RCB vs RR: ಅಯ್ಯೋ.. ಮತ್ತೆ ಟಾಸ್ ಸೋತ ಆರ್​ಸಿಬಿ! ಚಿನ್ನಸ್ವಾಮಿಯಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್​​ | RCB vs RR Rajasthan Royals Win Toss Opt to Bowl First Against Royal Challengers Bengaluru

RCB vs RR: ಅಯ್ಯೋ.. ಮತ್ತೆ ಟಾಸ್ ಸೋತ ಆರ್​ಸಿಬಿ! ಚಿನ್ನಸ್ವಾಮಿಯಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್​​ | RCB vs RR Rajasthan Royals Win Toss Opt to Bowl First Against Royal Challengers Bengaluru

ಟಾಸ್ ಗೆದ್ದ ರಾಜಸ್ಥಾನ ನಾಯಕ ರಿಯಾನ್ ಪರಾಗ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಒಂದು ಬದಲಾವಣೆ ತರಲಾಗಿದ್ದು, ಮಹೇಶ್ ತೀಕ್ಷಣಾ ಬದಲಿಗೆ ಫಜಲ್ಹಕ್ ಫಾರೂಕಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ: ಮತ್ತೊಬ್ಬ ಧೋನಿ ಎನಿಸಿಕೊಳ್ಳಲು ಹೋಗಿ, ಜೋಕರ್ ಆದ ಪಂತ್! ನೀರಲ್ಲಿ ಹೋಮವಾಯ್ತಾ ₹27 ಕೋಟಿ?

2025ರಲ್ಲಿ 2 ತಂಡಗಳ ಪ್ರದರ್ಶನ

ಐಪಿಎಲ್ 2025 ರಲ್ಲಿ ಎದುರಾಳಿ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ತವರಿನಲ್ಲಿ ಗೆಲುವು ಮರೀಚಿಕೆಯಾಗಿದೆ. ಈ ಟೂರ್ನಿಯಲ್ಲಿ ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ ಆಡಿರುವ ಮೂರು ಪಂದ್ಯಗಳನ್ನು ಆಡಿದ್ದು, ಅವೆಲ್ಲದರಲ್ಲೂ ಆರ್​​ಸಿಬಿ ಸೋಲನುಭವಿಸಿದೆ. ಆದರೆ ಅದು ಕೋಲ್ಕತ್ತಾ, ಚೆನ್ನೈ, ಮುಂಬೈ, ರಾಜಸ್ಥಾನ ಮತ್ತು ಪಂಜಾಬ್ ನೆಲದಲ್ಲಿ ಜಯಗಳಿಸಿದೆ.

IPL 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ನಿರೀಕ್ಷಿಸಿದಷ್ಟು ಪ್ರದರ್ಶನ ನೀಡಿಲ್ಲ. ರಾಜಸ್ಥಾನ್ ಎಂಟು ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಮಾತ್ರ ಗೆದ್ದಿದೆ. ತಂಡವು 6 ಪಂದ್ಯಗಳಲ್ಲಿ ಸೋತಿದೆ. ತಂಡವು ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಹೆಡ್ ಟು ಹೆಡ್ ದಾಖಲೆಗಳು

ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ 30 ಪಂದ್ಯಗಳು ನಡೆದಿವೆ. ಆ ಪೈಕಿ ಆರ್‌ಸಿಬಿ 16 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ರಾಜಸ್ಥಾನ ಇನ್ನೂ 14 ಪಂದ್ಯಗಳನ್ನು ಗೆದ್ದಿದೆ. ಈ ಎರಡೂ ತಂಡಗಳ ನಡುವಿನ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ: ಪಹಲ್ಗಾಮ್​​ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಭಾರತ-ಪಾಕಿಸ್ತಾನ ಕ್ರಿಕೆಟ್​ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಶುಭಂ ದುಬೆ, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಫಜಲ್ಹಕ್ ಫರೂಕಿ, ಅರ್ಷದೀಪ್ ಸಿಂಗ್, ಸಂದೀಪ್ ಶರ್ಮಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್,  ಜೋಶ್ ಹ್ಯಾಜಲ್​​ವುಡ್, ಯಶ್ ದಯಾಳ್