Last Updated:
ಆರ್ಸಿಬಿ ತಂಡ 2025 ಐಪಿಎಲ್ನಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ತಿರುಮಲ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದೆ. ನಾಯಕ ರಜತ್ ಪಾಟಿದಾರ್, ಜಿತೇಶ್ ಕುಮಾರ್, ಶ್ರೇಯಸ್ ಪಾಟೀಲ್ ದರ್ಶನ ಪಡೆದರು.
ಐಪಿಎಲ್ 2025ರ (IPL 2025) ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ ನಂಬರ್ 01 ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಸದಸ್ಯರು ತಿರುಮಲ ತಿರುಪತಿ ತಿಮ್ಮಪ್ಪನ (Tirumala Tirupati Devasthanams) ದರ್ಶನ ಪಡೆದುಕೊಂಡಿದ್ದಾರೆ. ತಂಡದ ನಾಯಕರಾದ ರಜತ್ ಪಾಟಿದಾರ್, ಜಿತೇಷ್ ಕುಮಾರ್, ಮಹಿಳಾ ಆಟಗಾರ್ತಿ ಶ್ರೇಯಂಕಾ ಪಾಟೀಲ್ (Shreyanka Patil) ಅವರು ಶ್ರೀ ವೆಂಕಟೇಶ್ವರ ದರ್ಶನ ಪಡೆದುಕಪಂಡಿದ್ದಾರೆ. ಟಿಟಿಡಿ (TTD) ಸದಸ್ಯರು ಆರ್ಸಿಬಿ ಆಟಗಾರರಿಗೆ ವಿವಿಐಪಿ ದರ್ಶನ (VVIP Darshan) ವ್ಯವಸ್ಥೆಯನ್ನು ಮಾಡಿದ್ದು, ತಂಡದ ಗೆಲುವಿಗೆ ಕೃತಜ್ಞತೆ ಸಲ್ಲಿಕೆ ಮಾಡಲು ದೇವಾಲಯಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.
2025 ಆವೃತ್ತಿಯಲ್ಲಿ ಆರ್ಸಿಬಿ ತಂಡ ಭರ್ಜರಿ ಪ್ರದರ್ಶನ ನೀಡುತ್ತಿರುವುದು ನಿಮಗೆ ತಿಳಿದಿದೆ. 10 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಪಡೆದಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆರ್ಸಿಬಿ ನಾಯಕ ರಜತ್ ಪಟಿದಾರ್, ವಿಕೆಟ್ ಕೀಪರ್ ಜಿತೇಶ್ ಕುಮಾರ್ ಮತ್ತು ಟೀಮ್ ಇಂಡಿಯಾ ಮಹಿಳಾ ಕ್ರಿಕೆಟಿಗ ಶ್ರೇಯಾಂಕ ಪಾಟೀಲ್ ಬುಧವಾರ ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಟಿಟಿಡಿ ಅಧಿಕಾರಿಗಳು ಆರ್ಸಿಬಿ ಆಟಗಾರರ ಜೊತೆಗಿದ್ದ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಇದೇ ವೇಳೆ ತಮ್ಮ ನೆಚ್ಚಿನ ಆಟಗಾರರನ್ನು ನೋಡಿದ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಆಟಗಾರರೊಂದಿಗೆ ಸೆಲ್ಫಿಗಾಗಿ ಮುಗಿಬಿದಿದ್ದರು.
ಈ ಆವೃತ್ತಿಯಲ್ಲಿ ಸತತ ಗೆಲುವುಗಳೊಂದಿಗೆ ಆರ್ಸಿಬಿ ತಂಡ ಮುನ್ನುಗುತ್ತಿದ್ದು, ಪ್ಲೇ ಆಫ್ಸ್ ಪ್ರವೇಶಕ್ಕೆ ಒಂದು ಹೆಜ್ಜೆಯಷ್ಟೇ ಬಾಕಿ ಇದೆ. ಉಳಿದ ನಾಲ್ಕು ಪಂದ್ಯದಲ್ಲಿ ಒಂದರಲ್ಲಿ ಜಯ ಗಳಿಸಿದರೂ ಕೂಡ 16 ಅಂಕಗಳೊಂದಿಗೆ ಪ್ಲೇ ಆಫ್ಸ್ ಪ್ರವೇಶಿಸುವ ಅವಕಾಶವನ್ನು ಪಡೆದುಕೊಳ್ಳಲಿದೆ.
ಆದರೆ ಈಗ ಆರ್ಸಿಬಿ ಟಾರ್ಗೆಟ್ ಟಾಪ್ ಎರಡು ಸ್ಥಾನಗಳ ಮೇಲೆ ಇದೆ, ಏಕೆಂದರೆ ಪ್ಲೇ ಆಫ್ಸ್ ನಲ್ಲಿ ಮೊದಲ ಎರಡು ಸ್ಥಾನದಲ್ಲಿ ನಿಲ್ಲುವ ತಂಡಗಳ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುತ್ತೆ. ಆ ಪಂದ್ಯದಲ್ಲಿ ಗೆಲುವು ಪಡೆದರೆ ನೇರವಾಗಿ ಫೈನಲ್ ತಲುಪುವ ಅವಕಾಶ ಸಿಗಲಿದೆ. ಒಂದೊಮ್ಮೆ ಸೋಲುಂಡರೂ ಮತ್ತೊಂದು ಅವಕಾಶ ಲಭ್ಯವಾಗಲಿದೆ.
ಎಲಿಮಿನೇಟರ್ ನಲ್ಲಿ ಗೆಲುವು ಪಡೆದ ತಂಡದೊಂದಿಗೆ ಕ್ವಾಲಿಫೈಯರ್ 2ನೇ ಪಂದ್ಯವನ್ನು ಆಡುವ ಅವಕಾಶ ಸಿಗುತ್ತೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು ಫೈನಲ್ ಸೇರುವ ಅವಕಾಶ ಮಿಸ್ ಆದರೂ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮತ್ತೊಂದು ಚಾನ್ಸ್ ಸಿಗಲಿದೆ. ಆದ್ದರಿಂದಲೇ ಪ್ರತಿಯೊಂದು ತಂಡವೂ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಳ್ಳಲು ಪೈಪೋಟಿ ನಡೆಸುತ್ತವೆ, ಆರ್ಸಿಬಿ ಟಾರ್ಗೆಟ್ ಕೂಡ ಇದೆ ಅಂತ ಹೇಳಬಹುದು.
Tirumala,Chittoor,Andhra Pradesh