RCB: CSK ವಿರುದ್ಧ ಗೆದ್ದ ಬೆನ್ನಲ್ಲೇ ಕುಣಿದು ಕುಪ್ಪಳಿಸಿದ ಕೊಹ್ಲಿ! ಒಂದೊಂದು ಸ್ಟೆಪ್ಸ್‌‌ ಕೂಡ ಬೆಂಕಿ ಬೆಂಕಿ/IPL 2025 RCB Royal challengers bengaluru Players and virat kohli Dance for run it up song

RCB: CSK ವಿರುದ್ಧ ಗೆದ್ದ ಬೆನ್ನಲ್ಲೇ ಕುಣಿದು ಕುಪ್ಪಳಿಸಿದ ಕೊಹ್ಲಿ! ಒಂದೊಂದು ಸ್ಟೆಪ್ಸ್‌‌ ಕೂಡ ಬೆಂಕಿ ಬೆಂಕಿ/IPL 2025 RCB Royal challengers bengaluru Players and virat kohli Dance for run it up song

Last Updated:

RCB: ಸಿಎಸ್‌ಕೆ ವಿರುದ್ಧ ಗೆದ್ದ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಆಟಗಾರರು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಫುಲ್ ಮಸ್ತಿ ಮಾಡಿದ್ದಾರೆ. ಎಲ್ಲ ಆಟಗಾರರು ಅದ್ರಲ್ಲೂ ವಿರಾಟ್ ಕೊಹ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ವಿರಾಟ್ ಕೊಹ್ಲಿವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 17 ವರ್ಷಗಳ ಬಳಿಕ ಆರ್‌ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸಿ ಸೇಡು ತೀರಿಸಿಕೊಂಡಿದೆ. ಆರ್‌ಸಿಬಿ ಅಭಿಮಾನಿಗಳು ಈ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಅದರಲ್ಲೂ ಅವರ ಜಾಗದಲ್ಲೇ ಅವರನ್ನು ಸೋಲಿಸಿರೋ ಖುಷಿ ಆರ್‌ಸಿಬಿ ಅಭಿಮಾನಿಗಳಿಗೆ (RCB Fans) ಸಿಕ್ಕಿದೆ. ಪಕ್ಕಾ ಈ ಬಾರಿಯೂ ಸೋಲ್ತಾರೆ ಸಿಎಸ್‌ಕೆ ಗೆಲ್ಲುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಆರ್‌ಸಿಬಿ ಅದ್ಭುತವಾಗಿ ಆಡಿ ಗೆದ್ದು ಬೀಗಿದೆ.

ಭರ್ಜರಿ ಸ್ಟೆಪ್ಸ್ ಹಾಕಿದ ಕೊಹ್ಲಿ & ಟೀಂ!

ಈ ಗೆಲುವನ್ನ ಸಂಭ್ರಮಿಸದಿದ್ರೆ ಹೇಗೆ? 17 ವರ್ಷಗಳ ಬಳಿಕ ಈ ಮೈದಾನದಲ್ಲಿ ಸಿಎಸ್‌‌ಕೆ  ವಿರುದ್ಧ ಗೆದ್ದಿದೆ ಅಂದ್ರೆ ಸೌಂಡ್‌ ಸ್ವಲ್ಪ ಜಾಸ್ತಿನೇ ಇರಬೇಕು. ಆರ್‌ಸಿಬಿ ಡ್ರೆಸ್ಸಿಂಗ್‌ ರೂಮ್‌ನಲ್ಲೂ ಇದೇ ನಡೆದಿದೆ. ಹನುಮಾನ್‌ಕೈಂಡ್‌ ಹಾಡಿಗೆ ಎಲ್ರೂ ಭರ್ಜರಿ ಸ್ಟೆಪ್‌ ಹಾಕಿದ್ದಾರ. ಅದ್ರಲ್ಲೂ ವಿರಾಟ್ ಕೊಹ್ಲಿ ಡ್ಯಾನ್ಸ್ ಕಂಡು ಅಭಿಮಾನಿಗಳು ಬೆಂಕಿ ಬೆಂಕಿ ಸ್ಟೆಪ್ಸ್ ಅಂತ ಕಮೆಂಟ್ ಮಾಡುತ್ತಿದ್ದಾರೆ.

ರನ್‌ ಇಟ್‌ ಅಪ್‌ ಹಾಡಿಗೆ ಎಲ್ರೂ ತಲೆದೂಗಿಸಿದ್ದಾರೆ. ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಆರ್‌ಸಿಬಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಕದನದೊಳ್‌ ಕೊಹ್ಲಿ ಕೆಣಕಿ ಉಳಿದವರಿಲ್ಲ!

ಕ್ರಿಕೆಟ್‌ ಕದನದೊಳ್‌ ಕಿಂಗ್‌ ಕೊಹ್ಲಿ ಕೆಣಕಿ ಉಳಿದವರಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ವಿರಾಟ್‌ ಕೊಹ್ಲಿ ಆರ್ಭಟಕ್ಕೆ ಸಿಲುಕಿ ಅದೆಷ್ಟೋ ಆಟಗಾರರು ಸೈಡ್‌ಲೈನ್‌ ಆಗಿದ್ದಾರೆ ಅಂದ್ರೆ ತಪ್ಪಾಗಲ್ಲ. ವಿರಾಟ್‌ ವೀರಾವೇಶ ಏನು ಅಂತ ಗೊತ್ತಿದ್ದವರು ಕೊಹ್ಲಿನ ಕೆಣಕೋದಿಲ್ಲ. ಯಾಕಂದ್ರೆ ಕೊಹ್ಲಿನ ಕೆಣಕಿದವರ ಕಥೆ ಏನಾಗಿದೆ ಅಂತ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಆ ಸಿಎಸ್‌ಕೆ ಬೌಲರ್ ಗೊತ್ತಿದ್ದು ಗೊತ್ತಿದ್ದು ಕೊಹ್ಲಿಯನ್ನು ಕೆಣಕಿದ್ದಾರೆ. ಕೊಹ್ಲಿ ಸುಮ್ನೆ ಬಿಡ್ತಾರಾ. ಯಾರಾದ್ರೆ ಏನು ಎಲ್ಲಿದ್ರೆ ಏನು ಸರಿಯಾಗಿ ವಾಪಸ್‌ ಕೊಡೋ ಕ್ಯಾರೆಕ್ಟರ್‌.

ಧೋನಿ ಮುಂದೆಯೇ ಕೊಹ್ಲಿ ವಾರ್ನಿಂಗ್!

ಯೆಸ್‌‌, ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಆಡ್ತಿದ್ದಾಗ ಖಲೀಲ್‌ ಅಹ್ಮದ್ ಸ್ವಲ್ಪ ಹೆಚ್ಚಾಗಿಯೇ ಗುರಾಯಿಸಿ ಕೆಣಕ್ತಿದ್ದರು. ಇನ್ನೂ ಎಲ್‌ಬಿಡಬ್ಲೂ ಆಯ್ತು ಅಂತ ಸೆಲೆಬ್ರೇಷನ್ ಕೂಡ ಮಾಡಿದ್ರು. ಔಟ್‌ ಇಲ್ಲದಿದ್ರೂ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಖಲೀಲ್ ಒತ್ತಡ ಹೇರಿದ್ರು. ಆದ್ರೆ ಬಾಲ್‌ ಲೆಗ್‌ ಹೊರಗೆ ಬಿದ್ದಿತ್ತು. ಅಷ್ಟೇ ಅಲ್ಲ ಮೊದಲ ಓವರ್‌ನಲ್ಲೇ ಬೌಲ್ ಮಾಡಿದ ಖಲೀಲ್‌ ಫಿಲ್ ಸಾಲ್ಟ್‌ ಅವರನ್ನು ಕೂಡ ಕೆಣಕೋ ಪ್ರಯತ್ನ ಮಾಡುತ್ತಲೇ ಇದ್ದರು. ಕೊಹ್ಲಿ ಇದೆನ್ನೆಲ್ಲಾ ಗಮನಿಸಿಕೊಂಡೇ ಬಂದ್ರು. ಪಂದ್ಯ ಗೆದ್ದ ಬಳಿಕ ಮುಟ್ಟಿ ನೋಡಿಕೊಳ್ಳುವಂತೆ ಖಡಕ್ ವಾರ್ನಿಂಗ್‌ ಕೊಟ್ಟಿದ್ದಾರೆ ವಿರಾಟ್ ಕೊಹ್ಲಿ.

ಇದನ್ನೂ ಓದಿ: ಕಿಂಗ್ಸ್‌ ಭದ್ರಕೋಟೆ ಛಿದ್ರ ಮಾಡಿದ್ದು ಆ ಓವರ್! ಅಲ್ಲೇ ಸಿಎಸ್‌ಕೆ ಸೋಲು ಕನ್ಫರ್ಮ್ ಆಗೋಯ್ತು!

ಕೊಹ್ಲಿ ಕೆಣಕಿದ್ದ ಖಲೀಲ್‌ ಅಹ್ಮದ್‌!

ಹೌದು, ಪಂದ್ಯ ಮುಗಿದ ಬಳಿಕ ಖಲೀಲ್‌ ಅಹ್ಮದ್‌ ವಿರಾಟ್‌ ಕೊಹ್ಲಿಗೆ ಶೇಕ್‌ಹ್ಯಾಂಡ್ ಮಾಡೋಕೆ ಬಂದಿದ್ದಾರೆ. ಆದ್ರೆ ಕೊಹ್ಲಿ ಅಷ್ಟೋತ್ತಿಗಾಗಲೇ ಗರಂ ಆಗಿದ್ದರು. ಗೆದ್ದ ಮೇಲೆ ಕೊಹ್ಲಿ ಕೋಪ ಡಬಲ್ ಆಗಿರುತ್ತೆ ಅಂತ ಎಲ್ರಿಗೂ ಗೊತ್ತಿದೆ. ನಗು ನಗುತ್ತಲೇ ಶೇಕ್‌ ಹ್ಯಾಂಡ್ ಮಾಡೋಕೆ ಬಂದ ಖಲೀಲ್‌ಗೆ ಕೈ ಹಿಡಿದ ಕೊಹ್ಲಿ ನೀನು ಮಾಡಿದ್ದು ಸರಿ ಇರ್ಲಿಲ್ಲ ಎಂಬಂತೆ ಹೇಳಿದ್ದಾರೆ.

ಇನ್ನೂ ನಗುತ್ತಲೇ ಉತ್ತರ ಕೊಡುತ್ತಿದ್ದ ಖಲೀಲ್‌ ಅಹ್ಮದ್‌ರನ್ನು ಲೈಟ್ ಆಗಿ ತಳ್ಳಿ ವಿರಾಟ್ ಕೊಹ್ಲಿ ಮುಂದೆ ಬಂದಿದ್ದಾರೆ. ಇದನ್ನೆಲ್ಲಾ ಕೊಹ್ಲಿ ಹಿಂದೆ ನಿಂತು ನೋಡುತ್ತಿದ್ದ ಧೋನಿ ಕೂಡ ಸುಮ್ಮನಾಗಿದ್ದಾರೆ. ಆದ್ರೆ ಇದನ್ನು ಕಂಡ ಅಭಿಮಾನಿಗಳು ಮಾತ್ರ ಕೊಹ್ಲಿ ಮಾಡಿದ್ದು ಸರಿ ಇದೆ. ಸುಮ್ನೆ ಯಾಕೆ ಅವರನ್ನು ಕೆಣಕಿ ಇಂಥ ಪರಿಸ್ಥಿತಿಗೆ ಬರ್ತಿರಾ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.