ಒಂದು ಅರ್ಧಶತಕ,6 ಸಿಂಗಲ್ ನಂಬರ್ಗೆ ಔಟ್
ಈ ಋತುವಿನಲ್ಲಿ 10 ಪಂದ್ಯಗಳನ್ನಾಡಿರುವ ಪಂತ್, ಕೇವಲ 110 ರನ್ಗಳನ್ನು (ಸರಾಸರಿ 12.22, ಸ್ಟ್ರೈಕ್ ರೇಟ್ 104.76) ಗಳಿಸಿದ್ದಾರೆ. ಅವರು ಮೊದಲ ಪಂದ್ಯದಿಂದ ಕ್ರಮವಾಗಿ 0,15, 2,2,21,63, 3, 0,4 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಅವರನ್ನ ಭಾರೀ ಪೈಪೋಟಿಯೊಂದಿಗೆ ಬರೋಬ್ಬರಿ 27 ಕೋಟಿಗೆ ಖರೀದಿಸಿಲಾಗುತ್ತು. ಈ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಇದನ್ನೂ ಓದಿ: IPL 2025: ವೇಗವಾಗಿ 4000 ರನ್! ಕೊಹ್ಲಿ, ರೋಹಿತ್, ರಾಹುಲ್ ಎಲ್ಲರ ದಾಖಲೆ ಉಡೀಸ್ ಮಾಡಿದ ಸೂರ್ಯ
ಕೆಟ್ಟದಾಗಿ ಔಟ್, ಟ್ರೋಲ್ಗೆ ಒಳಗಾದ ಪಂತ್
ಆದರೆ, ಅವರ ಈ ಕಳಪೆ ಪ್ರದರ್ಶನ ಲಕ್ನೋ ಅಭಿಮಾನಿಗಳಿಗೆ ಜೀರ್ಣಿಸಲು ಕಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್ಗಳು ಪಂತ್ರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇಷ್ಟೊಂದು ಕೆಟ್ಟ ಪ್ರದರ್ಶನ ಐಪಿಎಲ್ನಲ್ಲಿ ಎಂದೂ ಕಂಡಿಲ್ಲ, ಪಂತ್, ನೀವು ಬದಲಾಗೋದೇ ಇಲ್ಲವಾ? ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 63 ರನ್ (49 ಎಸೆತ) ಗಳಿಸಿದ್ದನ್ನು ಬಿಟ್ಟರೆ, ಪಂತ್ ಈ ಋತುವಿನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ವಿಫಲರಾಗಿದ್ದಾರೆ. ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಸ್ವೀಪ್, ರಿವರ್ಸ್ ಸ್ವೀಪ್ ಮೂಲಕ ಕ್ಯಾಚ್ ಔಟ್ ಆಗಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ವ್ಯಕ್ತವಾಗಿದೆ.
ಪಂದ್ಯದ ವಿವರ
ಪಂದ್ಯದ ವಿವರವನ್ನು ಗಮನಿಸಿದರೆ, ಮುಂಬೈ ಇಂಡಿಯನ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 54 ರನ್ಗಳ ಭರ್ಜರಿ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಎಂಐ, ಸೂರ್ಯಕುಮಾರ್ ಯಾದವ್ (54, 28 ಎಸೆತ) ಮತ್ತು ರಿಯಾನ್ ರಿಕಲ್ಟನ್ (58, 32 ಎಸೆತ) ರ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ಗೆ 215 ರನ್ ಗಳಿಸಿತು. 216 ರನ್ಗಳ ಗುರಿಯನ್ನು ಬೆನ್ನಟ್ಟಿದ ಲಕ್ನೋ, 20 ಓವರ್ಗಳಲ್ಲಿ 161 ರನ್ಗಳಿಗೆ ಆಲೌಟ್ ಆಯಿತು. ಆಯುಷ್ ಬದೋನಿ (35) ಮತ್ತು ಮಿಚೆಲ್ ಮಾರ್ಷ್ (34) ಗರಿಷ್ಠ ರನ್ ಗಳಿಸಿದರೂ, ತಂಡದ ಬ್ಯಾಟಿಂಗ್ ಕುಸಿದ ಕಾರಣ ಹೀನಾಯ ಸೋಲು ಕಂಡಿತು.
ಮುಂಬೈ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ (4-0-22-4), ಟ್ರೆಂಟ್ ಬೌಲ್ಟ್ 3 ವಿಕೆಟ್, ವಿಲ್ ಜಾಕ್ಸ್ 2 ವಿಕೆಟ್ (ಪಂತ್ ಮತ್ತು ಪೂರನ್ರ ವಿಕೆಟ್ಗಳು) ಮತ್ತು ಕಾರ್ಬಿನ್ ಬಾಷ್ 1 ವಿಕೆಟ್ ಪಡೆದರು.
ಇದನ್ನೂ ಓದಿ: IPL 2025: ವೇಗವಾಗಿ 4000 ರನ್! ಕೊಹ್ಲಿ, ರೋಹಿತ್, ರಾಹುಲ್ ಎಲ್ಲರ ದಾಖಲೆ ಉಡೀಸ್ ಮಾಡಿದ ಸೂರ್ಯ
ಸ್ವದೇಶಿ ಆಟಗಾರರ ವೈಫಲ್ಯ
ಲಕ್ನೋಗೆ ಈ ಸೋಲು ಐಪಿಎಲ್ 2025ರಲ್ಲಿ ಭಾರೀ ಹಿನ್ನಡೆಯಾಗಿದೆ. 10 ಪಂದ್ಯಗಳಲ್ಲಿ 5 ಗೆಲುವು 5 ಸೋಲುಗಳೊಂದಿಗೆ ತಂಡ 6ನೇ ಸ್ಥಾನದಲ್ಲಿದೆ, ಆದರೆ ಪಂತ್ರ ನಾಯಕತ್ವ ಮತ್ತು ಬ್ಯಾಟಿಂಗ್ ವೈಫಲ್ಯ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಪಂತ್ರ ಕಳಪೆ ಫಾರ್ಮ್ನಿಂದಾಗಿ ತಂಡದ ಮೇಲೆ ಒತ್ತಡ ಹೆಚ್ಚಿದ್ದು, ಐಡೆನ್ ಮಾರ್ಕ್ರಮ್ (335) ಮಿಚೆಲ್ ಮಾರ್ಷ್ (378 ರನ್) ಮತ್ತು ನಿಕೋಲಸ್ ಪೂರನ್ (404ರನ್) ಮಾತ್ರ ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ. ಪಂತ್ ತಮ್ಮ ಫಾರ್ಮ್ ಮರಳಿ ಪಡೆಯದಿದ್ದರೆ, ಲಕ್ನೋಗೆ ಪ್ಲೇಆಫ್ ತಲುಪುವುದು ಕಷ್ಟವಾಗಬಹುದು. ಅಭಿಮಾನಿಗಳು ಮತ್ತು ವಿಶ್ಲೇಷಕರು ಪಂತ್ ಆದಷ್ಟು ಬೇಗ ಫಾರ್ಮ್ಗೆ ಮರಳಲಿ ಎಂದು ಕೆಲವರು ಆಶಿಸಿದರೆ, ಕೆಎಲ್ ರಾಹುಲ್ರನ್ನ ಕಡೆಗಣಿಸಿ, ದುಬಾರಿ ಬೆಲೆ ತೆತ್ತು ಪಂತ್ ಖರೀದಿ ಮಾಡಿದ್ದರೆ, ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯಂಕಾರನ್ನ ಟ್ರೋಲ್ ಮಾಡುತ್ತಿದ್ದಾರೆ.
April 27, 2025 10:38 PM IST