Last Updated:
ಆರ್ಸಿಬಿ ಬೌಲರ್ಗಳು ಡೆಲ್ಲಿ ತಂಡವನ್ನು 162 ರನ್ಗಳಿಗೆ ನಿಯಂತ್ರಿಸಿದರು. ಡೆಲ್ಲಿ ಪರ ಕೆಎಲ್ ರಾಹುಲ್ 41, ಟ್ರಿಸ್ಟಾನ್ ಸ್ಟಬ್ಸ್ 34, ಅಭಿಷೇಕ್ ಪೊರೆಲ್ 28 ರನ್ಗಳಿಸಿದರು.
ಸೇಡಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ಗಳು ಅಮೋಘ ಪ್ರದರ್ಶನ ತೋರಿದೆ. ಡೆಲ್ಲಿಯಂತಹ ಅದ್ಭುತ ಬ್ಯಾಟಿಂಗ್ ಸ್ನೇಹಿ ವಿಕೆಟ್ನಲ್ಲಿ ಆರ್ಸಿಬಿ ಬೌಲರ್ಗಳು ಡೆಲ್ಲಿ ತಂಡವನ್ನು 162 ರನ್ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ 41, ಟ್ರಿಸ್ಟಾನ್ ಸ್ಟಬ್ಸ್ 34 , ಅಭಿಷೇಕ್ ಪೊರೆಲ್ 28 ರನ್ಗಳಿಸಿದರು. ಕಳೆದ 7 ಪಂದ್ಯಗಳಲ್ಲಿ ಈ ಮೈದಾನದಲ್ಲಿ ಇದು ಅತ್ಯಂತ ಕಡಿಮೆ ಮೊತ್ತವಾಗಿದೆ. 2024ರಿಂದ ಇಲ್ಲಿವರೆಗೆ ನಡೆದಿದ್ದ 8 ಪಂದ್ಯಗಳಲ್ಲಿ 6ರಲ್ಲಿ 200ಕ್ಕೂ ಹೆಚ್ಚು ರನ್ ಹರಿದುಬಂದಿತ್ತು. ಆದರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ 188 ರನ್ಗಳಿಸಿದ್ದ ಡೆಲ್ಲಿ, ಇಂದು ಕೇವಲ 162ಕ್ಕೆ ಸುಸ್ತಾಯಿತು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿ ಬ್ಯಾಟರ್ ಅಭಿಷೇಕ್ ಪೊರೆಲ್ ಸ್ಫೋಟಕ ಆಟಕ್ಕೆ ಯತ್ನಿಸಿ 11 ಎಸೆತಗಲಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 28 ರನ್ಗಳಿಸಿ ಪವರ್ ಪ್ಲೇನಲ್ಲೇ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡು ಬಂದಿದ್ದ ಫಾಫ್ ಡುಪ್ಲೆಸಿಸ್ ಆರ್ಸಿಬಿ ದಾಳಿಗೆ ತತ್ತರಿಸಿತು. 26 ಎಸೆತಗಳಲ್ಲಿ ಕೇವಲ 2 ಬೌಂಡರಿ ಸಹಿತ 22 ರನ್ಗಳಿಸಿ ಕೃನಾಲ್ ಪಾಂಡ್ಯ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಔಟ್ ಆದರು. ಕರುಣ್ ನಾಯರ್ ಕೇವಲ 4 ರನ್ಗಳಿಸಿ ದಯಾಳ್ ಬೌಲಿಂಗ್ನಲ್ಲಿ ಭುವನೇಶ್ವರ್ಗೆ ಕ್ಯಾಚ್ ನೀಡಿದರು.
ಅದ್ಭುತ ಫಾರ್ಮ್ನಲ್ಲಿ ಕೆಎಲ್ ರಾಹುಲ್ ಕೂಡ ಇಂದು ರನ್ಗಳಿಸಲು ಪರದಾಡಿದರು. 39 ಎಸೆತಗಳಲ್ಲಿ 3 ಬೌಂಡರಿ ಸಹಿತ 41 ರನ್ಗಳಿಸಿ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಅಕ್ಷರ್ ಪಟೇಲ್ ಆಟ ಕೇವಲ 15ಕ್ಕೆ ಅಂತ್ಯವಾಯಿತು. ಕೊನೆಯಲ್ಲಿ ಅಬ್ಬರಿಸಿದ ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 34 ರನ್ಗಳಿಸಿದರು. ಅಶುತೋಷ್ ಶರ್ಮಾ 2 ರನ್, ವಿಪ್ರಜ್ ನಿಗಂ 12 ರನ್ಗಳಿಸಿದರು.
ಆರ್ಸಿಬಿ ಪರ ಭುವನೇಶ್ವರ್ ಕುಮಾರ್ 33ಕ್ಕೆ 3, ಜೋಶ್ ಹ್ಯಾಜಲ್ವುಡ್ 36ಕ್ಕೆ2, ಕೃನಾಲ್ ಪಾಂಡ್ಯ 28ಕ್ಕೆ1, ಯಶ್ ದಯಾಳ್ 42ಕ್ಕೆ1 ವಿಕೆಟ್ ಪಡೆದು ಮಿಂಚಿದರು.
April 27, 2025 9:24 PM IST