RCB vs DC: ಆರ್‌‌ಸಿಬಿ ಅಭಿಮಾನಿಗಳಿಗೆ ಬಂಪರ್‌ ಆಫರ್‌! ಬೆಂಗಳೂರಿನ ಈ ಪಬ್‌‌ನಲ್ಲಿ ಸಿಗುತ್ತೆ ಫ್ರೀ ಬಿಯರ್‌, ಊಟಕ್ಕೂ ಭರ್ಜರಿ ಡಿಸ್ಕೌಂಟ್‌! | RCB Fans Get Free Beer Offer from Pub Owners

RCB vs DC: ಆರ್‌‌ಸಿಬಿ ಅಭಿಮಾನಿಗಳಿಗೆ ಬಂಪರ್‌ ಆಫರ್‌! ಬೆಂಗಳೂರಿನ ಈ ಪಬ್‌‌ನಲ್ಲಿ ಸಿಗುತ್ತೆ ಫ್ರೀ ಬಿಯರ್‌, ಊಟಕ್ಕೂ ಭರ್ಜರಿ ಡಿಸ್ಕೌಂಟ್‌! | RCB Fans Get Free Beer Offer from Pub Owners

Last Updated:

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಎಲ್ಲರ ಗಮನ ಸೆಳೆಯಲಿದ್ದಾರೆ. ಈ ಮಧ್ಯೆ ಬೆಂಗಳೂರಿನ ಪಬ್‌ವೊಂದರ ಮಾಲೀಕರೊಬ್ಬರು ಆರ್‌ಸಿಬಿ ಅಭಿಮಾನಿಗಳಿಗೆ ಉಚಿತ ಬಿಯರ್ ಹಾಗೂ ಭಾರೀ ಡಿಸ್ಕೌಂಟ್‌ನಲ್ಲಿ ಊಟ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

News18News18
News18

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ಭಾನುವಾರ, ಏಪ್ರಿಲ್ 27ರಂದು, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದೆಹಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಎಲ್ಲರ ಗಮನ ಸೆಳೆಯಲಿದ್ದಾರೆ. ಈ ಮಧ್ಯೆ ಬೆಂಗಳೂರಿನ ಪಬ್‌ವೊಂದರ ಮಾಲೀಕರೊಬ್ಬರು ಆರ್‌ಸಿಬಿ ಅಭಿಮಾನಿಗಳಿಗೆ ಉಚಿತ ಬಿಯರ್ ಹಾಗೂ ಭಾರೀ ಡಿಸ್ಕೌಂಟ್‌ನಲ್ಲಿ ಊಟ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ಡೆಲ್ಲಿ ತಂಡವನ್ನು ಅವರದ್ದೆ ತವರಿನಲ್ಲಿ ಮಣಿಸಿಸಲು ಆರ್‌ಸಿಬಿ ಮುಂದಾಗಿದೆ. ಇದರೊಂದಿಗೆ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮಣಿಸಿದ್ದ ಡೆಲ್ಲಿಯನ್ನು ಎರಡನೇ ಪಂದ್ಯದಲ್ಲಿ ಸೋಲಿಸಿ ಸೇಡು ತೀರಿಸಿಕೊಳ್ಳಲು ರಜತ್​ ಪಾಟಿದಾರ್​ ಸೈನ್ಯ ಸಜ್ಜಾಗಿದೆ. ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಮೇಲೂ ಕಣ್ಣಿಟ್ಟಿದೆ. ಇದಕ್ಕಾಗಿ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಆಟಗಾರರು ವಿಕೆಟ್‌ ತೆಗೆದ್ರೆ, ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದ್ರೆ ಗ್ರಾಹಕರಿಗೆ ಉಚಿತ ಬಿಯರ್ ಹಾಗೂ ಭಾರೀ ಡಿಸ್ಕೌಂಟ್‌ನಲ್ಲಿ ಊಟ ಕೊಡುವುದಾಗಿ ಬೆಂಗಳೂರಿನ ಪಬ್‌ವೊಂದರ ಮಾಲೀಕರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈಗಿನಿನ ಕಾಲದಲ್ಲಿ ಒಂದು ರೂಪಾಯಿ ಕಡಿಮೆ ಇಲ್ಲ ಅಂದರೂ ನಗರ ಪ್ರದೇಶದ ಬಹುತೇಕ ಹೋಟೆಲ್‌ಗಳಲ್ಲಿ ಊಟ ನೀಡುವುದಿಲ್ಲ. ಅಂತಹದ್ದರಲ್ಲಿ ಬೆಂಗಳೂರಿನಲ್ಲಿ ಪಬ್‌ ಮಾಲೀಕರೊಬ್ಬರು ಇಂತಹ ದೊಡ್ಡ ಆಫರ್‌ ಅನ್ನು ಆರ್‌ಸಿಬಿ ಅಭಿಮಾನಿಗಳಿಗೆ ಘೋಷಣೆ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Tree: ಕೋಟ್ಯಾಧಿಪತಿಯಾಗ್ಬೇಕಾ? 1000 ರೂ. ಬೆಲೆಯ ಈ ಸಸಿ ನೆಡಿ, 7 ಕೋಟಿ ರೂ. ಬೆಲೆಬಾಳುವ ಮರ ಬೆಳೆಸಿ!

ಪಬ್ ಮಾಲೀಕ ಹೇಳಿದ್ದೇನು?

“ಆರ್‌ಸಿಬಿಯವರು ಇಂದು ವಿಕೆಟ್‌ ತೆಗೆದಾಗಲೆಲ್ಲ ನನ್‌ ಕಡೆಯಿಂದ 5 ಬಿಯರ್ ಉಚಿತ. ಅಷ್ಟೇ ಅಲ್ಲ, ಆರ್‌ಸಿಬಿಯವರು ಬೌಂಡರಿ, ಸಿಕ್ಸ್‌ ಬೌಂಡರಿ ಬಾರಿಸಿದ್ರೂ 1 ಬಿಯರ್ ಉಚಿತ. ಇದು ಸಾಕಗಿಲ್ಲವೆಂದರೆ, ಯಾವುದೇ ಫುಡ್‌ ತೆಗೆದುಕೊಂಂಡರೂ 10% ಡಿಸ್ಕೌಂಟ್‌ ನೀಡಲಾಗುತ್ತದೆ. ಲೈವ್‌ ಕ್ರಿಕೆಟ್‌ ಸ್ಕ್ರೀನಿಂಗ್‌, ಡಿಜೆ ಸೌಂಡ್‌, ಸುತ್ತಲೂ ಆರ್‌ಸಿಬಿ ಅಭಿಮಾನಿಗಳು ಇರುತ್ತಾರೆ. ಬೆಂಗಳೂರಿನ ಬೆಲ್‌ ರೋಡ್‌ನಲ್ಲಿರುವ ಡಿ ಫೌಂಡರ್ಸ್‌ ಬ್ರೇವರಿ (The Founders Brewery) ಪಬ್‌ನಲ್ಲಿ ನಮ್ಮ ಪೇಜ್‌ನಿಂದ ನಮ್ಮ ಫಾಲೋವರ್ಸ್‌ಗೋಸ್ಕರ್ ಇದನ್ನು ಆಯೋಜನೆ ಮಾಡಿದ್ದೇವೆ. ಡೆಲ್ಲಿ ಹಾಗೂ ಆರ್‌ಸಿಬಿ ಪಂದ್ಯವನ್ನು ಕುಳಿದತುಕೊಂಡು ಎಂಜಾಯ್ ಮಾಡಿಕೊಂಡು ನೋಡೋಣ. ನೀವು ಇದನ್ನು ಪಡೆಯಬೇಕೆಂದರೆ, @justmadesh ಇನ್ಸ್ಟಾ ಪೇಜ್‌ ಅನ್ನು ಫಲೋ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ 8050083751 ಸಂಪರ್ಕಿಸಬಹುದು,” ಎಂದು ಹೇಳಿದ್ದಾರೆ.

ಎರಡೂ ತಂಡಗಳು ಪ್ಲೇಆಫ್‌ಗೆ ತಲುಪುವ ಗುರಿಯಲ್ಲಿವೆ. ಈ ಗೆಲುವಿನ ಎರಡು ಅಂಕಗಳು ಅವರಿಗೆ ಬಹಳ ಮುಖ್ಯ. ವಿರಾಟ್ ಕೊಹ್ಲಿ ಈ ಋತುವಿನಲ್ಲಿ ಒಂಬತ್ತು ಪಂದ್ಯಗಳಿಂದ ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರು ತಮ್ಮ ತವರು ನೆಲವಾದ ದೆಹಲಿಗೆ ಮರಳಿದ್ದಾರೆ. ಕೊಹ್ಲಿ ಈ ಕ್ರೀಡಾಂಗಣದಲ್ಲಿ 10 ಇನಿಂಗ್ಸ್‌ಗಳಿಂದ 483 ರನ್ ಗಳಿಸಿದ್ದಾರೆ. ಅವರ ಸರಾಸರಿ 69, ಮತ್ತು ಸ್ಟ್ರೈಕ್ ರೇಟ್ 145.5.

ಆರ್‌ಸಿಬಿಗೆ ಅವರ ಬ್ಯಾಟಿಂಗ್ ದೊಡ್ಡ ಶಕ್ತಿ. ಇತ್ತ ಕೆಎಲ್ ರಾಹುಲ್ ಡಿಸಿಗೆ ಮಿಂಚಿನ ಫಾರ್ಮ್‌ನಲ್ಲಿದ್ದಾರೆ. ಏಳು ಪಂದ್ಯಗಳಿಂದ 323 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 153.8, ಮತ್ತು ಸರಾಸರಿ 64.6. ರಾಹುಲ್ ಈಗ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಇಬ್ಬರ ಕಾದಾಟ ಈ ಪಂದ್ಯದ ಹೈಲೈಟ್. ಜೊತೆಗೆ ಬೆಂಗಳೂರಿನಲ್ಲಿ ಗೆದ್ದು ಸೆಲೆಬ್ರೇಷನ್ ಮಾಡಿ ರಾಹುಲ್‌ ಇದು ನನ್ನ ಗ್ರೌಂಡ್‌ ಅಂದಿದ್ರು. ಇವತ್ತು ಕೊಹ್ಲಿ ತಮ್ಮ ಹೋಮ್‌ ಗ್ರೌಂಡ್‌ ದೆಹಲಿಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಬಹುದು ಅಂತಿದ್ದಾರೆ ಫ್ಯಾನ್ಸ್‌‌.

ಡಿಸಿಯ ಮಿಚೆಲ್ ಸ್ಟಾರ್ಕ್ ಮತ್ತು ಆರ್‌ಸಿಬಿಯ ಜೋಶ್ ಹ್ಯಾಜಲ್‌ವುಡ್ ಈ ಪಂದ್ಯದಲ್ಲಿ ಮುಖ್ಯ. ಸ್ಟಾರ್ಕ್ ರಾಜಸ್ಥಾನ ರಾಯಲ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆಲುವು ತಂದಿದ್ದಾರೆ. ಆದರೆ, ಪವರ್‌ಪ್ಲೇಯಲ್ಲಿ ಅವರು ರನ್‌ಗಳನ್ನು ಕೊಟ್ಟಿದ್ದಾರೆ. ಹ್ಯಾಜಲ್‌ವುಡ್ ಈ ಋತುವಿನಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಆರ್‌ಆರ್ ವಿರುದ್ಧ ಕೊನೆಯ ಓವರ್‌ಗಳಲ್ಲಿ ಶಕ್ತಿಶಾಲಿಯಾಗಿ ಬೌಲಿಂಗ್ ಮಾಡಿದ್ದಾರೆ. ರಾಹುಲ್ ಹ್ಯಾಜಲ್‌ವುಡ್ ವಿರುದ್ಧ 43 ಎಸೆತಗಳಲ್ಲಿ 76 ರನ್ ಗಳಿಸಿದ್ದಾರೆ. ಈ ಇಬ್ಬರ ನಡುವಿನ ಕಾದಾಟ ಕುತೂಹಲಕಾರಿಯಾಗಿದೆ.