Last Updated:
ಹರ್ಭಜನ್ ಸಿಂಗ್ ರಿಷಭ್ ಪಂತ್ ಮತ್ತು ಜಹೀರ್ ಖಾನ್ ನಡುವಿನ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ. ಪಂತ್ ಜಹೀರ್ ಅವರ ಸಲಹೆಗಳನ್ನು ಪಾಲಿಸುತ್ತಿಲ್ಲ, ಪಂತ್ ಆರಂಭಿಕ ಸ್ಥಾನದಲ್ಲಿ ಆಡಬೇಕೆಂದು ಜಹೀರ್ ಬಯಸುತ್ತಾರೆ.
ರಿಷಭ್ ಪಂತ್ ಮತ್ತು ಜಹೀರ್ ಖಾನ್ (Rishabh Pant vs Zaheer Khan) ಬಗ್ಗೆ ಹರ್ಭಜನ್ ಸಿಂಗ್ (Harbhajan Singh) ಒಂದು ದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ ಪಂತ್ ನೇತೃತ್ವದ ತಂಡವು ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವನ್ನು ಸೋಲಿಸಿ ಈ ಐಪಿಎಲ್ ಋತುವಿನ ಮೊದಲ ಗೆಲುವು ದಾಖಲಿಸಿತು. ಆದರೆ ಈ ಸಮಯದಲ್ಲಿ ಅವರ ಬ್ಯಾಟ್ ಮೌನವಾಗಿತ್ತು. ಪಂತ್ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಸತತ 2 ಪಂದ್ಯಗಳಲ್ಲಿ ವಿಫಲರಾದರು. ಆದರೆ ಪಂತ್ ಮತ್ತು ಎಲ್ಎಸ್ಜಿ ಮಾರ್ಗದರ್ಶಕ ಜಹೀರ್ ಖಾನ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಪಂತ್ ಮಾರ್ಗದರ್ಶಕರಾಗಿರುವ ಜಹೀರ್ ಅವರ ಮಾತನ್ನು ಕೇಳುತ್ತಿಲ್ಲ. ಜಹೀರ್ ಬ್ಯಾಟಿಂಗ್ ಮಾಡುವುದನ್ನು ನೋಡಲು ಬಯಸುವ ಸ್ಥಾನವು ತನಗೆ ಸೂಕ್ತವೆಂದು ಪಂತ್ ಪರಿಗಣಿಸುತ್ತಿಲ್ಲ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂತ್ 15 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು.
ಜಹೀರ್ ಮಾತು ಕೇಳದ ಪಂತ್
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಿಷಭ್ ಪಂತ್ ಇನ್ನಿಂಗ್ಸ್ ಆರಂಭಿಸಬೇಕೆಂದು ಜಹೀರ್ ಖಾನ್ ಬಯಸಿದ್ದರು ಎಂದು ಹರ್ಭಜನ್ ಸಿಂಗ್ ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಲೈವ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಆದರೆ ಪಂತ್ ಅವರ ಮಾತನ್ನು ಕೇಳದೇ, ತಾವೂ ಬಯಸಿದ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಹೋದರು. ಪ್ರಸ್ತುತ ಐಪಿಎಲ್ನ ಎರಡು ಪಂದ್ಯಗಳಲ್ಲಿ ಪಂತ್ಗೆ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಿಲ್ಲ. ಇವರಿಬ್ಬರ ಚಿಂತನೆ ಒಂದೇ ರೀತಿಯಾಗಿಲ್ಲ ಎಂದು ಭಜ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಧೋನಿ ಮೇಲಿನ ಫ್ಯಾನ್ಸ್ ಅಭಿಮಾನ ಅತಿಯಾಗುತ್ತಿದೆ! RCB ಪಂದ್ಯಕ್ಕೂ ಮುನ್ನ ರಾಯುಡು ಅಚ್ಚರಿ ಹೇಳಿಕೆ
‘ಜಹೀರ್ ಪಂತ್ ಓಪನಿಂಗ್ ಮಾಡಬೇಕೆಂದು ಬಯಸುತ್ತಾರೆ ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬಗ್ಗೆ ಪಂತ್ ಅಚಲರಾಗಿದ್ದಾರೆ’ ಎಂದು ಹರ್ಭಜನ್ ಹೇಳಿದ್ದಾರೆ. ಪಂತ್ ಓಪನಿಂಗ್ ಮಾಡಿದರೆ, ಬ್ಯಾಟ್ಸ್ಮನ್ ಆಗಿ ಅವರ ಅತ್ಯುತ್ತಮ ಪ್ರದರ್ಶನ ಹೊರಬರುತ್ತದೆ ಎಂದು ಜಹೀರ್ ನಂಬುತ್ತಾರೆ. ಪಂತ್,ನಿಕೋಲಸ್ ಪೂರನ್ ಅಥವಾ ಐಡೆನ್ ಮಾರ್ಕಮ್ ಅಂತಹ ಅತ್ಯುತ್ತಮ ಆಟಗಾರರು 4 ಅಥವಾ 5 ಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಾರದು. ಪಂತ್ ಅಗ್ರ ಕ್ರಮಾಂಕದಲ್ಲಿ ಆಡಬೇಕು ಎಂದು ಜಹೀರ್ ಭಾವಿಸುತ್ತಿದ್ದಾರೆ. ಅಚ್ಚರಿಯ ವಿಷಯವೆಂದರೆ ಪಂತ್ ಜಹೀರ್ ಅವರ ಮಾತನ್ನು ಕೇಳದೆ ಅವರ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಭಜ್ಜಿ ತಿಳಿಸಿದ್ದಾರೆ.
15 ಎಸೆತಗಳಲ್ಲಿ 15 ರನ್ ಸಿಡಿಸಿದ ಪಂತ್
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಸ್ನೇಹಿ ವಿಕೆಟ್ನಲ್ಲಿ ಪಂತ್ 15 ರನ್ಗಳಿಸಿ ಕಳಪೆಯಾಗಿ ಔಟಾದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪಂತ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡಲಾಗಉತ್ತಿದೆ. ಅದೇ ವಿಕೆಟ್ನಲ್ಲಿ, ಎಲ್ಎಸ್ಜಿ ವಿಕೆಟ್ ಕೀಪರ್ ನಿಕೋಲಸ್ ಪೂರನ್ 26 ಎಸೆತಗಳಲ್ಲಿ 70 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 52 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಇದನ್ನೂ ಓದಿ: ಚೆಪಾಕ್ನಲ್ಲಿ ಗರಿಷ್ಠ ಮತ್ತು ಕನಿಷ್ಠ ಸ್ಕೋರ್ ಎಷ್ಟು? ಟಾಸ್ ಗೆದ್ದ ತಂಡದ ಬೆಸ್ಟ್ ಆಯ್ಕೆ ಯಾವುದು?
ಪಂತ್ ಆರಂಭಿಕರಾಗಿ ಆಡಬೇಕೆಂದ ಭಜ್ಜಿ
ರಿಷಭ್ ಪಂತ್ ನಾಯಕತ್ವದ ಎಲ್ಎಸ್ಜಿ ಈ ಋತುವಿನ ಐಪಿಎಲ್ನಲ್ಲಿ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದಿದ್ದರೆ, ಒಂದರಲ್ಲಿ ಸೋತಿದೆ. ಎಲ್ಎಸ್ಜಿ ತನ್ನ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್ 1 ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಪಂತ್ ಶೂನ್ಯಕ್ಕೆ ಔಟಾಗಿದ್ದರು. ಪಂತ್ರಂತಹ ಬ್ಯಾಟ್ಸ್ಮನ್ ಆರಂಭಿಕ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಹರ್ಭಜನ್ ಕೂಡ ಬಯಸುತ್ತಾರೆ. ಪಂತ್, ಪೂರನ್ ಮತ್ತು ಮಾರ್ಕ್ರಾಮ್ ಅವರಂತಹ ಬ್ಯಾಟ್ಸ್ಮನ್ಗಳು ನಿಮ್ಮಲ್ಲಿದ್ದರೆ, ಈ ಬ್ಯಾಟ್ಸ್ಮನ್ಗಳು ನಾಲ್ಕು ಅಥವಾ ಐದನೇ ಕ್ರಮಾಂಕಕ್ಕಿಂತ ಕಡಿಮೆ ಬ್ಯಾಟಿಂಗ್ ಮಾಡಬಾರದು ಎಂದು ಎಂತಹವರಾದರು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.
March 28, 2025 8:08 PM IST