ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆಶಸ್ ಸರಣಿ 2025ರ ಬಗ್ಗೆ ಮಾತನಾಡುವಾಗ, ರಿಕಿ ಪಾಂಟಿಂಗ್ ತಮ್ಮ ವೃತ್ತಿಜೀವನದಲ್ಲಿ ಎದುರಾದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಬಗ್ಗೆ ವಿವರಿಸಿದ್ದಾರೆ. “ನನ್ನ ಕಾಲದಲ್ಲಿ, ಬ್ರಿಯಾನ್ ಲಾರಾ ಅತ್ಯಂತ ಕೌಶಲ್ಯಪೂರ್ಣ ಬ್ಯಾಟ್ಸ್‌ಮನ್. ನಾನು ಆಸ್ಟ್ರೇಲಿಯಾದ ನಾಯಕನಾಗಿದ್ದಾಗ, ಲಾರಾ ವಿರುದ್ಧ ತಂತ್ರ ರೂಪಿಸುವುದು ನನಗೆ ನಿದ್ದೆಗೆಡಿಸಿತ್ತು. ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಕೂಡ ತಾಂತ್ರಿಕವಾಗಿ ಶ್ರೇಷ್ಠರಾಗಿದ್ದರು, ಆದರೆ ಲಾರಾ ಅವರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಿದ್ದರು ” ಎಂದು ಪಾಂಟಿಂಗ್ ಹೇಳಿದ್ದಾರೆ.
ಲಾರಾ ಅವರ ಆಟದ ಶೈಲಿ, ಶಾಟ್‌ಗಳ ಆಯ್ಕೆ, ಮತ್ತು ಕಠಿಣ ಪರಿಸ್ಥಿತಿಗಳಲ್ಲಿ ರನ್ ಗಳಿಸುವ ಸಾಮರ್ಥ್ಯವನ್ನು ಪಾಂಟಿಂಗ್ ಶ್ಲಾಘಿಸಿದರು. ಲಾರಾ ಟೆಸ್ಟ್ ಕ್ರಿಕೆಟ್‌ನಲ್ಲಿ 400 ರನ್‌ಗಳ ವೈಯಕ್ತಿಕ ದಾಖಲೆ (ಇಂಗ್ಲೆಂಡ್ ವಿರುದ್ಧ, 2004) ವಿಶ್ವ ಕ್ರಿಕೆಟ್‌ನಲ್ಲಿ ದಂತಕತೆಯಾಗಿದ್ದಾರೆ.
ಪಾಂಟಿಂಗ್ ಈಗಿನ ಯುಗದ ಕೌಶಲ್ಯಪೂರ್ಣ ಬ್ಯಾಟ್ಸ್‌ಮನ್‌ಗಳ ಬಗ್ಗೆಯೂ ಮಾತನಾಡಿದರು. “ಪ್ರಸ್ತುತ ಆಟಗಾರರಲ್ಲಿ, ಇಂಗ್ಲೆಂಡ್‌ನ ಜೋ ರೂಟ್ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ತಾಂತ್ರಿಕವಾಗಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು. ಜೋ ರೂಟ್ ಆರಂಭದಲ್ಲಿ ದಾಖಲೆಗಳಿಗಾಗಿ ಆಡುತ್ತಿದ್ದರು, ಆದರೆ ಈಗ ಅವರು ತಂಡದ ಯಶಸ್ಸಿಗಾಗಿ ಆಡುತ್ತಾರೆ,” ಎಂದು ಅವರು ತಿಳಿಸಿದ್ದಾರೆ. ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 13,000ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದು, 2025ರ ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ಗೆ ಪ್ರಮುಖ ಆಟಗಾರನಾಗಿದ್ದಾರೆ.
ಆದರೆ, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್‌ರನ್ನು ಪಾಂಟಿಂಗ್ ತಾಂತ್ರಿಕ ಬ್ಯಾಟ್ಸ್‌ಮನ್ ಎಂದು ಪರಿಗಣಿಸಿಲ್ಲ. ಸ್ಟೋಕ್ಸ್ ಕಠಿಣ ಪರಿಸ್ಥಿತಿಗಳಲ್ಲಿ ತಂಡವನ್ನು ಗೆಲುವಿನ ದಾರಿಗೆ ಕೊಂಡೊಯ್ಯುವ ಆಟಗಾರ. ಆದರೆ, ಅವರ ಆಟದ ಶೈಲಿಯನ್ನು ತಾಂತ್ರಿಕವಾಗಿ ಬೆಸ್ಟ್ ಎಂದು ಕರೆಯಲಾಗದು,” ಎಂದು ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ.
ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಮತ್ತು ಬ್ರಿಯಾನ್ ಲಾರಾ 1990ರಿಂದ 2000ರ ದಶಕದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಿದ ಆಟಗಾರರು. ಈ ಮೂವರೂ ಟೆಸ್ಟ್ ಮತ್ತು ಒಡಿಐ ಕ್ರಿಕೆಟ್‌ನಲ್ಲಿ 10,000ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ:
ಸಚಿನ್ ತೆಂಡೂಲ್ಕರ್ ಟೆಸ್ಟ್‌ನಲ್ಲಿ 15,921 ರನ್‌ಗಳು (51 ಶತಕಗಳು) ಮತ್ತು ಒಡಿಐನಲ್ಲಿ 18,426 ರನ್‌ಗಳು (49 ಶತಕಗಳು). ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್‌ಗೆ ಸೇರಿದೆ.
ಬ್ರಿಯಾನ್ ಲಾರಾ ಟೆಸ್ಟ್‌ನಲ್ಲಿ 11,953 ರನ್‌ಗಳು (34 ಶತಕಗಳು) ಮತ್ತು ಒಡಿಐನಲ್ಲಿ 10,405 ರನ್‌ಗಳು (19 ಶತಕಗಳು)ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 400 ರನ್‌ಗಳ ವೈಯಕ್ತಿಕ ದಾಖಲೆ ಲಾರಾ ಹೆಸರಿನಲ್ಲಿದೆ.
ರಾಹುಲ್ ದ್ರಾವಿಡ್ : ಟೆಸ್ಟ್‌ನಲ್ಲಿ 13,288 ರನ್‌ಗಳು (36 ಶತಕಗಳು) ಮತ್ತು ಒಡಿಐನಲ್ಲಿ 10,889 ರನ್‌ಗಳು (12 ಶತಕಗಳು) ಗಳಿಸಿದ್ದಾರೆ. ದ್ರಾವಿಡ್ ತಮ್ಮ ರಕ್ಷಣಾತ್ಮಕ ಆಟಕ್ಕೆ “ದಿ ವಾಲ್” ಎಂದೇ ಖ್ಯಾತರಾಗಿದ್ದಾರೆ.
August 10, 2025 5:22 PM IST
Ricky Ponting: ಸಚಿನ್, ದ್ರಾವಿಡ್ ಶ್ರೇಷ್ಠ ಬ್ಯಾಟ್ಸ್ಮನ್ಸ್, ಆದ್ರೆ ಸ್ಕಿಲ್ ವಿಚಾರಕ್ಕೆ ಬಂದ್ರೆ ಆತ ಬೆಸ್ಟ್: ರಿಕಿ ಪಾಂಟಿಂಗ್ ಅಚ್ಚರಿ ಹೇಳಿಕೆ