Rohit Sharma: ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಿವೃತ್ತಿ! ಟೀಂ ಇಂಡಿಯಾದಲ್ಲಿ ಸ್ಥಾನವೇ ಇಲ್ಲದ ಆಟಗಾರನಿಗೆ ಸಿಗುತ್ತಾ ನಾಯಕತ್ವ? | Rohit Sharma Test Retirement ajinkya Rahane kl rahul shubhman gill Leads Captaincy Race

Rohit Sharma: ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಿವೃತ್ತಿ! ಟೀಂ ಇಂಡಿಯಾದಲ್ಲಿ ಸ್ಥಾನವೇ ಇಲ್ಲದ ಆಟಗಾರನಿಗೆ ಸಿಗುತ್ತಾ ನಾಯಕತ್ವ? | Rohit Sharma Test Retirement ajinkya Rahane kl rahul shubhman gill Leads Captaincy Race

Last Updated:

ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ರೋಹಿತ್ ಈ ನಿರ್ಧಾರ ತೆಗೆದುಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ನಡುವೆ ನಾಯಕತ್ವ ಯಾರು ಎಂಬ ಪ್ರಶ್ನೆ ಎದ್ದಿವೆ.

ರೋಹಿತ್, ವಿರಾಟ್ , ಅಜಿಂಕ್ಯಾರೋಹಿತ್, ವಿರಾಟ್ , ಅಜಿಂಕ್ಯಾ
ರೋಹಿತ್, ವಿರಾಟ್ , ಅಜಿಂಕ್ಯಾ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಐಪಿಎಲ್ (IPL) ನಡೆಯುತ್ತಿರುವಾಗಲೇ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ. ಮಹತ್ವದ ಇಂಗ್ಲೆಂಡ್ ಸರಣಿಗೂ ಮುನ್ನವೇ ಅವರು ಟೆಸ್ಟ್ ಕ್ರಿಕೆಟ್‌ನಿಂದ ದಿಢೀರ್​ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ರೋಹಿತ್ ಈ ನಿರ್ಧಾರವನ್ನು ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಾವೂ ದೀರ್ಘ ಮಾದರಿಯಿಂದ ನಿವೃತ್ತಿ ಹೊಂದುತ್ತಿರುವುದಾಗಿ ತಿಳಿಸಿದ್ದಾರೆ. ಈ ನಡುವೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಮಾದರಿಯ ಕ್ರಿಕೆಟ್‌ನಲ್ಲಿ ತಂಡವನ್ನು ಯಾರು (Captain) ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.

ತವರಿನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರೋಹಿತ್ ಶರ್ಮಾ ಆಟಗಾರನಾಗಿ ಮತ್ತು ನಾಯಕನಾಗಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಹಾಗಾಗಿ ಅವರ ಟೆಸ್ಟ್ ಕ್ರಿಕೆಟ್​​ನಲ್ಲಿ ಮುಂದುವರಿಯುವುದು ಕಷ್ಟ ಎಂಬ ಮಾತು ಜನವರಿಯಿಂದಲೇ ಕೇಳಿಬರುತ್ತಿತ್ತು. ಇದೀಗ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ರೋಹಿತ್ ಈ ನಿರ್ಧಾರ ತೆಗೆದುಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ನಡುವೆ ನಾಯಕತ್ವದ ರೇಸ್‌ನಲ್ಲಿ ಸದ್ದಿಲ್ಲದೆ ಟೀಂ ಇಂಡಿಯಾದಿಂದ ಸದ್ಯ ಸ್ಥಾನ ಕಳೆದುಕೊಂಡಿರುವ ಅಜಿಂಕ್ಯಾ ರಹಾನೆ ಮುಂಚೂಣಿಗೆ ಬಂದಿದ್ದಾರೆ.

ಅಜಿಂಕ್ಯಾ ರಹಾನೆ

36 ವರ್ಷದ ಅಜಿಂಕ್ಯಾ ರಹಾನೆ ಟೆಸ್ಟ್ ಮಾದರಿಯ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರನಾಗಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೂ 85 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 144 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 5077 ರನ್ ಸಿಡಿಸಿದ್ದಾರೆ. ಇದರಲ್ಲಿ ಅವರು 12 ಶತಕ ಹಾಗೂ 26 ಅರ್ಧಶತಕ ಕೂಡ ದಾಖಲಿಸಿದ್ದಾರೆ. ಹಾಗಾಗಿ ಟೆಸ್ಟ್ ನಲ್ಲಿ ಅಪಾರ ಅನುಭವ ಹೊಂದಿರುವ ಅವರು ನಾಯಕತ್ವದ ರೇಸ್‌ನ್ಲಲಿ ಮುಂಚೂಣಿಯಲ್ಲಿದ್ದಾರೆ.

ಇಷ್ಟು ಮಾತ್ರವಲ್ಲದೆ ಅಜಿಂಕ್ಯಾ ರಹಾನೆ ಅವರಿಗೆ ಈಗಾಗಲೇ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿರುವ ಅನುಭವ ಕೂಡ ಇದೆ. ಅವರು 6 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದು, ಅದರಲ್ಲಿ 4 ರಲ್ಲಿ ಗೆಲವು ಹಾಗೂ ಎರಡು ಡ್ರಾ ಸಾಧಿಸಿದ್ದಾರೆ. ಇನ್ನೂ 2020-21 ರಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಯಂಗ್ ಇಂಡಿಯಾವನ್ನು ಮುನ್ನಡೆಸಿದ್ದ ರಹಾನೆ ಟ್ರೋಫಿ ಗೆಲ್ಲಿಸಿದ್ದರು. ಕೇವಲ ನಾಯಕನಾಗಿ ಮಾತ್ರವಲ್ಲದೆ ಶತಕ ಸಿಡಿಸಿ ಜವಾಬ್ದಾರಿ ಮೆರಿದ್ದರು.

ಇನ್ನೂ ಅಜಿಂಕ್ಯಾ ಅಜಿಂಕ್ಯ ರಹಾನೆ ಇತ್ತೀಚೆಗೆ ಮುಕ್ತಾಯಗೊಂಡ ರಣಜಿ ಟ್ರೋಫಿ ಸೇರಿದಂತೆ ದೇಸೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಸದ್ಯ ಕಳೆದ ಐಪಿಎಲ್ ಆಕ್ಷನ್‌ನಲ್ಲಿ ಕೆಕೆಆರ್ ಸೇರಿಕೊಂಡಿದ್ದ ಅವರಿಗೆ ನಾಯಕತ್ವದ ಜವಾಬ್ದಾರಿ ಕೂಡ ನೀಡಲಾಗಿತ್ತು. ಅವರು ಕೆಕೆಆರ್ ತಂಡವನ್ನು ಯಶಸ್ವಿಯಾಗಿಯೂ ಮನ್ನಡೆಸುತ್ತಿದ್ದಾರೆ. ಹಾಗಾಗಿ ಅವರಿಗೆ ನಾಯಕತ್ವ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೆಎಲ್ ರಾಹುಲ್

ಭಾರತೀಯ ಆಯ್ಕೆ ಸಮಿತಿಗೆ ಕೆಎಲ್ ರಾಹುಲ್ ಉತ್ತಮ ಆಯ್ಕೆ. ಅವರು ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ರಾಹುಲ್ ಅವರ ಟೆಸ್ಟ್ ಅಂಕಿ ಅಂಶಗಳನ್ನು ನೋಡಿದರೆ, ಅವರು 58 ಪಂದ್ಯಗಳಲ್ಲಿ 3,257 ರನ್ ಗಳಿಸಿದ್ದಾರೆ. ಟೆಸ್ಟ್‌ಗಳಲ್ಲಿ ಅವರ ಸ್ಟ್ರೈಕ್ ರೇಟ್ 52.80. ಅಲ್ಲದೆ, ರಾಹುಲ್ ವಿರಾಟ್ ಮತ್ತು ರೋಹಿತ್ ನಾಯಕತ್ವದಲ್ಲಿ ಹಲವು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಅವರಿಗೆ ಉತ್ತಮ ಟೆಸ್ಟ್ ಅನುಭವವಿದೆ ಹಾಗಾಗಿ ನಾಯಕತ್ವಕ್ಕೆ ಇವರನ್ನೂ ಪರಿಗಣಿಸುವ ಸಾಧ್ಯತೆ ಇದೆ.

ಶುಭ್‌ಮಾನ್ ಗಿಲ್

ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮಾನ್ ಗಿಲ್ ಕೂಡ ಟೆಸ್ಟ್ ನಾಯಕನಾಗಿ ಉತ್ತಮ ಆಯ್ಕೆ.  ಗಿಲ್ ಅವರನ್ನು ಭಾರತದ ಪೂರ್ಣಾವಧಿ ನಾಯಕರನ್ನಾಗಿ ಪರಿಗಣಿಸುವ ಸಾಧ್ಯತೆ ಕೂಡ ಇದೆ. ಈಗಾಗಲೇ ಅವರು ತಂಡದ ಉಪನಾಯಕವಾಗಿ ಉತ್ತಮ ಪ್ರದರ್ಶನ ತೋರಿದ್ದಾರೆ.  ಶುಭಮನ್ ಗಿಲ್ ಅವರ ಟೆಸ್ಟ್ ಅಂಕಿಅಂಶಗಳನ್ನು ನೋಡಿದರೆ, ಅವರು 32 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 1,893 ರನ್ ಗಳಿಸಿದ್ದಾರೆ.