Rishabh Pant: ಕಾಲಿನ ಮೂಳೆ ಮುರಿದರೂ ರಿಷಭ್ ಪಂತ್‌ಗೆ ರನ್ನರ್ ಏಕೆ ನೀಡಲಿಲ್ಲ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ | Why Rishabh Pant Can’t Get a Runner Despite Foot Injury – Explained

Rishabh Pant: ಕಾಲಿನ ಮೂಳೆ ಮುರಿದರೂ ರಿಷಭ್ ಪಂತ್‌ಗೆ ರನ್ನರ್ ಏಕೆ ನೀಡಲಿಲ್ಲ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ | Why Rishabh Pant Can’t Get a Runner Despite Foot Injury – Explained

Last Updated:

ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ರಿಷಭ್ ಪಂತ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದಾಗ, ಚೆಂಡು ನೇರವಾಗಿ ಅವರ ಬಲಗಾಲಿಗೆ ತಗುಲಿತು. ರಕ್ತಸ್ರಾವದ ಜೊತೆಗೆ ಕಾಲು ಊದಿಕೊಂಡಿತ್ತು. ರಿಷಭ್ ಪಂತ್ ನೆಲದ ಮೇಲೆ ಕಾಲಿಡಲು ಕೂಡ ನರಳಾಡಿ, ಕೊನೆಗೆ ಗಾಲ್ಫ್ ಕಾರ್ಟ್ ಆಂಬ್ಯುಲೆನ್ಸ್ ಸಹಾಯದಿಂದ ಮೈದಾನದಿಂದ ಹೊರ ಕರೆದೊಯ್ಯಲಾಗಿತ್ತು.

ರಿಷಭ್ ಪಂತ್ರಿಷಭ್ ಪಂತ್
ರಿಷಭ್ ಪಂತ್

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ತೀವ್ರ ನೋವಿನಲ್ಲಿ ಬ್ಯಾಟಿಂಗ್ ಮಾಡಿ ಎಲ್ಲರ ಗಮನ ಸೆಳೆದರು. ಬುಧವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾದ ಈ ಪಂದ್ಯದಲ್ಲಿ, ಮೊದಲ ದಿನದಾಟದಲ್ಲೇ ರಿಷಭ್ ಪಂತ್ ಕಾಲಿಗೆ ಗಂಭೀರವಾಗಿತ್ತು. ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ರಿಷಭ್ ಪಂತ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದಾಗ, ಚೆಂಡು ನೇರವಾಗಿ ಅವರ ಬಲಗಾಲಿಗೆ ತಗುಲಿತು. ರಕ್ತಸ್ರಾವದ ಜೊತೆಗೆ ಕಾಲು ಊದಿಕೊಂಡಿತ್ತು. ರಿಷಭ್ ಪಂತ್ ನೆಲದ ಮೇಲೆ ಕಾಲಿಡಲು ಕೂಡ ನರಳಾಡಿ, ಕೊನೆಗೆ ಗಾಲ್ಫ್ ಕಾರ್ಟ್ ಆಂಬ್ಯುಲೆನ್ಸ್ ಸಹಾಯದಿಂದ ಮೈದಾನದಿಂದ ಹೊರ ಕರೆದೊಯ್ಯಲಾಗಿತ್ತು.

ಅವರ ಗಾಯ, ನರಳಾಟ ನೋಡಿ ಅವರು ಮತ್ತೆ ಬ್ಯಾಟಿಂಗ್ ಮಾಡುವುದು ಕಷ್ಟ ಎಂದು ಎಲ್ಲರೂ ಭಾವಿಸಿದ್ದರು. ಬಲಗಾಲಿನ ಕೊನೆಯ ಬೆರಳಿನ ಮೂಳೆ ಮುರಿತದ ವರದಿಗಳೂ ಬಂದವು. ಆದರೆ ಪಂತ್ ಬ್ಯಾಟಿಂಗ್ ಮಾಡಲು ಬರುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ನೋವು ಸಹಿಸಿಕೊಳ್ಳುತ್ತಲೇ ಅವರು ಒಂದು ಕಾಲಿನಿಂದ ಬ್ಯಾಟಿಂಗ್ ಮಾಡಿದರು. ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಒಂದು ಭರ್ಜರಿ ಸಿಕ್ಸರ್ ಬಾರಿಸಿದರು. ಬೆನ್ ಸ್ಟೋಕ್ಸ್ ಬೌಲಿಂಗ್​​ನಲ್ಲಿ ತಮ್ಮ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಕುಂಟುತ್ತಾ ಬ್ಯಾಟಿಂಗ್ ಮಾಡಿದ ಪಂತ್, ಸಿಂಗಲ್ಸ್ ಅಥವಾ ಡಬಲ್ಸ್ ಹೊಡೆಯದೆ ಕೇವಲ ದೊಡ್ಡ ಹೊಡೆತಗಳನ್ನು ಹೊಡೆಯುವುದಕ್ಕಷ್ಟೇ ಸೀಮಿತರಾದರು.

ರನ್ನರ್ ಯಾಕೆ ಕೊಡಲ್ಲ?

ಗಂಭೀರವಾಗಿ ಗಾಯಗೊಂಡಿರುವ ರಿಷಭ್ ಪಂತ್‌ಗೆ ಕನಿಷ್ಠ ರನ್ನರ್ ಏಕೆ ನೀಡಲಿಲ್ಲ ಎಂದು ಕೆಲವು ನೆಟಿಜನ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ. ಆದರೆ, ಐಸಿಸಿ ಕ್ರಿಕೆಟ್‌ನಲ್ಲಿ ರನ್ನರ್ ನಿಯಮವನ್ನು ರದ್ದುಗೊಳಿಸಿದೆ. ದುರುಪಯೋಗದ ಆರೋಪದ ನಂತರ ಐಸಿಸಿ ಅಕ್ಟೋಬರ್ 1, 2011 ರಂದು ಈ ನಿಯಮವನ್ನು ರದ್ದುಗೊಳಿಸಿತು. ಅದಕ್ಕಾಗಿಯೇ ಪಂತ್ ರನ್ನರ್ ಇಲ್ಲದೆ ಬ್ಯಾಟಿಂಗ್ ಮಾಡಿದರು. ರನ್ನರ್ ನಿಯಮವನ್ನು ರದ್ದುಗೊಳಿಸುವ ಬದಲು ಬಿಗಿಗೊಳಿಸಬೇಕು. ಓಡಲು ಅಸಾಧ್ಯವಾದ ಪರಿಸ್ಥಿತಿ ಇದ್ದಾಗ ಮಾತ್ರ ರನ್ನರ್ ಗೆ ಅವಕಾಶ ನೀಡುವ ನಿಯಮ ಬದಲಾಯಿಸಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ರನ್ನರ್ ಬಳಕೆಯನ್ನ ಸಂಪೂರ್ಣವಾಗಿ ತೆಗೆದುಹಾಕುವುದರಿಂದ ಗಂಭೀರವಾಗಿ ಗಾಯಗೊಂಡ ಆಟಗಾರರು ಅಪಾಯಗಳನ್ನು ಎದುರಿಸಿ ಬ್ಯಾಟಿಂಗ್ ಮಾಡುವಂತೆ ಒತ್ತಾಯಿಸಲಾಗುತ್ತದೆ ಎಂಬ ಟೀಕೆಗಳು ಬರುತ್ತಿವೆ. ಐಸಿಸಿ ರನ್ನರ್ ನಿಯಮವನ್ನು ಮರುಪರಿಶೀಲಿಸಬೇಕೆಂದು ಅಭಿಮಾನಿಗಳಲ್ಲದೆ, ಕೆಲವು ಕ್ರಿಕೆಟ್ ತಜ್ಞರು ಸೂಚಿಸುತ್ತಿದ್ದಾರೆ.

ಕನ್ಕಶನ್​ಗೆ ಮಾತ್ರ ಅವಕಾಶ

ಪ್ರಸ್ತುತ ಕ್ರಿಕೆಟ್​​ನಲ್ಲಿ ಚೆಂಡು ತಲೆಗೆ ಬಡಿದರೆ ಮಾತ್ರ ಬದಲಿ ಆಟಗಾರನನ್ನ ಕನ್ಕಶನ್ ಸಬ್​ಸ್ಟಿಟ್ಯೂಟ್ ಆಗಿ ಗಾಯಗೊಂಡ ಆಟಗಾರನ ಸ್ಥಾನದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶ ನೀಡಲಾಗುತ್ತಿದೆ. ಆಟಗಾರನ ತಲೆಗೆ ಗಂಭೀರವಾದ ಗಾಯವಾದರೆ, ಆ ಆಟಗಾರನ ಸರಿಸಮನಾದ ಆಟಗಾರನನ್ನ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಎದುರಾಳಿ ತಂಡದ ನಾಯಕ ಹಾಗೂ ರೆಫರಿಗೆ ಮಾಹಿತಿ ನೀಡಿ ಆಡಿಸಬಹುದಾಗಿದೆ. ಆ ಬದಲಿ ಆಟಗಾರನು ಬ್ಯಾಟಿಂಗ್ ಮತ್ತು ಬೌಲಿಂಗ್ ಕೂಡ ಮಾಡಬಹುದು. ಪಂತ್ ಪ್ರಕರಣದ ನಂತರ ಗಂಭೀರವಾಗಿ ಗಾಯಗೊಂಡಿರುವ ಆಟಗಾರರನ್ನು ಬದಲಾಯಿಸಲು ಅವಕಾಶ ನೀಡಬೇಕೆಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಇದೇ ರೀತಿ ಒತ್ತಾಯಿಸಿದ್ದಾರೆ.