Last Updated:
ಪಂತ್ ಶತಕ ಹಾಗೂ ಮಿಚೆಲ್ ಮಾರ್ಷ್ ಸಿಡಿಸಿದ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಸಿಡಿಸಿದ ಅಬ್ಬರದ ಶತಕದ ನೆರೆವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಆರ್ಸಿಬಿಗೆ 228 ರನ್ಗಳ ಬೃಹತ್ ಗುರಿ ನೀಡಿದೆ. ಈ ಪಂದ್ಯ ಆರ್ಸಿಬಿ ಅಗ್ರ 2 ಸ್ಥಾನಕ್ಕೇರಲು ಕೊನೆಯ ಅವಕಾಶವಾಗಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳು ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ಪಂತ್ ಶತಕ ಹಾಗೂ ಮಿಚೆಲ್ ಮಾರ್ಷ್ ಸಿಡಿಸಿದ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಪ್ಲೇ ಆಫ್ ರೇಸ್ನಿಂದ ಈಗಾಗಲೇ ಹೊರಬಿದ್ದಿರುವ ಲಖನೌ ತಂಡ ಕೇವಲ ಗೆಲುವಿನೊಂದಿಗೆ ಅಭಿಯಾನ ಅಂತ್ಯಗೊಳಿಸುವ ಪಂದ್ಯದಲ್ಲಿ ಅಕ್ಷರಃ ಅಬ್ಬರಿಸಿತು. ಇನ್ನಿಂಗ್ಸ್ ಆರಂಭಿಸಿದ 3ನೇ ಓವರ್ನಲ್ಲೇ ಮ್ಯಾಥ್ಯೂ ಬ್ರೀಡ್ಜ್ಕ್ (14) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಪಂತ್ ಮತ್ತು ಮಾರ್ಷ್ 78 ಎಸೆತಗಳಲ್ಲಿ 152 ರನ್ಗಳ ಜೊತೆಯಾಟ ನೀಡಿದರು.
ಗೋಲ್ಡನ್ ಫಾರ್ಮ್ನಲ್ಲಿರುವ ಮಿಚೆಲ್ ಮಾರ್ಷ್ ಈ ಪಂದ್ಯದಲ್ಲೂ ಅಬ್ಬರಿಸಿದರು. ಕೇವಲ 35 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ಸಹಿತ 67 ರನ್ಗಳಿಸಿ 16ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಪಂತ್ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್ಗಳ ಸಹಿತ ಅಜೇಯ 118 ರನ್ಗಳಿಸಿದರು. ನಿಕೋಲಸ್ ಪೂರನ್ 10 ಎಸೆತಗಳಲ್ಲಿ 13 ರನ್ಗಳಿಸಿ ಔಟ್ ಆದರು.
ಆರ್ಸಿಬಿ ಪರ ನುವಾನ್ ತುಷಾರ ಹೊರೆತುಪಡಿಸಿ ಎಲ್ಲರೂ ಕಳಪೆ ಬೌಲಿಂಗ್ ಪ್ರದರ್ಶನ ತೋರಿದರು. ತುಷಾರ 26ಕ್ಕೆ1, ಭುವನೇಶ್ವರ್ ಕುಮಾರ್ 46ಕ್ಕೆ1, ರೊಮಾರಿಯೋ ಶೆಫರ್ಡ್ 51ಕ್ಕೆ 1 ವಿಕೆಟ್ ಪಡೆದರು. ಸುಯಾಶ್ ಶರ್ಮಾ 3 ಓವರ್ಗೆ 39 ರನ, ಯಶ್ ದಯಾಳ್ 3 ಓವರ್ಗೆ 44 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಆರ್ಸಿಬಿ ಅಂಕಪಟ್ಟಿಯಲ್ಲಿ ಟಾಪ್ 2 ರಲ್ಲಿ ಅಂತ್ಯಗೊಳಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ ಬೌಲರ್ಗಳು ಕಳಪೆ ಪ್ರದರ್ಶನದಿಂದ 228ರನ್ಗಳ ಬೃಹತ್ ಗುರಿ ಬೆನ್ನಟ್ಟುವ ಸವಾಲು ಎದುರಾಗಿದೆ. ಈ ಪಿಚ್ ಬ್ಯಾಟಿಂಗ್ಗೆ ಅನುಕೂಲಕರವಾಗಿದ್ದು, ಆರ್ಸಿಬಿ ಬ್ಯಾಟರ್ಗಳು ಜಾಗರೂಕತೆಯಿಂದ ಆಡಿದರೆ ಗೆಲ್ಲುವ ಸಾಧ್ಯತೆ ಇದೆ.