RCB vs MI: ಹೈವೋಲ್ಟೇಜ್​ ಮ್ಯಾಚ್​​ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ! ಪಾಂಡ್ಯ ಪಡೆಗೆ ಬುಮ್ರಾ ಬಲ | MI vs RCB, IPL 2025 Mumbai Indians Win Toss Choose to Bowl First Against Royal Challengers Bengaluru

RCB vs MI: ಹೈವೋಲ್ಟೇಜ್​ ಮ್ಯಾಚ್​​ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ! ಪಾಂಡ್ಯ ಪಡೆಗೆ ಬುಮ್ರಾ ಬಲ | MI vs RCB, IPL 2025 Mumbai Indians Win Toss Choose to Bowl First Against Royal Challengers Bengaluru

ಮೊಣಕಾಲಿನ ಸಮಸ್ಯೆಯಿಂದಾಗಿ ರೋಹಿತ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿದ್ದಾರೆ. ಆದರೆ ಆರ್‌ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುತ್ತಿದೆ. ಮುಂಬೈ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರೆ, ಆರ್​ಸಿಬಿ 3 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿ 3ನೇ ಸ್ಥಾನದಲ್ಲಿದೆ.

ವಾಂಖೆಡೆಯಲ್ಲಿ ಆರ್‌ಸಿಬಿ ವಿರುದ್ಧ ಮುಂಬೈ ಪ್ರಬಲ ಪ್ರದರ್ಶನ ನೀಡಿದೆ. ಕಳೆದ 10 ವರ್ಷಗಳಲ್ಲಿ ಆರ್‌ಸಿಬಿ ಇಲ್ಲಿ ಯಾವುದೇ ಪಂದ್ಯವನ್ನು ಗೆದ್ದಿಲ್ಲ. ಇದೀಗ ಗೆದ್ದರೆ ಆರ್​ಸಿಬಿ ಇತಿಹಾಸ ನಿರ್ಮಿಸಲಿದೆ.

ಇದನ್ನೂ ಓದಿ: ಹೈವೋಲ್ಟೇಜ್​ ಮ್ಯಾಚ್​​ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ! ಪಾಂಡ್ಯ ಪಡೆಗೆ ಬುಮ್ರಾ ಬಲ

ಹೆಡ್​ ಟು ಹೆಡ್​ ದಾಖಲೆ

MI ಮತ್ತು RCB  ಐಪಿಎಲ್​​ನಲ್ಲಿ ಒಟ್ಟು 33 ಪಂದ್ಯಗಳನ್ನು ಆಡಿವೆ. ಈ ಮುಖಾಮುಖಿಯಲ್ಲಿ ಮುಂಬೈ ಮೇಲುಗೈ ಸಾಧಿಸಿದೆ. ಮುಂಬೈ ತಂಡ ಆರ್‌ಸಿಬಿಯನ್ನು 19 ಬಾರಿ ಸೋಲಿಸಿದೆ. ಅದೇ ಸಮಯದಲ್ಲಿ, ಬೆಂಗಳೂರು ತಂಡವು ಮುಂಬೈ ವಿರುದ್ಧ 14 ಪಂದ್ಯಗಳಲ್ಲಿ ಗೆದ್ದಿದೆ.

ಪಿಚ್ ರಿಪೋರ್ಟ್

ವಾಂಖೆಡೆಯಲ್ಲಿ ಮೈದಾನದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡುವುದನ್ನ ನಾವು ಕಾಣಬಹುದು. ಮುಂಬೈನ ಕೆಂಪು ಮಣ್ಣಿನ ಪಿಚ್‌ಗಳು ಬ್ಯಾಟಿಂಗ್‌ಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಇಲ್ಲಿನ ಬೌಂಡರಿ ಕೂಡ ಚಿಕ್ಕವು. ಆದರೆ ಇಬ್ಬನಿಯು  ಗುರಿಯನ್ನು ಬೆನ್ನಟ್ಟುವ ತಂಡಕ್ಕೆ ಹೆಚ್ಚಿನ ಲಾಭವಾಗುವ ಸಾಧ್ಯತೆಯಿದೆ. ಆದರೆ ಆ ಪ್ರಯೋಜನ ಎಷ್ಟು ಮಹತ್ವದ್ದಾಗಿರುತ್ತದೆ ಎಂಬುದು ಸೋಮವಾರ ರಾತ್ರಿ ಹುಲ್ಲಿನ ಮೇಲಿನ ತೇವಾಂಶದ ಮಟ್ಟವನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: ಮುಂಬೈ ವಿರುದ್ಧ ಕೇವಲ 17 ರನ್​ ಸಿಡಿಸಿದ್ರೆ ಸಾಕು, ಟಿ20ಯಲ್ಲಿ ಚರಿತ್ರೆ ಸೃಷ್ಟಿಸಲಿದ್ದಾರೆ ಕೊಹ್ಲಿ

RCB ಪ್ಲೇಯಿಂಗ್ XI: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್(c), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ(w), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಯಶ್ ದಯಾಲ್

 ಇಂಪ್ಯಾಕ್ಟ್ ಪ್ಲೇಯರ್ಸ್: MI vs RCB ಲೈವ್ ಸ್ಕೋರ್:  ರಸಿಕ್ ದಾರ್ ಸಲಾಂ, ಸುಯಾಶ್ ಶರ್ಮಾ, ಸ್ವಸ್ತಿಕ್ ಚಿಕಾರಾ, ಜಾಕೋಬ್ ಬೆಥೆಲ್, ಸ್ವಪ್ನಿಲ್ ಸಿಂಗ್

ಮುಂಬೈ ಆಡುವ XI: ವಿಲ್ ಜಾಕ್, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ವಿಘ್ನೇಶ್ ಪುತ್ತೂರ್​

ಇಂಪ್ಯಾಕ್ಟ್ ಪ್ಲೇಯರ್ಸ್: ರೋಹಿತ್ ಶರ್ಮಾ, ಕಾರ್ಬಿನ್ ಬಾಷ್, ರಾಬಿನ್ ಮಿಂಜ್, ಅಶ್ವಿನಿ ಕುಮಾರ್, ರಾಜ್ ಬಾವಾ