್ದು, ಆ ಹೇಳಿಕೆ ವ್ಯಾಪಕ ವೈರಲ್ ಆಗ್ತಾ ಇದೆ. ಹಾಗಿದ್ರೆ ಅವರು ಆರ್‌ಸಿಬಿ ಎಂದು ನಾಮಕರಣ ಮಾಡಿದ್ದರ ಹಿಂದಿನ ಸ್ಫೋಟಕ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ವಿಜಯ ಮಲ್ಯವಿಜಯ ಮಲ್ಯ
ವಿಜಯ ಮಲ್ಯ

ಬರೋಬ್ಬರಿ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅಂತಿಮವಾಗಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಎತ್ತಿಹಿಡಿದಿದೆ. 2025 ರ ಟಿ-20 ಲೀಗ್‌ನ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ (PBKS) ಅನ್ನು ಸೋಲಿಸಿ ಚಾಂಪಿಯನ್ ಆಗಿದೆ. ಐಪಿಎಲ್‌ನ (IPL) ಅತ್ಯಂತ ಜನಪ್ರಿಯ ಫ್ರಾಂಚೈಸಿಯಾಗಿರುವ ಆರ್‌ಸಿಬಿ (RCB) ಚಾಂಪಿಯನ್ ಆದ ಬಳಿಕ ಅನೇಕ ಚರ್ಚೆಗಳು ಆರಂಭವಾಗಿವೆ. 18 ವರ್ಷಗಳ ಈ ಅವಧಿಯಲ್ಲಿ ಹಲವು ಆಟಗಾರರು ಬಂದು ಹೋಗಿದ್ದಾರೆ. ಆದ್ರೆ, ವಿರಾಟ್ ಕೊಹ್ಲಿ (Virat Kohli) ಮಾತ್ರ 18 ವರ್ಷಗಳಿಂದ ತಂಡದ ಭಾಗವಾಗಿದ್ದಾರೆ.

ಈ ನಡುವೆ ತಂಡ ಚಾಂಪಿಯನ್ ಆಗಿರುವ ಕುರಿತು ತಂಡದ ಮಾಜಿ ಮಾಲೀಕ ವಿಜಯ ಮಲ್ಯ ಅವರು ಮಾತನಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ರಾಯಲ್ ಚಾಲೆಂರ್ಸ್ ಬೆಂಗಳೂರು ಹೆಸರು ನೀಡಿದ್ದರೆ ಕುರಿತು ಅವರು ಮಾತನಾಡಿದ್ದು, ಆ ಹೇಳಿಕೆ ವ್ಯಾಪಕ ವೈರಲ್ ಆಗ್ತಾ ಇದೆ. ಹಾಗಿದ್ರೆ ಅವರು ಆರ್‌ಸಿಬಿ ಎಂದು ನಾಮಕರಣ ಮಾಡಿದ್ದರ ಹಿಂದಿನ ಸ್ಫೋಟಕ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

RCB ಹೆಸರಿನ ಹಿಂದಿದೆ ಮಲ್ಯರ ದೂರದೃಷ್ಠಿ

ವಿಜಯ್ ಮಲ್ಯ, ಭಾರತದ ಪ್ರಮುಖ ಉದ್ಯಮಿಯಾಗಿ ಮತ್ತು ಯುನೈಟೆಡ್ ಬ್ರೀವರೀಸ್ (UB) ಗ್ರೂಪ್‌ನ ಮಾಜಿ ಅಧ್ಯಕ್ಷರಾಗಿದ್ದರು. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಖರೀದಿಸಿದರು. ತಂಡಕ್ಕೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ಹೆಸರಿಡುವ ಕುರಿತು ಮಲ್ಯ ತಮ್ಮ ದೂರದೃಷ್ಟಿಯನ್ನು ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. 2025ರ ಐಪಿಎಲ್‌ನಲ್ಲಿ RCBಯ ಐತಿಹಾಸಿಕ ಗೆಲುವಿನ ನಂತರ ಈ ವಿಷಯವು ಮತ್ತೆ ಚರ್ಚೆಗೆ ಬಂದಿದೆ.

ಮದ್ಯದ ಬ್ರಾಂಡಿಂಗ್ ಜೊತೆ ಸ್ಥಳೀಯ ಭಾವನೆಯ ಬೆಸುಗೆ!

ಮಲ್ಯ ಅವರು RCB ತಂಡದ ಹೆಸರಿನ ಹಿಂದಿನ ಉದ್ದೇಶವನ್ನು ತಮ್ಮ UB ಗ್ರೂಪ್‌ನ ಪ್ರಮುಖ ಬ್ರಾಂಡ್‌ಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ. ‘ರಾಯಲ್ ಚಾಲೆಂಜರ್ಸ್’ ಎಂಬ ಹೆಸರು ತಮ್ಮ ಕಂಪನಿಯ ಜನಪ್ರಿಯ ಮದ್ಯದ ಬ್ರಾಂಡ್ ಆಗಿರುವ ‘ರಾಯಲ್ ಚಾಲೆಂಜ್’ನಿಂದ ಪ್ರೇರಿತವಾಯಿತು ಎಂದು ಅವರು ಹೇಳಿದ್ದಾರೆ. “ನಾನು ತಂಡಕ್ಕೆ ಹೆಸರಿಡುವಾಗ, ರಾಯಲ್ ಚಾಲೆಂಜ್‌ನ ಚೈತನ್ಯ ಮತ್ತು ಶಕ್ತಿಯನ್ನು ಪ್ರತಿಬಿಂಬಿಸುವಂತಿರಬೇಕೆಂದು ಬಯಸಿದೆ. ಈ ಬ್ರಾಂಡ್ ಉತ್ಸಾಹ, ಗುಣಮಟ್ಟ ಮತ್ತು ಯಶಸ್ಸಿನ ಸಂಕೇತವಾಗಿದೆ. ಇದನ್ನು ತಂಡದ ಗುರುತಿನೊಂದಿಗೆ ಸಂಯೋಜಿಸಲು ‘ರಾಯಲ್ ಚಾಲೆಂಜರ್ಸ್’ ಎಂಬ ಹೆಸರನ್ನು ಆಯ್ಕೆ ಮಾಡಿದೆ” ಎಂದು ಮಲ್ಯ ತಿಳಿಸಿದ್ದಾರೆ.

ಈ ರಾಯಲ್ ಚಾಲೆಂಜ್ ಮದ್ಯದ ಜೊತೆಗೆ ‘ಬೆಂಗಳೂರು’ ಎಂಬ ಪದವನ್ನು ಸೇರಿಸುವ ಮೂಲಕ ತಂಡವನ್ನು ಕರ್ನಾಟಕದ ರಾಜಧಾನಿಯೊಂದಿಗೆ ಸಂಧಿಸಿದರೆ ಇದು ಸ್ಥಳೀಯ ಅಭಿಮಾನಿಗಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದು ಅವರು ಅರಿತಿರುವುದಾಗಿಯೂ ತಿಳಿಸಿದ್ದಾರೆ.

RCBಯ ಹೆಸರು ಕೇವಲ ಬ್ರಾಂಡಿಂಗ್‌ಗೆ ಸೀಮಿತವಾಗಿರಲಿಲ್ಲ. ಇದು ಒಂದು ದೊಡ್ಡ ಕನಸಿನ ಭಾಗವಾಗಿತ್ತು. ಮಲ್ಯ, RCB ಎಂಬ ಹೆಸರು ಬೆಂಗಳೂರಿನ ಜನರ ಆಕಾಂಕ್ಷೆಗಳನ್ನು ಮತ್ತು ಐಪಿಎಲ್‌ನಲ್ಲಿ ಯಶಸ್ಸಿನ ಛಾಪನ್ನು ಮೂಡಿಸಬೇಕೆಂಬ ಉದ್ದೇಶ ಹೊಂದಿದ್ದಾಗಿ ಹೇಳಿದ್ದಾರೆ. ಈ ಉದ್ದೇಶ 2025ರ ಐಪಿಎಲ್ ಫೈನಲ್‌ನಲ್ಲಿ RCB ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ರೋಚಕ ಗೆಲುವಿನೊಂದಿಗೆ ಚೊಚ್ಚಲ ಟ್ರೋಫಿ ಗೆದ್ದಾಗ ಸಾಕಾರಗೊಂಡಿತು ಎಂದರು.

ಈ ಗೆಲುವಿನ ಬಗ್ಗೆ ಮಾತನಾಡಿದ ಮಲ್ಯ, “ರಾಯಲ್ ಚಾಲೆಂಜರ್ಸ್ ಎಂಬ ಹೆಸರು ಈಗ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿದೆ. ಇದು ಕೇವಲ ತಂಡದ ಹೆಸರಲ್ಲ, ಬೆಂಗಳೂರಿನ ಜನರ ಗೆಲುವಿನ ಉತ್ಸಾಹವನ್ನು ಪ್ರತಿನಿಧಿಸುತ್ತದೆ” ಎಂದು ಭಾವುಕರಾಗಿ ತಿಳಿಸಿದರು. ಹೆಸರಿನ ಆಯ್ಕೆಯು ತಂಡದ ಗುರುತಿನ ಜೊತೆಗೆ ಅಭಿಮಾನಿಗಳ ಭಾವನೆಗಳನ್ನು ಸೆರೆಹಿಡಿಯುವ ಗುರಿಯನ್ನು ಹೊಂದಿತ್ತು. ‘ರಾಯಲ್’ ಎಂಬ ಪದವು ಭವ್ಯತೆ ಮತ್ತು ಶ್ರೇಷ್ಠತೆಯನ್ನು ಸೂಚಿಸಿದರೆ, ‘ಚಾಲೆಂಜರ್ಸ್’ ಎಂಬ ಪದವು ಸ್ಪರ್ಧಾತ್ಮಕ ಮನೋಭಾವವನ್ನು ಒತ್ತಿ ಹೇಳಿದೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.