RCB vs PBKS: ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್​​ಸಿಬಿ! ಕೊನೆಗೂ ಆತನನ್ನ ತಂಡದಿಂದ ಹೊರಗಿಟ್ಟ ಬೆಂಗಳೂರು

RCB vs PBKS: ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್​​ಸಿಬಿ! ಕೊನೆಗೂ ಆತನನ್ನ ತಂಡದಿಂದ ಹೊರಗಿಟ್ಟ ಬೆಂಗಳೂರು

Last Updated:

ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2025ರ 37ನೇ ಪಂದ್ಯದಲ್ಲಿ ಇಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್​ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2025ರ 37ನೇ ಪಂದ್ಯದಲ್ಲಿ ಇಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್​ ಗೆದ್ದ  ಆರ್​​ಸಿಬಿ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.  ಶುಕ್ರವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ  ವಿರುದ್ಧ ಪಂಜಾಬ್​ 5 ವಿಕೆಟ್​​ಗಳಿಂದ ಗೆದ್ದಿದೆ. ಇಂದು ಪಂಜಾಬ್ ಮಣಿಸಿ ಸೇಡು ತೀರಿಸಿಕೊಳ್ಳಲು ಆರ್​ಸಿಬಿ ಕಾಯುತ್ತಿದೆ. ಒಂದು ವೇಳೆ ಪಂಜಾಬ್ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆರ್​ಸಿಬಿ ಗೆದ್ದರೆ  ಐಪಿಎಲ್ 2025 ಪಾಯಿಂಟ್ಸ್ ಟೇಬಲ್‌ನಲ್ಲಿ  5ನೇ ಸ್ಥಾನದಿಂದ 2 ಅಥವಾ 3ನೇ ಸ್ಥಾನಕ್ಕೇರಲಿದೆ.

ಇಂದು ಆರ್​ಸಿಬಿ ಕಳಪೆ ಫಾರ್ಮ್​​ನಲ್ಲಿರುವ ಲಿಯಾಮ್ ಲಿವಿಂಗ್​ಸ್ಟೋನ್ ಬದಲಿಗೆ ರೊಮಾರಿಯೋ ಶೆಫರ್ಡ್​ ಅವರಿಗೆ ಚಾನ್ಸ್ ನೀಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಯಶ್ ಹ್ಯಾಜಲ್​ವುಡ್​

ಪಂಜಾವ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಜೋಶ್ ಇಂಗ್ಲಿಸ್ (ವಿಕೀ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಮಾರ್ಕೊ ಜಾನ್ಸನ್, ಹರ್ಪ್ರೀತ್ ಬ್ರಾರ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್.

ಹೆಡ್​ ಟು ಹೆಡ್​ ದಾಖಲೆ

ಪಿಬಿಕೆಎಸ್ vs ಆರ್‌ಸಿಬಿ ಐಪಿಎಲ್ ಲೈವ್ ಸ್ಕೋರ್- ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್‌ನಲ್ಲಿ 34 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಪಂಜಾಬ್ 18 ಪಂದ್ಯಗಳನ್ನು ಗೆದ್ದಿದ್ದರೆ, ಬೆಂಗಳೂರು 16 ಪಂದ್ಯಗಳನ್ನು ಗೆದ್ದಿದೆ. ಎರಡು ದಿನಗಳ ಹಿಂದೆಯಷ್ಟೇ ಪಂಜಾಬ್ ತಂಡ ಆರ್‌ಸಿಬಿಯನ್ನು ತಮ್ಮ ತವರು ನೆಲದಲ್ಲಿ ಸೋಲಿಸಿತ್ತು. ಈಗ ಸೇಡು ತೀರಿಸಿಕೊಳ್ಳುವ ಸರದಿ ಬೆಂಗಳೂರಿನದು.