Last Updated:
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ದಿನ ಟೀಂ ಇಂಡಿಯಾ ಮೇಲುಗೈ ಸಾಧಿಸಿತು. ಆದ್ರೆ, ಎರಡನೇ ದಿನದ ಮೊದಲ ಸೆಶನ್‌ನಲ್ಲಿ ಶತಕ ಸಿಡಿಸಿದ ಪಂತ್, ಬಳಿಕವೂ ಅಬ್ಬರಿಸಸಿದರು. 134 ರನ್ ಚಚ್ಚಿದರು. ಈ ವೇಳೆ ಅವರಿಗೆ ಅದೃಷ್ಟ ಕೂಡ ಕೈ ಹಿಡಿದಿದೆ.
ಇಂಗ್ಲೆಂಡ್ ಹಾಗೂ ಭಾರತ (India vs England) ನಡುವಿನ ಆ್ಯಂಡರ್ಸನ್-ಸಚಿನ್ ಟೆಸ್ಟ್ ಸರಣಿ ಜೂನ್ 20ರಿಂದ ಲೀಡ್ಸ್‌ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿದೆ. ಮೊದಲ ದಿನ 65 ರನ್ ಸಿಡಿಸಿ ನಾಟೌಟ್ ಆಗಿ ಉಳಿದಿದ್ದ ರಿಷಬ್ ಪಂತ್ (Rishabh Pant) ಇಂದು ಅಬ್ಬರಿಸಿದರು, 2ನೇ ದಿನದಾಟದ ಮೊದಲ ಸೆಶನ್‌ನಲ್ಲೇ ಅವರು ಶತಕ ಸಿಡಿಸಿ ಸಂಭ್ರಮಿಸಿದರು.
ಇನ್ನೂ ಶತಕ ಸಿಡಿಸಿದ ಬಳಿಕವೂ ಅಬ್ಬರಿಸಸಿದ ಪಂತ್ ಅವರು, 134 ರನ್ ಚಚ್ಚಿದರು. ಈ ವೇಳೆ ಅವರಿಗೆ ಅದೃಷ್ಟ ಕೂಡ ಕೈ ಹಿಡಿದಿದೆ. ಶತಕ ಸಿಡಿಸಿ 124 ರನ್ ಗಳಿಸಿದ್ದಾಗ ಇಂಗ್ಲೆಂಡ್‌ನ ಸ್ಪಿನ್ ಬೌಲರ್ ಬಶೀರ್ ಬೌಲಿಂಗ್‌ನ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿರುತ್ತಾರೆ. ಮುಂದಿನ ಎಸೆತ ಡಾಟ್ ಬಾಲ್ ಆಗುತ್ತದೆ. ಆದ್ರೆ, ಮೂರನೇ ಎಸೆತವನ್ನು ಕೂಡ ಬೌಂಡರಿ ಬಾರಿಸುವ ಆತುರದಲ್ಲಿದ್ದ ರಿಷಬ್ ಪಂತ್ ಮುಂದೆ ಬಂದು ಬಿಗ್ ಶಾಟ್ ಹೊಡೆಯಲು ಯತ್ನಿಸುತ್ತಾರೆ.
ಆದ್ರೆ, ರಿಷಬ್ ಪಂತ್ ಅವರು ಬಾಲ್ ಅನ್ನು ಸಂಪೂರ್ಣವಾಗಿ ಬೀಟನ್ ಆಗುತ್ತಾರೆ. ವಿಕೆಟ್ ಕೀಪರ್ ಜೇಮಿ ಸ್ಮಿತ್ ಮಿಸ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಪಂತ್ ಅವರು ಬ್ಯಾಟ್ ಕೈಬಿಟ್ಟಿರುತ್ತಾರೆ. ಅಷ್ಟೇ ಅಲ್ಲ, ಅವರು ಶೂ ಕೂಡ ಮಿಸ್ ಕಾಲಿಂದ ಕಳಚಿ ಹೋಗಿರುತ್ತದೆ. ಇಷ್ಟೆಲ್ಲಾ ಒಂದೇ ಸಂದರ್ಭದಲ್ಲಿ ಆದ್ರೂ ಕೂಡ ರಿಷಬ್ ಪಂತ್ ಔಟ್ ಆಗದೆ ಉಳಿದುಕೊಳ್ಳುತ್ತಾರೆ. ಸದ್ಯ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.
10 ಬೌಂಡರಿ 5 ಸಿಕ್ಸರ್ ಸಿಡಿಸಿದ ಪಂತ್
ಇಂಗ್ಲೆಂಡ್‌ನಲ್ಲಿ ಸತತ 2 ಶತಕ ಸಿಡಿಸಿ ಮಿಂಚಿದರು. ರಿಷಬ್ ಪಂತ್ ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 10 ಬೌಂಡರ್ ಹಾಗೂ 5 ಅಮೋಘ ಸಿಕ್ಸರ್ ಸಹಿತ ಶತಕ ಸಿಡಿಸಿ ಸಂಭ್ರಮಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಈ ಹಿಂದೆ ಈ ದಾಖಲೆ ಎಂ ಎಸ್ ಧೋನಿ ಹೆಸರಿನಲ್ಲಿತ್ತು.
ಧೋನಿ ದಾಖಲೆ ಮುರಿದ ಪಂತ್
ಟೆಸ್ಟ್ ಕ್ರಿಕೆಟ್‌ನಲ್ಲಿ ಎಂ ಎಸ್ ಧೋನಿ ಅವರು ಒಟ್ಟು 6 ಶತಕ ಸಿಡಿಸಿದ್ದಾರೆ. ಇಂದಿನ ಶತಕದ ಮೂಲಕ ಮಾಜಿ ನಾಯಕ ಧೋನಿ ಅವರ ದಾಖಲೆ ಮುರಿದು ಟೆಸ್ಟ್ ಕರಿಯರ್‌ನಲ್ಲಿ ತಮ್ಮ 7ನೇ ಶತಕ ಸಿಡಿಸಿ ಮಿಂಚಿದರು. ಭಾರತದ ಪರ ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯ ವಿಕೆಟ್ ಕೀಪರ್‌ಗಳು ಯಾರು ಎಂದು ನೋಡೋಣ ಬನ್ನಿ.
ರಿಷಬ್ ಪಂತ್ 7 ಶತಕ, ಮಾಜಿ ನಾಯಕ ಎಂಎಸ್ ಧೋನಿ 6 ಶತಕ, ವೃದ್ಧಿಮಾನ್ ಸಾಹ 3 ಶತಕ, ಸೈಯದ್ ಕಿರ್ಮಾನಿ 2 ಶತಕ ಹಾಗೂ ಫಾರೋಖ್ ಎಂಜಿನಿಯರ್ 2 ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಪರ ಅತೀ ಹೆಚ್ಚು ಶತಕ ಸಿಡಿಸಿದ ಟಾಪ್ 5 ಆಟಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
June 21, 2025 7:43 PM IST