Rohit Sharma: ಒಂದು ಸೆಲ್ಫಿ ಪೋಸ್ಟ್‌ಗೆ 24 ಸಾವಿರ ಫಾಲೋವರ್ಸ್​ ಎಂಟ್ರಿ! ರೋಹಿತ್​ ಜೊತೆಗಿನ ಫ್ರೆಂಡ್​ಶಿಪ್​ ಬಗ್ಗೆ ಆಸೀಸ್ ಲೆಜೆಂಡ್​ ಹೇಳಿದ್ದಿಷ್ಟು! | ಕ್ರೀಡೆ

Rohit Sharma: ಒಂದು ಸೆಲ್ಫಿ ಪೋಸ್ಟ್‌ಗೆ 24 ಸಾವಿರ ಫಾಲೋವರ್ಸ್​ ಎಂಟ್ರಿ! ರೋಹಿತ್​ ಜೊತೆಗಿನ ಫ್ರೆಂಡ್​ಶಿಪ್​ ಬಗ್ಗೆ ಆಸೀಸ್ ಲೆಜೆಂಡ್​ ಹೇಳಿದ್ದಿಷ್ಟು! | ಕ್ರೀಡೆ

Last Updated:

ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ಕಾಮೆಂಟ್ರಿಯ ವೇಳೆ ಗಿಲ್ ​ಕ್ರಿಸ್ಟ್​ ಸ್ವತಃ ಈ ಮಾಹಿತಿಯನ್ನ ಹಚಿಕೊಂಡಿದ್ದಾರೆ. 2008ರಲ್ಲಿ ರೋಹಿತ್ ಜೊತೆಗೆ ಸ್ನೇಹ ಆರಂಭವಾಗಿದ್ದು, ಅವರು ಲೆಜೆಂಡರಿ ಬ್ಯಾಟರ್ ಬೆಳೆದಿದ್ದನ್ನೆಲ್ಲಾ ಹಂಚಿಕೊಂಡಿದ್ದಾರೆ.

ರೋಹಿತ್  ಶರ್ಮಾ
ರೋಹಿತ್ ಶರ್ಮಾ

ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ಆಡಂ ಗಿಲ್‌ಕ್ರಿಸ್ಟ್ (Australia cricketer) ತಮ್ಮ ಇನ್‌ಸ್ಟಾಗ್ರಾಂನಲ್ಲಿ (Instagram) ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಜೊತೆ ಒಂದು ಸೆಲ್ಫಿ ಪೋಸ್ಟ್ ಹಂಚಿಕೊಂಡಿದ್ದರು. ಆ ಫೋಟೋವನ್ನ ಶೇರ್ ಮಾಡಿಕೊಂಡ ಒಂದೇ ದಿನಕ್ಕೆ ಅವರ ಇನ್​ಸ್ಟಾಗ್ರಾಮ್ ಖಾತೆ 24 ಸಾವಿರಕ್ಕೂ ಹೆಚ್ಚು ಫಾಲೋಯರ್‌ಗಳ್ನ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗಿನ ಸ್ಟೋರಿ 70 ಲಕ್ಷಕ್ಕೂ ಹೆಚ್ಚು ವ್ಯೂಸ್ ಪಡೆದಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದ ಕಾಮೆಂಟ್ರಿಯ ವೇಳೆ ಗಿಲ್​ಕ್ರಿಸ್ಟ್​ ಸ್ವತಃ ಈ ಮಾಹಿತಿಯನ್ನ ಹಚಿಕೊಂಡಿದ್ದಾರೆ.

70 ಲಕ್ಷಕ್ಕೂ ಹೆಚ್ಚು ವ್ಯೂವ್ಸ್

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಕಾಮೆಂಟರಿ ವೇಳೆ, ಗಿಲ್‌ಕ್ರಿಸ್ಟ್ ಸೋಷಿಯಲ್ ಮೀಡಿಯಾದ ಪ್ರಭಾವ ಮತ್ತು ಕ್ರಿಕೆಟ್‌ನ ವಾಣಿಜ್ಯೀಕರಣದ ಬಗ್ಗೆ ಚರ್ಚಿಸಿದರು. “ನನ್ನ ಭಾರತೀಯ ವ್ಯೂಯರ್‌ಗಳಿಗೆ ಈ ಸಂಖ್ಯೆಗಳು ದೊಡ್ಡದಲ್ಲ, ಆದರೆ ರೋಹಿತ್ ಶರ್ಮಾಳೊಂದಿಗಿನ ಸರಳ ಸ್ಟೋರಿ, 1 ಮಿಲಿಯನ್ ಲೈಕ್ಸ್, 70 ಲಕ್ಷಕ್ಕೂ ಹೆಚ್ಚು ವ್ಯೂಸ್ ಪಡೆದಿದೆ. ಆ ಫೋಟೋ ನಂತರ ನನ್ನ ಖಾತೆಯ ಫಾಲೋವರ್ಸ್​ ಸಂಖ್ಯೆ 24 ಸಾವಿರಕ್ಕೂ ಹೆಚ್ಚಾಗಿದೆ ” ಎಂದು ಹೇಳಿಕೊಂಡಿದ್ದಾರೆ.

ಅಡಿಲೇಡ್ ಓವಲ್‌ನಲ್ಲಿ ನಡೆದ ಎರಡನೇ ಪಂದ್ಯದ ವೇಳೆ, ಈ ಇಬ್ಬರೂ ಕ್ರಿಕೆಟ್ ಐಕಾನ್‌ಗಳು 17 ವರ್ಷಗಳ ಹಿಂದಿನ ಸ್ನೇಹವನ್ನು ಸ್ಮರಿಸಿ ಮುಖಾಮುಖಿ ಆದರು. 2008ರಲ್ಲಿ ಐಪಿಎಲ್‌ನ ಮೊದಲ ಆಕ್ಕ್ಷನ್‌ನಲ್ಲಿ ಡೆಕನ್ ಚಾರ್ಜರ್ಸ್ ತಂಡದ ಪರ ಇಬ್ಬರೂ ಒಟ್ಟಿಗೆ ಆಡಿದ್ದರು. ಅಡಿಲೇಡ್‌ನಲ್ಲೇ ಮೊದಲ ಬಾರಿ ಭೇಟಿಯಾಗಿದ್ದ ಕುಶಲೋಪರಿ ವಿಚಾರಿಸಿಕೊಂಡರು. ಗಿಲ್‌ಕ್ರಿಸ್ಟ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ರೋಹಿತ್‌ನೊಂದಿಗಿನ ಸೆಲ್ಫಿ ಹಂಚಿಕೊಂಡು, ಭಾವುಕ ಕ್ಯಾಪ್ಷನ್ ಬರೆದಿದ್ದರು.

2008ರ ಹರಾಜಿನ ವೇಳೆ ಪರಿಚಯ

” ಈ ಗ್ರೌಂಡ್‌ನಲ್ಲೇ 2008ರಲ್ಲಿ ನಾವು ಮೊದಲ ಬಾರಿ ಭೇಟಿಯಾದೆವು. ಐಪಿಎಲ್ ಹರಾಜಿನ ನಂತರ ಡೆಕನ್ ಚಾರ್ಜರ್ಸ್‌ನಲ್ಲಿ ತಂಡದ ಸದಸ್ಯರಾದ ನಂತರ ಸ್ನೇಹ ಬೆಳೆದಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಾನು ವಿದಾಯ ಹೇಳುವ ಸಮಯದಲ್ಲಿ ಸಂದರ್ಭದಲ್ಲಿ ಭಾರತದ ಲೆಜೆಂಡ್ ಆಗಿ ಬೆಳೆಯುತ್ತಿದ್ದ ಯಂಗ್​ ಬುಲ್​ ರೋಹಿತ್​ ಜೊತೆ ಇನ್ನಿಂಗ್ಸ್ ಆರಂಭಿಸಿದ್ದೆ. ನಿಮ್ಮೊಂದಿಗೆ ಆಟವಾಡಿದ್ದು, ನಿಮ್ಮ ವಿರುದ್ಧ ಆಡಿರುವುದು ಹಾಗೂ ಬ್ರಾಡ್‌ಕಾಸ್ಟರ್ ಹಾಗೂ ಅಭಿಮಾನಿಯಾಗಿ ಜೊತೆಗೆ ಸ್ನೇಹಿತನಾಗಿ ನಿಮ್ಮನ್ನು ತಿಳಿದುಕೊಂಡಿರುವುದಕ್ಕೆ ತುಂಬಾ ಖುಷಿಯಿದೆ ” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: IND vs AUS: ಮಿಂಚಿದ ಹರ್ಷಿತ್ ರಾಣಾ, ಆಸ್ಟ್ರೇಲಿಯಾ ತಂಡವನ್ನ 236ಕ್ಕೆ ನಿಯಂತ್ರಿಸಿದ ಟೀಮ್ ಇಂಡಿಯಾ

ಈ ಪೋಸ್ಟ್‌ಗೆ 10 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಪಂದ್ಯಕ್ಕೆ ಮುನ್ನ ಫಾಕ್ಸ್ ಸ್ಪೋರ್ಟ್ಸ್‌ನ ಪ್ರಿ-ಗೇಮ್ ಕವರೇಜ್‌ನಲ್ಲಿ ರವಿ ಶಾಸ್ತ್ರಿಯೊಂದಿಗೆ ಮಾತನಾಡಿದ ಗಿಲ್‌ಕ್ರಿಸ್ಟ್, “ರೋಹಿತ್ ರಿಲ್ಯಾಕ್ಸ್‌ಡ್ ಆಗಿ ಕಾಣುತ್ತಿದ್ದಾರೆ. 2008ರಲ್ಲಿ ಈ ಗ್ರೌಂಡ್‌ನಲ್ಲೇ ಐಪಿಎಲ್ ಆಕ್ಷನ್​ ನಂತರ ಮೊದಲ ಭೇಟಿ ನಡೆದಿತ್ತು. ನಾವು ಹಳೆಯ ಬುಲ್ ಮತ್ತು ಹೊಸ ಬುಲ್ ಆಗಿ ನಾವು ತಂಡದಲ್ಲಿ ಸೇರಿದ್ದೆವು,” ಎಂದು ಹೇಳಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Rohit Sharma: ಒಂದು ಸೆಲ್ಫಿ ಪೋಸ್ಟ್‌ಗೆ 24 ಸಾವಿರ ಫಾಲೋವರ್ಸ್​ ಎಂಟ್ರಿ! ರೋಹಿತ್​ ಜೊತೆಗಿನ ಫ್ರೆಂಡ್​ಶಿಪ್​ ಬಗ್ಗೆ ಆಸೀಸ್ ಲೆಜೆಂಡ್​ ಹೇಳಿದ್ದಿಷ್ಟು!