RCB vs PBKS: ತವರಿನ ಅಂಗಳದಲ್ಲಿ ಆರ್​​ಸಿಬಿಗೆ ಭಾರೀ ಮುಖಭಂಗ! ಬೆಂಗಳೂರಿನಲ್ಲಿ ಭರ್ಜರಿ ಜಯ ಸಾಧಿಸಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಪಂಜಾಬ್ | IPL 2025 Nehal Wadhera Punjab Kings Bowlers Clinch Victory against rcb

RCB vs PBKS: ತವರಿನ ಅಂಗಳದಲ್ಲಿ ಆರ್​​ಸಿಬಿಗೆ ಭಾರೀ ಮುಖಭಂಗ! ಬೆಂಗಳೂರಿನಲ್ಲಿ ಭರ್ಜರಿ ಜಯ ಸಾಧಿಸಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಪಂಜಾಬ್ | IPL 2025 Nehal Wadhera Punjab Kings Bowlers Clinch Victory against rcb

Last Updated:

ಪಂಜಾಬ್ ಕಿಂಗ್ಸ್ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಹೀನಾಯ ಸೋಲು ಕಂಡಿದೆ. ಇದು ಬೆಂಗಳೂರಿನಲ್ಲಿ ಆರ್​​ಸಿಬಿ ಸತತ 3ನೇ ಸೋಲಾಗಿದೆ.

ಪಂಜಾಬ್ ಕಿಂಗ್ಸ್​ಗೆ ಶರಣಾದ ಆರ್​​ಸಿಬಿಪಂಜಾಬ್ ಕಿಂಗ್ಸ್​ಗೆ ಶರಣಾದ ಆರ್​​ಸಿಬಿ
ಪಂಜಾಬ್ ಕಿಂಗ್ಸ್​ಗೆ ಶರಣಾದ ಆರ್​​ಸಿಬಿ

ಪಂಜಾಬ್ ಕಿಂಗ್ಸ್ ವಿರುದ್ಧ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಹೀನಾಯ ಸೋಲು ಕಂಡಿದೆ. ತವರಿನಲ್ಲಿ ಸತತ 3ನೇ ಪಂದ್ಯದಲ್ಲಿ ಬ್ಯಾಟರ್​ಗಳ ಸಂಪೂರ್ಣ ವೈಫಲ್ಯದಿಂದ ಹೀನಾಯ ಸೋಲು ಕಂಡಿದೆ. ಮಳೆಯಿಂದ 14 ಓವರ್​ಗಳಿಗೆ ಕಡಿತವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 9 ವಿಕೆಟ್ ಕಳೆದುಕೊಂಡು 95ರನ್​ಗಳಿಸಿತ್ತು. 96ರನ್​ಗಳ ಗುರಿಯನ್ನ ಪಂಜಾಬ್ ಕಿಂಗ್ಸ್ 13 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಗೆಲಯವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಗೆಲುವು ಪಡೆದು 2ನೇ ಸ್ಥಾನಕ್ಕೇರಿದರು.

96 ರನ್​​ಗಳ ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 12.1 ಓವರ್​ಗಳಲ್ಲಿ ಗೆಲುವು ಸಾಧಿಸಿತು. ನೆಹಾಲ್ ವಧೇರಾ 19 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್ ಸಹಿತ ಅಜೇಯ 33 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನ ಅಂಗಳದಲ್ಲಿ ಮತ್ತೆ ವೈಫಲ್ಯ ಅನುಭವಿಸಿತು.

ತವರಿನಲ್ಲಿ ಸತತ 3ನೇ ಪಂದ್ಯದಲ್ಲಿ ಟಾಸ್​ ಸೋಲು ಕಂಡ ಆರ್​​​ಸಿಬಿ, ಇಂದೂ ಕೂಡ ಉತ್ತಮ ಆರಂಭ ಪಡೆಯುವಲ್ಲಿ ಸಂಪೂರ್ಣ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಫಿಲ್​ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಇಂದು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಸಾಲ್ಟ್ 4, ಕೊಹ್ಲಿ 1 ರನ್​ಗಳಿಸಿ ಅರ್ಶದೀಪ್ ಸಿಂಗ್​​ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಲಿಯಾಮ್ ಲಿವಿಂಗ್​ಸ್ಟೋನ್ (4) , ಜಿತೇಶ್​ ಶರ್ಮಾ (2), ಕೃನಾಲ್ ಪಾಂಡ್ಯ (1) ಕೂಡ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಇಳಿದಿದ್ದ ರಜತ್ ಪಾಟೀದಾರ್ 18 ಎಸೆತಗಳಲ್ಲಿ 23 ರನ್​ಗಳಿಸಿದರೆ, ಟಿಮ್ ಡೇವಿಡ್ ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಭುವನೇಶ್ವರ್ ಕುಮಾರ್ 8 ರನ್​ಗಳಿಸಿದರೆ, ಯಶ್ ದಯಾಳ್ (0)ಡಕ್ ಔಟ್ ಆದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

RCB vs PBKS: ತವರಿನ ಅಂಗಳದಲ್ಲಿ ಆರ್​​ಸಿಬಿಗೆ ಭಾರೀ ಮುಖಭಂಗ! ಬೆಂಗಳೂರಿನಲ್ಲಿ ಭರ್ಜರಿ ಜಯ ಸಾಧಿಸಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಪಂಜಾಬ್