RCB vs CSK: ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಆಯ್ಕೆ! ಆರ್‌ಸಿಬಿ ಪ್ಲೇಯಿಂಗ್-11 ನಲ್ಲಿ ಅಚ್ಚರಿ ಆಯ್ಕೆ | IPL 2025 chennai Super kings won the toss and choose bowling first against to RCB

RCB vs CSK: ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಆಯ್ಕೆ! ಆರ್‌ಸಿಬಿ ಪ್ಲೇಯಿಂಗ್-11 ನಲ್ಲಿ ಅಚ್ಚರಿ ಆಯ್ಕೆ | IPL 2025 chennai Super kings won the toss and choose bowling first against to RCB

Last Updated:

ಐಪಿಎಲ್ 2025ನೇ ಸಾಲಿನ 52ನೇ ಪಂದ್ಯದಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಆರ್‌ಸಿಬಿ vs ಸಿಎಸ್‌ಕೆಆರ್‌ಸಿಬಿ vs ಸಿಎಸ್‌ಕೆ
ಆರ್‌ಸಿಬಿ vs ಸಿಎಸ್‌ಕೆ

ಐಪಿಎಲ್ 2025ನೇ ಸಾಲಿನ 52ನೇ ಪಂದ್ಯದಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ (M Chinnaswamy) ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಿದ್ದು,  ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಮೊದಲು ಬೌಲಿಂಗ್ ಆಯ್ದುಕೊಂಡರು. ಇನ್ನೂ ಆರ್‌ಸಿಬಿ ಪ್ಲೇಯಿಂಗ್ 11 ನಲ್ಲಿ ಒಂದು ಅಚ್ಚರಿ ಬದಲಾವಣೆ ಮಾಡಿದೆ.

ಟೂರ್ನಿ ಆರಂಭಕ್ಕೂ ಮುನ್ನ ಬಲಿಷ್ಠ ತಂಡ ಎನಿಸಿಕೊಂಡ ಚೆನ್ನೈ ಸೂಪರ್‌ಕಿಂಗ್ಸ್, ಈ ಬಾರಿಯ ಐಪಿಎಲ್‌ ಸಮಿಫೈನಲ್ ರೇಸ್‌ನಿಂದ ಈಗಾಗಲೇ ಹೊರಬಿದ್ದಿದೆ. ಅವರು ಆಡಿರುವ 10 ಪಂದ್ಯಗಳಲ್ಲಿ 8 ಸೋಲು ಕೇವಲ 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನೂ ಇದಕ್ಕೆ ವಿರುದ್ಧ ಎಂಬಂತೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಆಡಿರುವ 10 ಪಂದ್ಯಗಳಲ್ಲಿ 7 ಗೆಲುವು ಹಾಗೂ 3 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.