Last Updated:
ಕೊರಗಜ್ಜನ ಕ್ಷೇತ್ರದಲ್ಲಿ ದೈವಾರಾಧಕರನ್ನು ಭೇಟಿಯಾಗಿದ್ದಾರೆ. ಬಳಿಕ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ದೇವಳದ ಗಣಪತಿ ಗುಡಿ, ದುರ್ಗಾಪರಮೇಶ್ವರಿ ಸನ್ನಿಧಿ ,ಧರ್ಮಶಾಸ್ತ್ರ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಂಜುನಾಥನ ಆಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ: ಮಂಗಳೂರಿನ ದೇವಸ್ಥಾನಗಳಿಗೆ(Temples) ಬಾಲಿವುಡ್ ನಟಿಮಣಿಯರ ಭೇಟಿ ಬೆನ್ನಲ್ಲೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ(Rishab Shetty) ಕೂಡಾ ಭೇಟಿ ನೀಡಿದ್ದಾರೆ. ಪ್ರತಿ ವರ್ಷ ಕುಟುಂಬ ಸಮೇತ ಟೆಂಪಲ್ ರನ್(Temple Run) ಮಾಡೋದನ್ನು ರೂಢಿ ಮಾಡಿಕೊಂಡಿರುವ ರಿಷಬ್, ಈ ಬಾರಿಯೂ ಮಂಗಳೂರಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಗ -ಮಗಳೊಂದಿಗೆ ರಿಷಬ್ ಟೆಂಪಲ್ ರನ್ ಮಾಡಿದ್ದಾರೆ. ಕೊರಗಜ್ಜನ ಆದಿ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಗಳೂರು ನಗರ ಹೊರವಲಯದ ತೊಕ್ಕೊಟ್ಟುವಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ರಿಷಬ್ ಕುಟುಂಬ ಭೇಟಿ ನೀಡಿದೆ. ಕೊರಗಜ್ಜನಿಗೆ ವೀಳ್ಯದೆಲೆ, ಚಕ್ಕುಲಿ, ಮದ್ಯವನ್ನು ರಿಷಬ್ ಶೆಟ್ಟಿ ಸಮರ್ಪಿಸಿದ್ದಾರೆ. ಕೊರಗಜ್ಜನ ಕ್ಷೇತ್ರದಲ್ಲಿ ದೈವಾರಾಧಕರನ್ನು ಭೇಟಿಯಾಗಿದ್ದಾರೆ. ಬಳಿಕ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ ದೇವಳದ ಗಣಪತಿ ಗುಡಿ, ದುರ್ಗಾಪರಮೇಶ್ವರಿ ಸನ್ನಿಧಿ ,ಧರ್ಮಶಾಸ್ತ್ರ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಂಜುನಾಥನ ಆಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Dakshina Kannada: ಯೆಣ್ಮಕಜೆ ಮನೆತನದಲ್ಲಿ ನಡೆದ ಪಿಲಿಚಾಂಡಿ ದೈವದ ನೇಮೋತ್ಸವ!
ಕದ್ರಿಯ ಬಳಿಕ ಕಟೀಲು ಶ್ರೀ ದರ್ಗಾಪರಮೇಶ್ವರಿ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ. ಕಟೀಲು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಿಷಬ್ ದಂಪತಿಗೆ ಕ್ಷೇತ್ರದ ವತಿಯಿಂದ ಪ್ರಸಾದ, ಶೇಷವಸ್ತ್ರ ನೀಡಿ ಗೌರವಿಸಲಾಗಿದೆ. ಕಾಂತಾರ ಸೀಕ್ವೆಲ್ 1 ಚಿತ್ರೀಕರಣ ಭಾಗಶಃ ಮುಗಿದಿರೋ ಹಿನ್ನೆಲೆಯಲ್ಲಿ ರಿಷಬ್ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ.
ಕಟೀಲು ದೇವಿಯ ದರ್ಶನದ ಬಳಿಕ ಪ್ರತಿಕ್ರಿಯೆ ನೀಡಿದ ರಿಷಬ್ ಶೆಟ್ಟಿ, ಕಾಂತಾರಾ ಸೀಕ್ವೆಲ್ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಕುಟುಂಬ ಸಮೇತರಾಗಿ ಟೆಂಪಲ್ ರನ್ ಮಾಡುತ್ತಿದ್ದೇನೆ. ಅಕ್ಟೋಬರ್ 2 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಚಿಂತನೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆ ಅಪ್ ಡೇಟ್ ನೀಡುತ್ತೇವೆ ಅಂತಾ ಹೇಳಿದ್ದಾರೆ.
Dakshina Kannada,Karnataka
March 07, 2025 1:01 PM IST