RCB For Sale: ನಾನು ರಾಯಲ್ ಚಾಲೆಂಜೇ ಕುಡಿಯಲ್ಲ, ನನಗ್ಯಾಕೆ ಆರ್‌ಸಿಬಿ ಬೇಕು?: ವದಂತಿಗಳಿಗೆ ತೆರೆ ಎಳೆದ ಡಿಕೆಶಿ / “I Don’t Drink Royal Challengers, Why Would I Want RCB?”: DK Shivakumar Clarifies Rumours

RCB For Sale: ನಾನು ರಾಯಲ್ ಚಾಲೆಂಜೇ ಕುಡಿಯಲ್ಲ, ನನಗ್ಯಾಕೆ ಆರ್‌ಸಿಬಿ ಬೇಕು?: ವದಂತಿಗಳಿಗೆ ತೆರೆ ಎಳೆದ ಡಿಕೆಶಿ / “I Don’t Drink Royal Challengers, Why Would I Want RCB?”: DK Shivakumar Clarifies Rumours

Last Updated:

ಐಪಿಎಲ್​​ 2025ರಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಗೆದ್ದಾಗಿನಿಂದಲೂ ಒಂದಲ್ಲ ಒಂದು ವದಂತಿಗಳು ಕೇಳಿ ಬರುತ್ತಲೆ ಇದೆ. ಇದರ ಭಾಗವಾಗಿ ರಾಯಲ್​ ಚಾಲೆಂಜರ್ಸ್​​ ತಂಡ ಮಾರಾಟವಾಗುತ್ತೆ ಎಂಬ ಸುದ್ದಿ ಕೂಡ ಸದ್ದು ಮಾಡುತ್ತಿದ್ದು, ಇದನ್ನ ಕರ್ನಾಟಕ ಡಿಸಿಎ ಡಿ.ಕೆ ಶಿವಕುಮಾರ್​ ಖರೀದಿ ಮಾಡ್ತಾರೆ ಎಂಬ ವದಂತಿ ಇತ್ತು. ಇದೀಗ ಇದಕ್ಕೆ ಡಿ.ಕೆ ಶಿವಕುಮಾರ್​ ಸ್ಪಷ್ಟನೆ ಕೊಟ್ಟಿದ್ದಾರೆ.

ಆರ್​ಸಿಬಿ ಖರೀದಿ ವದಂತಿ ನಿರಾಕರಿಸಿದ ಡಿಕೆಶಿಆರ್​ಸಿಬಿ ಖರೀದಿ ವದಂತಿ ನಿರಾಕರಿಸಿದ ಡಿಕೆಶಿ
ಆರ್​ಸಿಬಿ ಖರೀದಿ ವದಂತಿ ನಿರಾಕರಿಸಿದ ಡಿಕೆಶಿ

ಇಂಡಿಯನ್ ಪ್ರಿಮಿಯರ್ ಲೀಗ್ 2025ರಲ್ಲಿ (IPL 2025) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಚಾಂಪಿಯನ್​ ಆದಾಗಿನಿಂದಲೂ ಒಂದಲ್ಲ ಒಂದು ಸುದ್ದಿ ಸದ್ದು ಮಾಡ್ತಿದೆ. ರಾಯಲ್​ ಚಾಲೆಂಜರ್ಸ್​​ ತಂಡ ಬ್ಯಾನ್​ (RCB Ban0 ಆಗುತ್ತೆ, ರಾಯಲ್​ ಚಾಲೆಂಜರ್ಸ್​​ ತಂಡ ಮಾರಾಟವಾಗುತ್ತೆ (RCB For Sale) ಹೀಗೆ ಹಲವಾರು ಸುದ್ದಿಗಳು ಕ್ರಿಕೆಟ್​​ ಲೋಕದಲ್ಲಿ ಸಿಕ್ಕಾಪಟ್ಟೆ ಸೌಂಡ್​​ ಮಾಡ್ತಿದೆ. ಇದರದ್ದೇ ಮುಂದುವರೆದ ಭಾಗವಾಗಿ ಕರ್ನಾಟಕ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar)​​ ಆರ್​ಸಿಬಿ ಫ್ರಾಂಚೈಸಿಯನ್ನು ಖರೀದಿ ಮಾಡುತ್ತಾರೆ ಎಂಬ ವದಂತಿ ಇತ್ತು. ಇದೀಗ ಅದಕ್ಕೆ ಡಿ.ಕೆ ಶಿವಕುಮಾರ್​​ ಸ್ಪಷ್ಟನೆ ಕೊಟ್ಟಿದ್ದಾರೆ. ​​

ರಾಯಲ್​ ಚಾಲೆಂಜರ್ಸ್ ಬೆಂಗಳೂರು​​ ತಂಡ 18 ವರ್ಷಗಳ ನಂತರ ಮೊದಲ ಬಾರಿ ಕಪ್​ ಗೆದ್ದ ಕೆಲವೇ ದಿನಗಳಲ್ಲಿ ತಂಡ ಮಾರಾಟಕ್ಕೆ ತೆರೆದುಕೊಂಡಿದೆ ಎಂಬ ಸುದ್ದಿಗಳು ಕ್ರೀಡಾ ರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಇದರದ್ದೇ ಭಾಗವಾಗಿ ಡಿ.ಕೆ ಶಿವಕುಮಾರ್​​ ಉತ್ತರ ಕೊಟ್ಟಿದ್ದಾರೆ.

ಆರ್​​ಸಿಬಿ ಫ್ರಾಂಚೈಸಿ ಖರೀದಿಸ್ತಾರಾ ಡಿ.ಕೆ ಶಿವಕುಮಾರ್​​ ?

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಸದ್ಯದ ಮಾಲೀಕರಾದ ಬ್ರಿಟಿಷ್ ದಿಗ್ಗಜ ಡಿಯಾಜಿಯೊ (Diageo Plc) ತನ್ನ ಭಾಗವನ್ನು ಪೂರ್ಣವಾಗಿ ಅಥವಾ ಭಾಗಶಃ ಮಾರಾಟ ಮಾಡಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಡೀಲ್ ಮೊತ್ತ ಸುಮಾರು 2 ಬಿಲಿಯನ್ ಡಾಲರ್ ಅಂದರೆ ಸುಮಾರು 16,834 ಕೋಟಿ ರೂಪಾಯಿ ವರೆಗೂ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ಡಿಸಿಎಂ ಡಿ.ಕೆ ಶಿವಕುಮಾರ್​​ RCB ಫ್ರಾಂಚೈಸಿಯನ್ನು ಖರೀದಿಸುವ ವದಂತಿಗಳು ಹಬ್ಬಿದೆ. ಇದೀಗ ಇದಕ್ಕೆ ಸ್ಪಷ್ಟನೆ ಕೊಟ್ಟ ಡಿಕೆಶಿ ವದಂತಿಗಳನ್ನು ನಿರಾಕರಿಸಿದ್ದಾರೆ.

ಆರ್​​ಸಿಬಿ ಫ್ರಾಂಚೈಸಿ ಖರೀದಿಸುವ ವದಂತಿ ನಿರಾಕರಿಸಿದ ಡಿ.ಕೆ ಶಿವಕುಮಾರ್​!

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸುವ ವದಂತಿಗಳನ್ನು ಡಿಕೆ ಶಿವಕುಮಾರ್​​ ತಳ್ಳಿಹಾಕಿದ್ದಾರೆ. “ನಾನು ಹುಚ್ಚನಲ್ಲ. ನಾನು ಚಿಕ್ಕಂದಿನಿಂದಲೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯನಾಗಿದ್ದೇನೆ ಅಷ್ಟೇ. ನನಗೆ ಇದ್ಯಾವುದಕ್ಕೂ ಸಮಯವಿಲ್ಲ, ನಾನು ರಾಜಕಾರಣಿ ಎಂದಿದ್ದಾರೆ.

ಅಲ್ಲದೇ ಆದರೂ ನನಗೆ ರಾಯಲ್​ ಚಾಲೆಂಜರ್ಸ್​​ ತಂಡದ ನಿರ್ವಹಣೆಯ ಭಾಗವಾಗಲು ಆಫರ್‌ಗಳು ಬಂದವು. ಆದರೆ ನಾನು ಒಪ್ಪಿಲ್ಲ ಎಂದು ಡಿ.ಕೆ ಶಿವಕುಮಾರ್​ ಸ್ಪಷ್ಟನೆ ಕೊಟ್ಟಿದ್ದಾರೆ.

ನನಗೆ RCB ಏಕೆ ಬೇಕು? – ಡಿ.ಕೆ ಶಿವಕುಮಾರ್​​!

ನಾನು ನನ್ನ ಇನ್ಸಿಟಿಟ್ಯೂಷನ್​​ಗಳನ್ನೇ ನಿರ್ವಹಣೆ ಮಾಡಲು ಸಮಯವಿಲ್ಲದೇ ಕುಟುಂಬ ಸದಸ್ಯರಿಗೆ ಬಿಟ್ಟುಕೊಟ್ಟಿದ್ದೇನೆ. ಇನ್ನೂ ಆರ್​ಸಿಬಿ ಫ್ರಾಂಚೈಸಿ ನಿರ್ವಹಣೆ ಮಾಡುವಷ್ಟು ನನ್ನ ಹತ್ತಿರ ಸಮಯ ಇಲ್ಲ. ನನಗೆ RCB ಏಕೆ ಬೇಕು? ನಾನು ರಾಯಲ್ ಚಾಲೆಂಜ್ ಕುಡಿಯುವುದೇ ಇಲ್ಲ” ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ RCB ಫ್ರಾಂಚೈಸಿಯನ್ನು ಖರೀದಿಸುವ ವದಂತಿಗಳನ್ನು ನಿರಾಕರಿಸಿದ್ದಾರೆ.

ಆರ್​ಸಿಬಿ ಮಾರಾಟಕ್ಕೆ ಕಾರಣವೇನು?

ಪ್ರಿಮಿಯಂ ಬ್ರ್ಯಾಂಡ್ ಮೊತ್ತ: ಐಪಿಎಲ್ ಪ್ರಶಸ್ತಿ ಗೆದ್ದ ನಂತರ ಆರ್‌ಸಿಬಿಯ ಬ್ರಾಂಡ್ ಮೌಲ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಸಮಯದಲ್ಲಿ ಫ್ರಾಂಚೈಸಿಯನ್ನು ಮಾರಾಟ ಮಾಡುವ ಮೂಲಕ ಗರಿಷ್ಠ ಲಾಭ ಗಳಿಸಲು ಡಿಯಾಜಿಯೊ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಜಾಗತಿಕ ವ್ಯವಹಾರ ತಂತ್ರ!

ಡಿಯಾಜಿಯೊ ತನ್ನ ವ್ಯವಹಾರವನ್ನು ಜಾಗತಿಕವಾಗಿ ಮತ್ತಷ್ಟು ವಿಚಾರಣೆ ಮಾಡಿ ಸುಗಮವಾಗಿ ನಡೆಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಅಮೆರಿಕದಲ್ಲಿ ಮದ್ಯ ಮಾರಾಟ ಕಡಿಮೆಯಾಗಿರುವುದು ಮತ್ತು ಅಲ್ಲಿನ ಸರ್ಕಾರ ಸುಂಕ ಏರಿಕೆ ಮಾಡಿರುವಂತಹ ಸಮಸ್ಯೆಗಳನ್ನು ಡಿಯಾಜಿಯೊ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಆರ್‌ಸಿಬಿಯನ್ನು ಮಾರಾಟ ಮಾಡುವ ಮೂಲಕ ಹಣವನ್ನು ಸಂಗ್ರಹಿಸಿ ತನ್ನ ಪ್ರಮುಖ ವ್ಯವಹಾರದ ಹೂಡಿಕೆ ಮಾಡಲು ಮುಂದಾಗಿದೆ ಎನ್ನಲಾಗಿದೆ.