Last Updated:
97 ಎಸೆತಗಳಲ್ಲಿ 73 ರನ್ಗಳಿಸಿದ ರೋಹಿತ್ ಈ ಅವಧಿಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದರು. ಈ ಅದ್ಭುತ ಇನ್ನಿಂಗ್ಸ್ ಮೂಲಕ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂಬುದನ್ನ ಆಸ್ಟ್ರೇಲಿಯಾ (India vs Australia) ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಎಂಟು ರನ್ ಗಳಿಸಿ ಔಟಾಗಿ ಟೀಕೆಗೆ ಗುರಿಯಾಗಿದ್ದ ಹಿಟ್‌ಮ್ಯಾನ್, ಎರಡನೇ ಏಕದಿನ ಪಂದ್ಯದಲ್ಲಿ ತಂಡ ಸಂಕಷ್ಟ ಪರಿಸ್ಥಿತಿಯಲ್ಲಿದ್ದ ವೇಳೆ ಅರ್ಧಶತಕ ಗಳಿಸಿದರು. 97 ಎಸೆತಗಳಲ್ಲಿ 73 ರನ್ ಗಳಿಸಿದ ಹಿಟ್‌ಮ್ಯಾನ್ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ರೋಹಿತ್ ಆಟ ನೋಡುತ್ತಿದ್ದರೆ ಅವರು ಶತಕ ಗಳಿಸಬಹುದೆಂದು ತೋರುತ್ತಿತ್ತು, ಆದರೆ ಅವರು ತಮ್ಮಿಷ್ಟದ ಪುಲ್ ಶಾಟ್ ಆಡುವ ಯತ್ನದಲ್ಲಿಯೇ ವಿಕೆಟ್ ಕಳೆದುಕೊಂಡರು.
97 ಎಸೆತಗಳಲ್ಲಿ 73 ರನ್ಗಳಿಸಿದ ರೋಹಿತ್ ಈ ಅವಧಿಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದರು. ಈ ಅದ್ಭುತ ಇನ್ನಿಂಗ್ಸ್ ಮೂಲಕ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಮುಂಬೈನ ಬಲಗೈ ಬ್ಯಾಟ್ಸ್‌ಮನ್ ಎರಡನೇ ಪಂದ್ಯದಲ್ಲಿ 46 ರನ್ ಗಳಿಸಿದ ತಕ್ಷಣ ಗಂಗೂಲಿ ಅವರ 11,221 ರನ್‌ಗಳ ಮೈಲಿಗಲ್ಲನ್ನು ಮೀರಿಸಿದರು.
ಆಡಮ್ ಜಂಪಾ 21ನೇ ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಈ ಸಾಧನೆ ಮಾಡಿದರು. ಗಂಗೂಲಿ 1992 ರಿಂದ 2007 ರವರೆಗೆ ಭಾರತ ಪರ 308 ಏಕದಿನ ಪಂದ್ಯಗಳನ್ನು ಆಡಿ, 297 ಇನ್ನಿಂಗ್ಸ್‌ಗಳಲ್ಲಿ ಒಟ್ಟು 11,221 ರನ್ ಗಳಿಸಿದ್ದಾರೆ. ಗಂಗೂಲಿ 22 ಶತಕ, 71 ಅರ್ಧಶತಕ ಸಿಡಿಸಿದ್ದರು. ಈ ಪಂದ್ಯವು ಭಾರತ ಪರ ರೋಹಿತ್ ಅವರ 275 ನೇ ಏಕದಿನ ಪಂದ್ಯವಾಗಿದ್ದು, ಅವರು 32 ಶತಕ, 59 ಅರ್ಧಶತಗಳೊಂದಿಗೆ 11249 ರನ್ಗಳಿಸಿದ್ದಾರೆ. ಈ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (18,426) ಮತ್ತು ವಿರಾಟ್ ಕೊಹ್ಲಿ (14,181) ಮಾತ್ರ ಈಗ ಅವರನ್ನು ಹಿಂದಿಕ್ಕಿದ್ದಾರೆ.
ಸಚಿನ್ ತೆಂಡೂಲ್ಕರ್- 463 ಪಂದ್ಯ- 18426 ರನ್ಸ್
ವಿರಾಟ್ ಕೊಹ್ಲಿ- 304 ಪಂದ್ಯ- 14181 ರನ್ಸ್
ರೋಹಿತ್ ಶರ್ಮಾ- 275 ಪಂದ್ಯ-11249 ರನ್ಸ್
ಸೌರವ್ ಗಂಗೂಲಿ- 308 ಪಂದ್ಯ- 11221 ರನ್ಸ್
ರಾಹುಲ್ ದ್ರಾವಿಡ್- 340 ಪಂದ್ಯ- 10768 ರನ್ಸ್
ಎಂಎಸ್ ಧೋನಿ- 347 ಪಂದ್ಯ- 10599 ರನ್ಸ್
ಸಚಿನ್ ತೆಂಡೂಲ್ಕರ್ (ಭಾರತ)- 463 ಪಂದ್ಯ- 18426 ರನ್ಸ್
ಕುಮಾರ್ ಸಂಗಾಕ್ಕಾರ (ಶ್ರೀಲಂಕಾ)- 404 ಪಂದ್ಯ- 14234 ರನ್ಸ್
ವಿರಾಟ್ ಕೊಹ್ಲಿ(ಭಾರತ)- 304 ಪಂದ್ಯ- 14181 ರನ್ಸ್
ರಿಕಿ ಪಾಂಟಿಂಗ್ (ಆಸ್ಟ್ರೆಲಿಯಾ)- 375 ಪಂದ್ಯ- 13704 ರನ್ಸ್
ಸನತ್ ಜಯಸೂರ್ಯ (ಶ್ರೀಲಂಕಾ)- 445 ಪಂದ್ಯ- 13430 ರನ್ಸ್
ಆಸ್ಟ್ರೇಲಿಯಾದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಹಿಟ್ ಮ್ಯಾನ್ 21 ಪಂದ್ಯಗಳಿಂದ 1071ರನ್ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅವರ ನೆಲದಲ್ಲಿ 1000 ರನ್ ಗಳಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ. ವಿರಾಟ್ ಕೊಹ್ಲಿ (802), ಸಚಿನ್ ತೆಂಡೂಲ್ಕರ್ (740), ಎಂಎಸ್ ಧೋನಿ (684) ನಂತರದಲ್ಲಿದ್ದಾರೆ.
October 23, 2025 4:17 PM IST