Rinku Singh: ಸಂಸದೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಕ್ರಿಕೆಟಿಗ ರಿಂಕು; ಮದುವೆಗೂ ಫಿಕ್ಸ್ ಆಯ್ತು ಮುಹೂರ್ತ! | Cricket star Rinku Singh and Samajavadi MP Priya Saroj engaged

Rinku Singh: ಸಂಸದೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಕ್ರಿಕೆಟಿಗ ರಿಂಕು; ಮದುವೆಗೂ ಫಿಕ್ಸ್ ಆಯ್ತು ಮುಹೂರ್ತ! | Cricket star Rinku Singh and Samajavadi MP Priya Saroj engaged

Last Updated:

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಜೂನ್ 8, 2025 ರಂದು ಲಕ್ನೋದ ಐಷಾರಾಮಿ ಹೊಟೇಲ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸಮಾಜವಾದಿ ಪಕ್ಷದ ಸಂಸದೆಯ ಜೊತೆಗೆ ನಿಶ್ಚಿತಾರ್ಥ ಮಾಡಿಕೋಂಡರು.

ರಿಂಕು-ಪ್ರಿಯಾ ಸರೋಜ್ರಿಂಕು-ಪ್ರಿಯಾ ಸರೋಜ್
ರಿಂಕು-ಪ್ರಿಯಾ ಸರೋಜ್

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ (Rinku Singh) ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್‌ರ (Priya Saroj) ನಿಶ್ಚಿತಾರ್ಥ (Engagement) ಜೂನ್ 8, 2025 ರಂದು ಲಕ್ನೋದ ಐಷಾರಾಮಿ ಹೊಟೇಲ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಈ ಸಮಾರಂಭದಲ್ಲಿ ಕುಟುಂಬದವರು, ಆತ್ಮೀಯ ಸ್ನೇಹಿತರು ಮತ್ತು ಕೆಲವು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು, ಇದರಲ್ಲಿ ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ (Akhilesh Yadav) ಮತ್ತು ಡಿಂಪಲ್ ಯಾದವ್ (Dimple Yadav) ಕೂಡ ಉಪಸ್ಥಿತರಿದ್ದರು.

ಒಂದು ವರ್ಷದಿಂದ ಇಬ್ಬರಿಗೂ ಪರಿಚಯ

ರಿಂಕು ಸಿಂಗ್, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಟಗಾರನಾಗಿ ಐಪಿಎಲ್‌ನಲ್ಲಿ ‘ಸಿಕ್ಸರ್ ಕಿಂಗ್’ ಎಂದೇ ಖ್ಯಾತರಾಗಿದ್ದಾರೆ. 26 ವರ್ಷದ ಈ ಕ್ರಿಕೆಟಿಗನಿಗೆ 25 ವರ್ಷದ ಪ್ರಿಯಾ ಸರೋಜ್‌ರೊಂದಿಗೆ ಸುಮಾರು ಒಂದು ವರ್ಷದಿಂದ ಪರಿಚಯವಿತ್ತು. ಪ್ರಿಯಾ, ಉತ್ತರ ಪ್ರದೇಶದ ಮಛಲಿಶಹರ್ ಕ್ಷೇತ್ರದ ಸಂಸದೆಯಾಗಿದ್ದು, ಸಮಾಜವಾದಿ ಪಕ್ಷದ ಮಾಜಿ ಸಂಸದ ತುಫಾನಿ ಸರೋಜ್‌ರ ಪುತ್ರಿಯಾಗಿದ್ದಾರೆ. ಇಬ್ಬರೂ ಓರ್ವ ಸ್ನೇಹಿತರ ಮೂಲಕ ಭೇಟಿಯಾಗಿದ್ದು, ಪರಸ್ಪರ ಒಲವು ಬೆಳೆದು, ಕುಟುಂಬದವರ ಒಪ್ಪಿಗೆಯೊಂದಿಗೆ ವಿವಾಹವಾಗಲು ನಿರ್ಧರಿಸಿದ್ದಾರೆ.

ನಿಶ್ಚಿತಾರ್ಥದ ಸಮಾರಂಭ ಲಕ್ನೋದ ದಿ ಸೆಂಟ್ರಮ್ ಹೊಟೇಲ್‌ನ ಫಲಕರನ್ ಹಾಲ್‌ನಲ್ಲಿ ನಡೆಯಿತು. ಪ್ರಿಯಾ ಸರೋಜ್ ಗುಲಾಬಿ ಲೆಹೆಂಗಾದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರೆ, ರಿಂಕು ಬಿಳಿ ಶೆರ್ವಾನಿಯಲ್ಲಿ ಸೊಗಸಾಗಿ ಮಿಂಚಿದ್ದಾರೆ. ಸಮಾರಂಭದಲ್ಲಿ ರಿಂಕು ಪ್ರಿಯಾಗೆ ಉಂಗುರ ತೊಡಿಸಿದ ಕ್ಷಣ ಭಾವುಕವಾಗಿತ್ತು, ಪ್ರಿಯಾ ಕಣ್ಣೀರಿನೊಂದಿಗೆ ಈ ಕ್ಷಣವನ್ನು ಸ್ಮರಣೀಯವಾಗಿಸಿದರು. ಸಮಾರಂಭದ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನವೆಂಬರ್ 18ಕ್ಕೆ ವಿವಾಹ

ಈ ಜೋಡಿಯ ವಿವಾಹ ನವೆಂಬರ್ 18, 2025 ರಂದು ವಾರಾಣಸಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ವಿವಾಹದಲ್ಲಿ ಕ್ರಿಕೆಟ್, ರಾಜಕೀಯ ಮತ್ತು ಬಾಲಿವುಡ್‌ನ ಪ್ರಮುಖ ವ್ಯಕ್ತಿಗಳು ಭಾಗವಹಿಸುವ ಸಾಧ್ಯತೆಯಿದೆ. ರಿಂಕು ಸಿಂಗ್‌ರ ಕುಟುಂಬವು ಈಗಾಗಲೇ ಅಲಿಘರ್‌ನಲ್ಲಿ ₹3.5 ಕೋಟಿ ಮೌಲ್ಯದ ಬಂಗಲೆಗೆ ಸ್ಥಳಾಂತರಗೊಂಡಿದೆ. ಸದ್ಯ ರಿಂಕು ಸಿಂಗ್‌ರ ತಂದೆ ಖಾನ್‌ಚಂದ್ ಸಿಂಗ್ ಗ್ಯಾಸ್ ಸಿಲಿಂಡರ್ ವಿತರಣೆಯ ಕೆಲಸವನ್ನು ತ್ಯಜಿಸಿದ್ದಾರೆ. ಈ ನಿಶ್ಚಿತಾರ್ಥವು ಕ್ರೀಡೆ ಮತ್ತು ರಾಜಕೀಯದ ಸಂಗಮವಾಗಿ ಗಮನ ಸೆಳೆದಿದೆ.

ಇಂದು ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಜಯಾ ಬಚ್ಚನ್, ಸಂಸದ ರಾಮ್ ಗೋಪಾಲ್ ಯಾದವ್, ಬಿಸಿಸಿಐ ಉಪಾಧ್ಯಕ್ಷ ಮತ್ತು ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಸೇರಿದಂತೆ 300 ಮಂದಿ ಆಯ್ಕೆ ಮಾಡಿದ ಅತಿಥಿಗಳು ಸಮಾರಂಭದಲ್ಲಿದ್ದರು.

ಇಂದು ನಿಶ್ಚಿತಾರ್ಥ ಸಮಾರಂಭ ಮತ್ತು ನಾವು ಇಲ್ಲಿ ಒಟ್ಟುಗೂಡಿದ್ದೇವೆ. ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ಇಂದು ನಡೆಯುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ ಎಂದು  ಪ್ರಿಯಾ ಸರೋಜ್ ಅವರ ತಂದೆ ತುಫಾನಿ ಸರೋಜ್ ಎಎನ್‌ಐಗೆ ತಿಳಿಸಿದರು.