RCB vs CSK, IPL 2025: ಚೆಪಾಕ್‌ನಲ್ಲಿ ಸಿಎಸ್​ಕೆ ವಿರುದ್ಧ ಗೆಲ್ಲಬೇಕಾದರೆ ಈ ಬದಲಾವಣೆ ಅಗತ್ಯ! ಆರ್​ಸಿಬಿ ಮಹತ್ವದ ಸಲಹೆ ನೀಡಿದ ವಾಟ್ಸನ್ | RCB vs CSK Shane Watson Says Royal Challengers Bengaluru Face Huge Challenge at Chepauk

RCB vs CSK, IPL 2025: ಚೆಪಾಕ್‌ನಲ್ಲಿ ಸಿಎಸ್​ಕೆ ವಿರುದ್ಧ ಗೆಲ್ಲಬೇಕಾದರೆ ಈ ಬದಲಾವಣೆ ಅಗತ್ಯ! ಆರ್​ಸಿಬಿ ಮಹತ್ವದ ಸಲಹೆ ನೀಡಿದ ವಾಟ್ಸನ್ | RCB vs CSK Shane Watson Says Royal Challengers Bengaluru Face Huge Challenge at Chepauk

ತಂಡದಲ್ಲಿ ಬದಲಾವಣೆ ಅಗತ್ಯ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ RCB ತಂಡವು ಪಿಚ್‌ನ ಅಗತ್ಯಕ್ಕೆ ಅನುಗುಣವಾಗಿ ತನ್ನ ತಂಡ ಸಂಯೋಜನೆಯನ್ನು ಬದಲಾಯಿಸಬೇಕಾಗುತ್ತದೆ ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ. ‘ಜಿಯೋಸ್ಟಾರ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚೆಪಾಕ್‌ನಲ್ಲಿ ಆಡುವುದು ಆರ್​ಸಿಬಿಗೆ ದೊಡ್ಡ ಸವಾಲಾಗಿರುತ್ತದೆ., ವಿಶೇಷವಾಗಿ ಸೂಪರ್ ಕಿಂಗ್ಸ್ ಬೌಲರ್‌ಗಳನ್ನು ಪರಿಗಣಿಸಿದರೆ  ಆರ್​ಸಿಬಿ ಗೆಲುವು ಸುಲಭವಲ್ಲ ಎಂದು ತಿಳಿಸಿದ್ದಾರೆ. ಚೆಪಾಕ್​ನಲ್ಲಿ ಗೆಲ್ಲಲು ತಂಡ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ, ಆದರೆ ಚೆಪಾಕ್ ಕ್ರೀಡಾಂಗಣವು ಚೆನ್ನೈ ತಂಡದ ಭದ್ರಕೋಟೆ ಕೇಂದ್ರವಾಗಿದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಸ್​ಕೆ vs ಆರ್​ಸಿಬಿ ಹೈವೋಲ್ಟೇಜ್​ ಕಾದಾಟದಲ್ಲಿ ಹೆಚ್ಚು ಗೆದ್ದಿರುವ ತಂಡ ಯಾವುದು? ಇಲ್ಲಿದೆ ಮಾಹಿತಿ

ಹೆಚ್ಚುವರಿ ಸ್ಪಿನ್ನರ್​ ಅಗತ್ಯ

ಚೆಪಾಕ್​​ನಲ್ಲಿ ಹೆಚ್ಚುವರಿ ಸ್ಪಿನ್ನರ್ ಮತ್ತು ಬಲಿಷ್ಠ ಸ್ಪಿನ್​ ಬೌಲಿಂಗ್ ಎದುರಿಸುವ ಆಟಗಾರರನ್ನ ಈ ಪಂದ್ಯದಲ್ಲಿ ಕಣಕ್ಕಿಳಿಸಬೇಕೆಂದು ವಾಟ್ಸನ್​ ಆರ್​ಸಿಬಿಗೆ ಸಲಹೆ ನೀಡಿದ್ದಾರೆ. ಟಿಮ್ ಡೇವಿಡ್ ಬದಲಿಗೆ ಸ್ಪಿನ್ ಬೌಲಿಂಗ್ ಮತಗ್ತು ಬ್ಯಾಟಿಂಗ್ ಮಾಡಬಲ್ಲ ಜಾಕೋಬ್ ಬೆಥೆಲ್ ಆಡಿಸಿದರೆ ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡದ ಬಲವನ್ನು ಹೆಚ್ಚಿಸಲಿದೆ. ಅಲ್ಲದೆ ಈ ಪಂದ್ಯದಲ್ಲಿ ಲಿವಿಂಗ್​​ಸ್ಟೋನ್​​ರಿಂದ ಒಂದೆರಡು ಓವರ್​​ ಬೌಲಿಂಗ್ ಮಾಡಿಸಲು ಆರ್​ಸಿಬಿ ಮುಂದಾಗಬೇಕಿದೆ.

ಸಿಎಸ್​ಕೆ ತಂಡ ಚೆಪಾಕ್​​ಗೆ ಸೂಕ್ತವಾಗಿದೆ

ಚೆನ್ನೈ ತಂಡದ ತವರಿನಲ್ಲಿ ಪ್ರಾಬಲ್ಯ ಸಾಧಿಸಲು ಅಲ್ಲಿರುವ ಅತ್ಯುತ್ತಮ ಸ್ಪಿನ್ನರ್‌ಗಳಿರುವುದೇ ಕಾರಣ ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ. ‘ಸೂಪರ್ ಕಿಂಗ್ಸ್‌ ತಂಡದ ಸಂಪೂರ್ಣ ರಚನೆ ಚೆನ್ನೈನಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕೆ ತಯಾರಾಗಿದೆ’ ಎಂದು ವ್ಯಾಟ್ಸನ್ ಹೇಳಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅಶ್ವಿನ್, ಜಡೇಜಾ ಮತ್ತು ನೂರ್ ಅಹ್ಮದ್ ಅವರ ಅದ್ಭುತ ಬೌಲಿಂಗ್ RCBಗೆ ದೊಡ್ಡ ಸವಾಲಾಗಿರುತ್ತದೆ.

ಇದನ್ನೂ ಓದಿ: 1 ಓವರ್​​ನಲ್ಲಿ 6 ಸಿಕ್ಸರ್, ಹರಾಜಿನಲ್ಲಿ 10 ಪಟ್ಟು ಹಣ! ಪದಾರ್ಪಣೆ ಪಂದ್ಯದಲ್ಲೇ ಹೀರೋ ಆದ 23ರ ಯುವಕ

ನೂರ್​ ತಂಡದ ಸ್ಟ್ರೆಂತ್

ನೂರ್ ಅಹ್ಮದ್ ಅವರ ಮೊದಲ ಪಂದ್ಯದಲ್ಲಿ ಕಂಡುಬಂದ ಅದ್ಭುತ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ. 2008 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಶಸ್ತಿ ಅಭಿಯಾನದಲ್ಲಿ ಭಾಗವಹಿಸಿದ್ದ ವ್ಯಾಟ್ಸನ್, RCBಯಲ್ಲಿ ಉತ್ತಮ ಸ್ಪಿನ್ ಆಯ್ಕೆಗಳ ಕೊರತೆಯಿದೆ ಮತ್ತು ಇದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪಷ್ಟವಾಯಿತು ಎಂದು ಹೇಳಿದರು.

ಸಿಎಸ್​ಕೆ vs ಆರ್​ಸಿಬಿ ಹೆಡ್​ ಟು ಹೆಡ್ ರೆಕಾರ್ಡ್

ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳ ನಡುವೆ ಒಟ್ಟು 33 ಪಂದ್ಯಗಳು ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 21 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮೇಲುಗೈ ಪಡೆದಿದೆ. ಆರ್‌ಸಿಬಿ ಕೇವಲ 11 ಪಂದ್ಯಗಳಲ್ಲಿ ಜಯ ಗಳಿಸಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಈ ಅಂಕಿಅಂಶಗಳು ಸಿಎಸ್‌ಕೆ ತಂಡದ ಪ್ರಾಬಲ್ಯವನ್ನು ತೋರಿಸುತ್ತವೆ, ಆದರೆ ಆರ್‌ಸಿಬಿ ಈ ಬಾರಿ ಆ ದಾಖಲೆಯನ್ನು ಬದಲಾಯಿಸುವ ಛಲದಲ್ಲಿದೆ.

ಇನ್ನು ಚೆಪಾಕ್​ನಲ್ಲಿ ಆರ್​ಸಿಬಿ vs ಸಿಎಸ್​ಕೆ ರೆಕಾರ್ಡ್ ನೋಡುವುದಾದರೆ, ಸಿಎಸ್​ಕೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಇಲ್ಲಿ ನಡೆದಿರುವ ಎರಡು ತಂಡಗಳ ನಡುವಿನ 9 ಪಂದ್ಯಗಳಲ್ಲಿ ಸಿಎಸ್​ಕೆ 8ರಲ್ಲಿ ಜಯ ಸಾಧಿಸಿದ್ದರೆ, 1ರಲ್ಲಿ ಆರ್​ಸಿಬಿ ಗೆದ್ದಿದೆ. ಆ ಏಕೈಕ ಗೆಲುವು 2008ರಲ್ಲಿ ಬಂದಿರುವುದು ಗಮನಾರ್ಹ. ಅಂದರೆ 16 ವರ್ಷಗಳಲ್ಲಿ ಆರ್​​ಸಿಬಿ ಒಂದೇ ಒಂದು ಗೆಲುವು ಸಾಧಿಸಿಲ್ಲ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

RCB vs CSK, IPL 2025: ಚೆಪಾಕ್‌ನಲ್ಲಿ ಸಿಎಸ್​ಕೆ ವಿರುದ್ಧ ಗೆಲ್ಲಬೇಕಾದರೆ ಈ ಬದಲಾವಣೆ ಅಗತ್ಯ! ಆರ್​ಸಿಬಿ ಮಹತ್ವದ ಸಲಹೆ ನೀಡಿದ ಆಸಿಸ್ ಲೆಜೆಂಡ್