Last Updated:
ಬಿಗ್ ಟಾರ್ಗೆಟ್ ಬೆನ್ನಟ್ಟುವಾಗ ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್ ಬ್ಯಾಟರ್ ಹಾಗೂ ನಾಯಕನಾಗಿದ್ದ ಜಿತೇಶ್ ಶರ್ಮಾ ಭರ್ಜರಿ ಆಟ ಪ್ರದರ್ಶಿಸಿದರು. ಈ ವೇಳೆ 17ನೇ ಓವರ್ ಬೌಲಿಂಗ್ಗೆ ಬಂದ ದಿಗ್ವೇಶ್ ರಾತಿ ಮಾಡಿದ ರನೌಟ್ ಪ್ರಯತ್ನ ಆರ್ಸಿಬಿ ಅಭಿಮಾನಿಗಳನ್ನ ಕೆರಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಲಖನೌನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಆರ್ಸಿಬಿ ಗೆಲುವಿಗೆ ಬರೋಬ್ಬರಿ 228 ರನ್ಗಳ ಬಿಗ್ ಟಾರ್ಗೆಟ್ ನೀಡಿತ್ತು. ಈ ಬಿಗ್ ಟಾರ್ಗೆಟ್ ಬೆನ್ನಟ್ಟುವಾಗ ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್ ಬ್ಯಾಟರ್ ಹಾಗೂ ನಾಯಕನಾಗಿದ್ದ ಜಿತೇಶ್ ಶರ್ಮಾ ಭರ್ಜರಿ ಆಟ ಪ್ರದರ್ಶಿಸಿದರು. ಈ ವೇಳೆ 17ನೇ ಓವರ್ ಬೌಲಿಂಗ್ಗೆ ಬಂದ ದಿಗ್ವೇಶ್ ರಾತಿ ಮಾಡಿದ ರನೌಟ್ ಪ್ರಯತ್ನ ಆರ್ಸಿಬಿ ಅಭಿಮಾನಿಗಳನ್ನ ಕೆರಳಿಸಿದೆ.
ಹೌದು, ತೀರಾ ಅನಿವಾರ್ಯದ ಸಂದರ್ಭದಲ್ಲಿ, ತಂಡಕ್ಕೆ ಗೆಲುವು ಅಗತ್ಯವಿರುವ ಸಂದರ್ಭದಲ್ಲಿ ಮಾತ್ರ ಕೆಲವು ಆಟಗಾರರು ಬಳಸುವ ಮಂಕಡ್ ರನೌಟ್ ಮಾಡುವ ಯತ್ನವನ್ನು ಜಿತೇಶ್ ಶರ್ಮಾ ಮೇಲೆ ದಗ್ವೇಶ್ ರಾಥಿ ಯತ್ನಿಸುತ್ತಾರೆ. ಅಪೀಲ್ ಕೂಡ ಮಾಡಿ ಥರ್ಡ್ ಅಂಪೈರ್ಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ರಿಷಬ್ ಪಂಥ್ ಅವರು ಅಂಪೈರ್ ಜೊತೆ ಮಾತನಾಡಿ, ಔಟ್ ಮನವಿಯನ್ನು ಹಿಂಪಡೆಯುತ್ತಾರೆ. ದಿಗ್ಗವೇಶ್ ರಾತಿ ಹೀಗೆ ಮಾಡುವಾಗ ಆರ್ಸಿಬಿಗೆ ಪ್ರಮುಖ ಪಂದ್ಯದಲ್ಲಿ ಗೆಲ್ಲಲು 19 ಎಸೆತಗಳಲ್ಲಿ 28 ರನ್ ಅಗತ್ಯವಿತ್ತು. ಈ ಹಂತದಲ್ಲಿ ಹೀಗೆ ಮಾಡಲು ಮುಂದಾಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕ್ರೀಡಾಸ್ಫೋರ್ತಿ ಮೆರೆದ ರಿಷಬ್ ಪಂತ್
ಹೌದು, ದಿಗ್ವೇಶ್ ಶರ್ಮಾ ಮಂಕಡ್ ರನೌಟ್ಗೆ ಮನವಿ ಮಾಡಿದಾಗ ಅವರನ್ನು ಮನವೊಲಿಸಿ ತೀರ್ಪನ್ನು ಮರುಪರಿಶೀಲಿಸುವಂತೆ ಮಾಡಿದ್ದು, ಲಖನೌ ನಾಯಕ ರಿಷಬ್ ಪಂತ್. ಹಾಗಾಗಿ ಒಂದೆಡೆ ಪಂತ್ ನಡೆಗೆ ಕ್ರಿಕೆಟ್ ಪ್ರೇಮಿಗಳು ಶ್ಲಾಘನೆ ವ್ಯಕ್ತಪಡಿಸಿದರೆ, ಇನ್ನೊಂದೆಡೆ ದಿಗ್ವೇಶ್ ನಡೆಗೆ ಚೀ, ಥೂ ಎಂದು ಕಿಡಿಕಾರುತ್ತಿದ್ದಾರೆ. ಅಂತಿಮವಾಗಿ ಜಿತೇಶ್ ಶರ್ಮಾ 33 ಎಸೆತಗಳಲ್ಲಿ 85 ರನ್ ಸಿಡಿಸಿ ನಾಟೌಟ್ ಆಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ 23 ಎಸೆತಗಳಲ್ಲಿ 41 ರನ್ ಸಿಡಿಸಿದ ಮಯಾಂಕ್ ಅಗರ್ವಾಲ್ ಗೆಲುವಿನ ಹೀರೋ ಆದರು.
ಅಬ್ಬರಿಸಿದ ಆರ್ಸಿಬಿ ಬ್ಯಾಟರ್ಸ್
ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ 228ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿತು. ಫಿಲ್ ಸಾಲ್ಟ್ 19 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 30 ರನ್ಗಳಿಸಿದರು. ನಂತರ ಬಂದ ರಜತ್ ಪಾಟೀದಾರ್ 7 ಎಸೆತಗಳಲ್ಲಿ ತಲಾ 1 ಬೌಂಡರಿ, 1 ಸಿಕ್ಸರ್ ಸಹಿತ 13 ರನ್ಗಳಿಸಿ ಓರೂರ್ಕ್ ಬೌಲಿಂಗ್ನಲ್ಲಿ ಸಮದ್ಗೆ ಕ್ಯಾಚ್ ನೀಡಿದರು, ಅದೇ ಓವರ್ನ ನಂತರದ ಎಸೆತದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ (0) ಗೋಲ್ಡನ್ ಡಕ್ ಆದರು.
90ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಮಯಾಂಕ್ ಅಗರ್ವಾಲ್ ಕೊಹ್ಲಿ ಜೊತೆ ಸೇರಿ 33 ರನ್ ಸೇರಿಸಿದರು. 30 ಎಸೆತಗಳಲ್ಲಿ 10 ಬೌಂಡರಿ ಸಹಿತ 54 ರನ್ಗಳಿಸಿದ್ದ ಕೊಹ್ಲಿ ಆವೇಶ್ ಖಾನ್ಗೆ ವಿಕೆಟ್ ಒಪ್ಪಿಸಿದರು.
ಪ್ಲೇ ಆಫ್ ರೇಸ್ನಿಂದ ಈಗಾಗಲೇ ಹೊರಬಿದ್ದಿರುವ ಲಖನೌ ತಂಡ ಕೇವಲ ಗೆಲುವಿನೊಂದಿಗೆ ಅಭಿಯಾನ ಅಂತ್ಯಗೊಳಿಸುವ ಪಂದ್ಯದಲ್ಲಿ ಅಕ್ಷರಃ ಅಬ್ಬರಿಸಿತು. ಇನ್ನಿಂಗ್ಸ್ ಆರಂಭಿಸಿದ 3ನೇ ಓವರ್ನಲ್ಲೇ ಮ್ಯಾಥ್ಯೂ ಬ್ರೀಡ್ಜ್ಕ್ (14) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಪಂತ್ ಮತ್ತು ಮಾರ್ಷ್ 78 ಎಸೆತಗಳಲ್ಲಿ 152 ರನ್ಗಳ ಜೊತೆಯಾಟ ನೀಡಿದರು.
ಎಲ್ಎಸ್ಜಿ ಪರ ಮಿಂಚಿದ ಮಾರ್ಷ್
ಗೋಲ್ಡನ್ ಫಾರ್ಮ್ನಲ್ಲಿರುವ ಮಿಚೆಲ್ ಮಾರ್ಷ್ ಈ ಪಂದ್ಯದಲ್ಲೂ ಅಬ್ಬರಿಸಿದರು. ಕೇವಲ 35 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ಸಹಿತ 67 ರನ್ಗಳಿಸಿ 16ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಪಂತ್ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್ಗಳ ಸಹಿತ ಅಜೇಯ 118 ರನ್ಗಳಿಸಿದರು. ನಿಕೋಲಸ್ ಪೂರನ್ 10 ಎಸೆತಗಳಲ್ಲಿ 13 ರನ್ಗಳಿಸಿ ಔಟ್ ಆದರು.
May 27, 2025 11:46 PM IST