Last Updated:
ಏಷ್ಯಾ ಕಪ್ 2025 ಫೈನಲ್ ನಲ್ಲಿ ರಿಂಕು ಸಿಂಗ್ ಮತ್ತು ತಿಲಕ್ ವರ್ಮಾ ತಮ್ಮ ಬರೆದ ಕನಸು ನಿಜ ಮಾಡಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು, ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅದೃಷ್ಟ ಯಾವ ಕಡೆಯಿಂದ ಬರುತ್ತೋ ಗೊತ್ತಿಲ್ಲ. ಏಷ್ಯಾ ಕಪ್ ನಲ್ಲಿ (Asia Cup 2025) ಬೇಂಚ್ಗೆ ಸಿಮೀತವಾಗಿದ್ದ ರಿಂಕು ಸಿಂಗ್ (Rinku Singh), ಗೋಲ್ಡನ್ ಚಾನ್ಸ್ ಪಡೆದುಕೊಂಡು ಫೀಲ್ಡಿಗೆ ಎಂಟ್ರಿ ಕೊಟ್ಟು ಗೆಲುವಿನ ರನ್ ಬಾರಿಸುವ ಅವಕಾಶ ಪಡೆದುಕೊಂಡಿದ್ದರು. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ವಿನ್ನಿಂಗ್ ಶಾಟ್ ಆಡೋದಾಗಿ ರಿಂಕು ಸಿಂಗ್ ಬರೆದಿಟ್ಟುಕೊಂಡಿದ್ದರು. ತಿಲಕ್ ವರ್ಮಾ (Tilak Varma) ಕೂಡ ಇದನ್ನೇ ಮಾಡಿದ್ದರು. ಈ ಇಬ್ಬರು ಆಟಗಾರರು ತಾವು ಬರೆದುಕೊಂಡಿದ್ದ ನೋಟ್ ಅನ್ನು ನಿಜ ಮಾಡಿ, ಟೀಂ ಇಂಡಿಯಾಗೆ (Team India) ಅದ್ಭುತ ಗೆಲುವು ತಂದುಕೊಟ್ಟಿದ್ದಾರೆ. ಅವರ ಊಹೆ ಹೇಗೆ ನಿಜವಾಯ್ತು ಅಂತ ನಾವು ಹೇಳ್ತೀವಿ..
ಅದೃಷ್ಟ ಹೇಗೆ? ಯಾವಾಗ? ಕೈ ಹಿಡಿಯುತ್ತೆ ಅನ್ನೋದನ್ನು ಹೇಳೋದಕ್ಕೆ ಆಗೋದಿಲ್ಲ. ಅಂತಹದ್ದೆ ಒಂದು ಗೋಲ್ಡನ್ ಚಾನ್ಸ್ ರಿಂಕು ಸಿಂಗ್ ಗೆ ಲಭ್ಯವಾಗಿತ್ತು. ಏಷ್ಯಾ ಕಪ್ 2025ರ ಟೂರ್ನಿಯಲ್ಲಿ ಟೀಂ ಇಂಡಿಯಾ ಏಳು ಪಂದ್ಯಗಳನ್ನು ಆಡಿದೆ. ಮೊದಲ ಆರು ಪಂದ್ಯಗಳಿಗೆ ಬೆಂಚ್ಗೆ ಸಿಮೀತವಾಗಿದ್ದ ರಿಂಕುಗೆ ಗೋಲ್ಡನ್ ಚಾನ್ಸ್ ಆಗಿ ಫೈನಲ್ ಆಡುವ ಅವಕಾಶ ಸಿಕ್ಕಿತ್ತು. ಹಾರ್ದಿಕ್ ಪಾಂಡ್ಯ ಗಾಯಗೊಂಡ ಕಾರಣ ಅವರ ಸ್ಥಾನದಲ್ಲಿ ರಿಂಕುಗೆ ಅವಕಾಶ ಸಿಕ್ಕಿತ್ತು. ಈ ಅವಕಾಶವನ್ನು ಉಪಯೋಗಿಸಿಕೊಂಡ ರಿಂಕು ಭಾರತಕ್ಕೆ ವಿನ್ನಿಂಗ್ ಶಾಟ್ ಸಿಡಿಸಿದರು. ವಿಶೇಷ ಎಂದರೆ ಈ ಟೂರ್ನಿ ಆರಂಭಕ್ಕೂ ಮುನ್ನ ಭಾರತ ಪರ ವಿನ್ನಿಂಗ್ ರನ್ ಗಳಿಸಬೇಕು ಎಂದು ರಿಂಕು ಸಿಂಗ್ ಬರೆದಿಟ್ಟುಕೊಂಡಿದ್ದರು.
ಏಷ್ಯಾ ಕಪ್ ಆರಂಭಕ್ಕೂ ಮುನ್ನ ಸೋನಿ ಸ್ಫೋಟ್ಸ್ ಪ್ರತಿಯೊಬ್ಬ ಆಟಗಾರರು ಈ ಟೂರ್ನಿಯಲ್ಲಿ ಏನು ಮಾಡಬೇಕು ಎಂದು ಭಾವಿಸುತ್ತಿದ್ದೀರಿ ಎಂದು ಸಂದರ್ಶನದಲ್ಲಿ ಕೇಳಿತ್ತು. ಇದರಲ್ಲಿ ಇಬ್ಬರು ಆಟಗಾರರು ಏನು ಬರೆದಿದ್ದರೋ ಅದೇ ನಡೆಯಿತು. ಇದರಲ್ಲಿ ಮೊದಲೇಯವರು ತಿಲಕ್ ವರ್ಮಾ, ಎರಡನೇ ಆಟಗಾರ ರಿಂಕು ಸಿಂಗ್.. ಈ ಇಬ್ಬರು ಆಟಗಾರರು ಬರೆದಿದ್ದನ್ನು ಅದೇ ರೀತಿ ಮಾಡಿ ತೋರಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
Rinku Singh manifested before the Asia Cup that he would hit the winning runs in Asia Cup Final. 🥹
– Tonight Rinku hit the winning runs. ❤️ pic.twitter.com/a0oAVUjumJ
— Mufaddal Vohra (@mufaddal_vohra) September 28, 2025
ರಿಂಕು ಸಿಂಗ್ ಇಡೀ ಟೂರ್ನಿಗೆ ಆಡಿದ್ದು ಒಂದು ಒಂದು ಎಸೆತ, ಅದರಲ್ಲೇ ವಿನ್ನಿಂಗ್ ಶಾಟ್ ಬಾರಿಸಿದ್ದರು. ನಿನ್ನೆಯ ಪಂದ್ಯದಲ್ಲಿ ಶಿವಂ ದುಬೆ ಔಟ್ ಆಗುತ್ತಿದ್ದಂತೆ ಕ್ರಿಸ್ ಗೆ ಬಂದ ರಿಂಕು, ಅಂತಿಮ ಓವರ್ ನಲ್ಲಿ ಸ್ಟ್ರೇಕ್ ಪಡೆದುಕೊಂಡರು. ಈ ಓವರ ನಲ್ಲಿ ಮೊದಲ ಎಸೆತದಲ್ಲಿ ಎರಡು ರನ್ ಗಳಿಸಿ ತಿಲಕ್, 2ನೇ ಎಸೆತವನ್ನ ಸಿಕ್ಸರ್ ಸಿಡಿಸಿ ಭಾರತದ ಗೆಲುವನ್ನು ಖಚಿತಪಡಿಸಿದರು. ಎಲ್ಲರು ತಿಲಕ್ ಅವರೇ ವಿನ್ನಿಂಗ್ ರನ್ಸ್ ಕೂಡ ಗಳಿಸುತ್ತಾರೆ ಎಂದು ಭಾವಿಸಿದ್ದರು. ಆದರೆ ಮೂರನೇ ಎಸೆತದಲ್ಲಿ ಸಿಂಗಲ್ ಗಳಿಸಿದರು. ಇದರೊಂದಿಗೆ ರಿಂಕುಗೆ ಗೋಲ್ಡನ್ ಚಾನ್ಸ್ ಸಿಕ್ತು.
ಇತ್ತ ತಿಲಕ್ ವರ್ಮಾ ಕೂಡ ತನ್ನ ಕಾರ್ಡ್ ನಲ್ಲಿ ಏನೆಂದು ಬರೆದುಕೊಂಡಿದ್ದರೋ ಅದೇ ರೀತಿ ಆಗಿತ್ತು. ಫೈನಲ್ ನಲ್ಲಿ ಉತ್ತಮ ಸ್ಕೋರ್ ಮಾಡಿ, ತಂಡವನ್ನು ಗೆಲ್ಲಿಸಬೇಖು ಎಂದು ತಿಲಕ್ ಬರೆದುಕೊಂಡಿದ್ದರು. ಅದೇ ರೀತಿ ತಂಡ ಗೆಲುವಿಗೆ ಬರೋಬ್ಬರಿ 69 ರನ್ ಗಳ ಕಾಣಿಕೆ ನೀಡಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಪಡೆಯಲು ಕಾರಣರಾದರು. ಸದ್ಯ ಈ ಫೋಟೋಗಳು ಈ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
September 29, 2025 5:01 PM IST