Rishabh Pant: ಆಂಗ್ಲರ್ ವಿರುದ್ಧ ಗರಿಷ್ಠ ಸಿಕ್ಸರ್! ವಿವಿಯನ್ ರಿಚರ್ಡ್ಸ್​ರ ದಾಖಲೆ ಬ್ರೇಕ್ ಮಾಡಿದ ಪಂತ್, ಧೋನಿಯ ದಾಖಲೆಯೂ ಉಡೀಸ್ | Rishabh Pant Smashes Records: Creates History at Lord’s, Breaks Dhoni and Viv Richards’ Records

Rishabh Pant: ಆಂಗ್ಲರ್ ವಿರುದ್ಧ ಗರಿಷ್ಠ ಸಿಕ್ಸರ್! ವಿವಿಯನ್ ರಿಚರ್ಡ್ಸ್​ರ ದಾಖಲೆ ಬ್ರೇಕ್ ಮಾಡಿದ ಪಂತ್, ಧೋನಿಯ ದಾಖಲೆಯೂ ಉಡೀಸ್ | Rishabh Pant Smashes Records: Creates History at Lord’s, Breaks Dhoni and Viv Richards’ Records
ಪಂತ್‌ ಎರಡು ಶತಕ, 2 ಅರ್ಧಶತಕ

ಈ ಸರಣಿಯಲ್ಲಿ ರಿಷಭ್ ಪಂತ್ ತಮ್ಮ ಗಮನಾರ್ಹ ಫಾರ್ಮ್‌ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ, ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಮತ್ತು ಈ ಮೂರನೇ ಟೆಸ್ಟ್‌ನಲ್ಲಿ 74 ರನ್‌ಗಳ (8 ಬೌಂಡರಿ, 2 ಸಿಕ್ಸರ್‌) ಇನ್ನಿಂಗ್ಸ್‌ನೊಂದಿಗೆ, ಅವರು ತಂಡದ ಬ್ಯಾಟಿಂಗ್‌ನ ಕೇಂದ್ರಬಿಂದುವಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಮತ್ತೊಂದು ಅರ್ಧಶತಕ ಗಳಿಸಿದರು, ಆದರೆ ದುರದೃಷ್ಟವಶಾತ್ ರನೌಟ್ ಆಗಿ ಶತಕದಿಂದ ವಂಚಿತರಾದರು.

ವಿವಿಯನ್ ರಿಚರ್ಡ್ಸ್‌ರ ದಾಖಲೆ ಬ್ರೇಕ್

ರಿಷಭ್ ಪಂತ್ ಈ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು, ಇದರೊಂದಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಒಟ್ಟು ಸಿಕ್ಸರ್‌ಗಳ ಸಂಖ್ಯೆ 36ಕ್ಕೆ ಏರಿತು. ಇದರಿಂದ ಅವರು ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಸರ್ ವಿವಿಯನ್ ರಿಚರ್ಡ್ಸ್‌ರ 34 ಸಿಕ್ಸರ್‌ಗಳ ದಾಖಲೆಯನ್ನು ಮುರಿದರು. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಈಗ ಪಂತ್‌ರ ಹೆಸರಿನಲ್ಲಿದೆ.

ಇಂಗ್ಲೆಂಡ್ ವಿರುದ್ಧ ಹೆಚ್ಚು ಸಿಕ್ಸರ್

ರಿಷಭ್ ಪಂತ್- (ಭಾರತ)-36

ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್ ) 34

ಟಿಮ್ ಸೌಥಿ (ನ್ಯೂಜಿಲೆಂಡ್ ) 30

ಯಶಸ್ವಿ ಜೈಸ್ವಾಲ್ (ಭಾರತ ) 27

ಶುಭ್ಮನ್ ಗಿಲ್ (ಭಾರತ ) 26

ಎಂಎಸ್ ಧೋನಿಯ ದಾಖಲೆ ಬ್ರೇಕ್

ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 1197 ರನ್‌ಗಳನ್ನು ಗಳಿಸಿದ್ದಾರೆ, ಇದರೊಂದಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷಿಯಾದ ವಿಕೆಟ್‌ಕೀಪರ್ ಎಂಬ ದಾಖಲೆಯನ್ನು ಎಂಎಸ್ ಧೋನಿಯಿಂದ (1157 ರನ್‌ಗಳು) ಕಸಿದುಕೊಂಡರು. ಈ ಸಾಧನೆಯು ಪಂತ್‌ರನ್ನು ಏಷಿಯಾದ ಶ್ರೇಷ್ಠ ವಿಕೆಟ್‌ಕೀಪರ್‌ಗಳ ಪೈಕಿ ಒಬ್ಬರನ್ನಾಗಿ ಮಾಡಿದೆ.

ಇಂಗ್ಲೆಂಡ್ ವಿರುದ್ಧ ಹೆಚ್ಚು ರನ್​ಗಳಿಸಿದ ಏಷ್ಯಾ ಬ್ಯಾಟರ್

ರಿಷಭ್ ಪಂತ್ -ಭಾರತ -1197 ರನ್ಸ್

ಎಂಎಸ್ ಧೋನಿ -ಭಾರತ -1157

ಫಾರೂಕ್ ಇಂಜಿನಿಯರ್ -ಭಾರತ – 1113

ಕುಮಾರ ಸಂಗಕ್ಕಾರ -ಶ್ರೀಲಂಕಾ -716

ಸೈಯದ್ ಕಿರ್ಮಾನಿ -ಭಾರತ – 707

ಪಂತ್‌ ರನೌಟ್

ರಿಷಭ್ ಪಂತ್ ಈ ಇನ್ನಿಂಗ್ಸ್‌ನಲ್ಲಿ ಸರಾಗವಾಗಿ ಬ್ಯಾಟಿಂಗ್ ಮಾಡುತ್ತಿದ್ದರು ಮತ್ತು ಮೂರನೇ ಶತಕದತ್ತ ಸಾಗುವ ಸಾಧ್ಯತೆಯಿತ್ತು. ಆದರೆ, ಒಂದು ಕ್ಷಣದ ಗೊಂದಲದಿಂದಾಗಿ ಅವರು ರನೌಟ್ ಆದರು. ಬೆನ್ ಸ್ಟೋಕ್ಸ್‌ರ ನೇರ ಥ್ರೋ ಎಸೆತದಿಂದ ಪಂತ್ 74 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಈ ರನೌಟ್ ಕೆಎಲ್ ರಾಹುಲ್‌ರೊಂದಿಗಿನ 141 ರನ್‌ಗಳ ಜೊತೆಯಾಟವನ್ನ ಕೊನೆಗೊಳಿಸಿತು. ಈ ಘಟನೆಯು ಭಾರತಕ್ಕೆ ಒಂದು ಆಘಾತವಾಯಿತು. ಒಂದು ಹಂತದಲ್ಲಿ ದೊಡ್ಡ ಮುನ್ನಡೆ ಪಡೆಯುವ ಹಂತದಲ್ಲಿದ್ದ ಟೀಮ್ ಇಂಡಿಯಾ ಕನಸು ಈ ವಿಕೆಟ್​ನೊಂದಿಗೆ ಕೊನೆಗೊಂಡಿತು. ಆದರೂ ಜಡೇಜಾ, ನಿತೀಶ್ ಹಾಗೂ ವಾಷಿಂಗ್ಟನ್ ಸುಂದರ್ ಪ್ರದರ್ಶನದಿಂದ ಸಮಬಲ ಸಾಧಿಸಲು ಸಾಧ್ಯವಾಯಿತು.

ಭಾರತದ ಇನ್ನಿಂಗ್ಸ್‌ ಹೈಲೈಟ್ಸ್

ಇಂಗ್ಲೆಂಡ್‌ನ 387 ರನ್‌ಗಳಿಗೆ ಉತ್ತರವಾಗಿ, ಭಾರತವೂ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (13 ರನ್), ಶುಭ್ಮನ್ ಗಿಲ್ (14 ರನ್), ಮತ್ತು ಕರುಣ್ ನಾಯರ್ (40 ರನ್) ಬೇಗನೇ ಔಟಾದರು, ಇದರಿಂದ ಭಾರತ 107/3 ರನ್‌ಗಳಿಗೆ ಸಂಕಷ್ಟಕ್ಕೆ ಸಿಲುಕಿತು. ಆದರೆ, ಕೆಎಲ್ ರಾಹುಲ್ (176 ಎಸೆತಗಳಲ್ಲಿ 100 ರನ್, 13 ಬೌಂಡರಿ) ಮತ್ತು ರಿಷಭ್ 74 ರನ್‌ ಹಾಗೂ ಜಡೇಜಾರ 72 ರನ್​ಗಳ ನೆರವಿನಿಂದ ಭಾರತ ಗೌರವಾನ್ವಿತ ಸ್ಕೋರ್ ಸಾಧಿಸಿತು.