ಮೊದಲ ದಿನ ರಿಷಭ್ ಪಂತ್ ಅವರ ಬಲಗಾಲಿನ ಕೊನೆಯ ಬೆರಳಿಗೆ ಮೂಳೆ ಮುರಿತ ಉಂಟಾಯಿತು, ಆದರೆ ಅವರು ನೋವನ್ನು ಸಹಿಸಿಕೊಂಡು ತಂಡಕ್ಕಾಗಿ ಒಂದು ಕಾಲಿನಿಂದ ಬ್ಯಾಟಿಂಗ್ ಮುಂದುವರಿಸಿದರು. ಜೋಫ್ರಾ ಆರ್ಚರ್ ಒಂದು ಕಾಲಿನಿಂದ ಬೃಹತ್ ಸಿಕ್ಸರ್ ಬಾರಿಸಿದರು. ಈ ಇನ್ನಿಂಗ್ಸ್ನಲ್ಲಿ ಎರಡು ಸಿಕ್ಸರ್ಗಳನ್ನು ಬಾರಿಸಿರುವ ಪಂತ್, ಇದುವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 90 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಸರಿಗಟ್ಟಿದರು. ಅವರು ಈ ಸಾಧನೆ ಮಾಡಿದ ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ವೀರೇಂದ್ರ ಸೆಹ್ವಾಗ್ ಅವರ ಸಾರ್ವಕಾಲಿಕ ಭಾರತೀಯ ದಾಖಲೆಯನ್ನು ಸರಿಗಟ್ಟಿದ ರಿಷಭ್ ಪಂತ್, ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
ವೀರೇಂದ್ರ ಸೆಹ್ವಾಗ್ 103 ಟೆಸ್ಟ್ ಪಂದ್ಯಗಳಲ್ಲಿ 90 ಸಿಕ್ಸರ್ಗಳನ್ನು ಬಾರಿಸಿದರೆ, ರಿಷಭ್ ಪಂತ್ 47 ಪಂದ್ಯಗಳಲ್ಲಿ 90 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಕ್ರಮಾಂಕದಲ್ಲಿ ರಿಷಭ್ ಪಂತ್ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು. ರೋಹಿತ್ ಶರ್ಮಾ 67 ಟೆಸ್ಟ್ ಪಂದ್ಯಗಳಲ್ಲಿ 88 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಧೋನಿ 90 ಪಂದ್ಯಗಳಲ್ಲಿ 78 ಸಿಕ್ಸರ್ಗಳನ್ನು ಬಾರಿಸಿದ್ದರೆ, ರವೀಂದ್ರ ಜಡೇಜಾ 84 ಟೆಸ್ಟ್ಗಳಲ್ಲಿ 74 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 69 ಸಿಕ್ಸರ್ಗಳನ್ನು ಬಾರಿಸಿದರೆ, ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳಲ್ಲಿ 61 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
1. ರಿಷಭ್ ಪಂತ್ 90 (47 ಪಂದ್ಯ)
2. ವೀರೇಂದ್ರ ಸೆಹ್ವಾಗ್ 90 (103)
3. ರೋಹಿತ್ ಶರ್ಮಾ 88 (67)
4. ಮಹೇಂದ್ರ ಸಿಂಗ್ ಧೋನಿ 78 (90)
5. ರವೀಂದ್ರ ಜಡೇಜಾ 74 (83)
6. ಸಚಿನ್ ತೆಂಡೂಲ್ಕರ್ 69 (200)
7. ಕಪಿಲ್ ದೇವ್ 61 (131)
8. ಸೌರವ್ ಗಂಗೂಲಿ 57 (113)
9. ಶುಭಮನ್ ಗಿಲ್ 43 (29*)
10. ಹರ್ಭಜನ್ ಸಿಂಗ್ 42 (103)
264/4 ರನ್ ಗಳ ರಾತ್ರಿ ಸ್ಕೋರ್ ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ, 114.1 ಓವರ್ ಗಳಲ್ಲಿ 358 ರನ್ ಗಳಿಗೆ ಆಲೌಟ್ ಆಯಿತು. ರಿಷಭ್ ಪಂತ್ (75 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ಗಳೊಂದಿಗೆ 54 ರನ್), ಯಶಸ್ವಿ ಜೈಸ್ವಾಲ್ (107 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 58 ರನ್), ಸಾಯಿ ಸುದರ್ಶನ್ (151 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 61 ರನ್) ಅರ್ಧಶತಕ ಗಳಿಸಿದರೆ, ಕೆಎಲ್ ರಾಹುಲ್ 46 ಹಾಗೂ ಶಾರ್ದೂಲ್ ಠಾಕೂರ್ 41 ರನ್ಗಳಿಸಿದರು.
ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಐದು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಮೂರು ವಿಕೆಟ್ ಪಡೆದರು. ಕ್ರಿಸ್ ವೋಕ್ಸ್ ಮತ್ತು ಲಿಯಾಮ್ ಡಾಸನ್ ತಲಾ ಒಂದು ವಿಕೆಟ್ ಪಡೆದರು.
July 24, 2025 8:48 PM IST