Rohit Sharma: ಚಾಂಪಿಯನ್​ ಟ್ರೋಫಿ ಗೆಲ್ಲಲು ಗಂಭೀರ್​ ಅಲ್ಲ, ಕನ್ನಡಿಗ ಕಾರಣ! ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ರೋಹಿತ್ ಶಾಕಿಂಗ್​ ಹೇಳಿಕೆ | Rohit Sharma Credits Rahul Dravid for Champions Trophy Win, Snubs Gautam Gambhir | ಕ್ರೀಡೆ

Rohit Sharma: ಚಾಂಪಿಯನ್​ ಟ್ರೋಫಿ ಗೆಲ್ಲಲು ಗಂಭೀರ್​ ಅಲ್ಲ, ಕನ್ನಡಿಗ ಕಾರಣ! ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ರೋಹಿತ್ ಶಾಕಿಂಗ್​ ಹೇಳಿಕೆ | Rohit Sharma Credits Rahul Dravid for Champions Trophy Win, Snubs Gautam Gambhir | ಕ್ರೀಡೆ

Last Updated:

ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ನೇತೃತ್ವದಲ್ಲಿ, ಭಾರತವು 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿನ ಸೋಲಿನಿಂದ ಚೇತರಿಸಿಕೊಂಡು 2024ರ ಟಿ 20 ವಿಶ್ವಕಪ್ ಗೆದ್ದಿತು. ನಂತರ ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು.

ಗಂಭೀರ್-ರೋಹಿತ್ಗಂಭೀರ್-ರೋಹಿತ್
ಗಂಭೀರ್-ರೋಹಿತ್

ಮುಂಬೈ: ಈ ವರ್ಷದ ಆರಂಭದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ (Champions Trophy) ಗೆದ್ದಿತ್ತು. ಈ ಮೂಲಕ ಸತತ 2 ಐಸಿಸಿ ಟ್ರೋಪಿ (ICC Trophy) ಗೆದ್ದು ರೋಹಿತ್​ ಶರ್ಮಾ (Rohit Sharma) ಇತಿಹಾಸ ನಿರ್ಮಿಸಿದ್ದರು. ಆದರೆ ಮಾಜಿ ನಾಯಕ ರೋಹಿತ್ ಈ ಗೆಲುವಿನ ಶ್ರೇಯವನ್ನ ಪ್ರಸ್ತುತ ಕೋಚ್ ಗಂಭೀರ್​ಗೆ ನೀಡುವ ಬದಲಿಗೆ ಹಿಂದಿನ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್​ಗೆ ನೀಡಿದ್ದಾರೆ. ಈ ಹೇಳಿಕೆಯಿಂದ ಕೆಲವರು ಇದನ್ನು ಏಕದಿನ ನಾಯಕತ್ವದಿಂದ ಅವರನ್ನು ತೆಗೆದುಹಾಕಿದ್ದಕ್ಕೆ ಲಿಂಕ್ ಮಾಡುತ್ತಿದ್ದಾರೆ.

ದ್ರಾವಿಡ್ ಪ್ಲಾನ್​​ ಅಳವಡಿಸಿಕೊಂಡೆವು

ಮಂಗಳವಾರ ರಾತ್ರಿ ಮುಂಬೈನಲ್ಲಿ ನಡೆದ ಸಿಯೆಟ್ ಕ್ರಿಕೆಟ್ ರೇಟಿಂಗ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿಯಲ್ಲಿ ರೂಪಿಸಲಾದ ಯೋಜನೆಯನ್ನು ಅನುಸರಿಸುವುದರಿಂದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲು ಸಹಾಯವಾಯಿತು ಎಂದು ಒಪ್ಪಿಕೊಂಡಿದ್ದಾರೆ.

ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ನೇತೃತ್ವದಲ್ಲಿ, ಭಾರತವು 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿನ ಸೋಲಿನಿಂದ ಚೇತರಿಸಿಕೊಂಡು 2024ರ ಟಿ 20 ವಿಶ್ವಕಪ್ ಗೆದ್ದಿತು. ನಂತರ ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು.

  ಒಂದೆರಡು ದಿನಗಳ ಯೋಜನೆಯಲ್ಲ

ಆ ತಂಡ ಮತ್ತು ಅವರೊಂದಿಗೆ ಆಡುವುದನ್ನು ನಾನು ತುಂಬಾ ಇಷ್ಟಪಡುತ್ತೇನೆ. ನಾವೆಲ್ಲರೂ ವರ್ಷಗಳಿಂದ ಈ ಪ್ರಯಾಣದಲ್ಲಿದ್ದೇವೆ. ಇದು ಒಂದು ಅಥವಾ ಎರಡು ವರ್ಷಗಳ ಯೋಜನೆಯಾಗಿರಲಿಲ್ಲ. ಇದು ದೀರ್ಘಾವಧಿಯ ಪ್ರಯತ್ನವಾಗಿತ್ತು. ನಾವು ಹಲವಾರು ಬಾರಿ ಟ್ರೋಫಿಯನ್ನು ಗೆಲ್ಲುವ ಹತ್ತಿರ ಬಂದಿದ್ದೆವು, ಆದರೆ ಸಾಧ್ಯವಾಗಲಿಲ್ಲ. ಆಗ ಎಲ್ಲರೂ ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದಿವೆ, ಅದಕ್ಕಾಗಿ 2 ಮಾರ್ಗಗಳನ್ನ ಕಂಡುಕೊಂಡೆವು.

ಎರಡು ಪ್ಲಾನ್ ಮಾಡಿಕೊಂಡಿದ್ದೆವು

ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಕ್ಕಾಗಿ ಸ್ಮರಣಿಕೆ ಪಡೆದ ರೋಹಿತ್, “ಆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರು ಪಂದ್ಯಗಳನ್ನು ಹೇಗೆ ಗೆಲ್ಲುವುದು, ತಮ್ಮನ್ನು ತಾವು ಹೇಗೆ ಚಾಲೆಂಜ್ ಮಾಡಿಕೊಳ್ಳುವುದು ಮತ್ತು ಯಾವುದನ್ನೂ ಹಗುರವಾಗಿ ಪರಿಗಣಿಸದಿರುವುದು ಹೇಗೆ ಎಂಬುದರ ಕುರಿತು ಯೋಚಿಸಿದೆವು. ಟಿ20 ವಿಶ್ವಕಪ್‌ಗೆ ನಾವು ತಯಾರಿ ನಡೆಸುತ್ತಿದ್ದಾಗ ಈ ಪ್ರಕ್ರಿಯೆಯು ರಾಹುಲ್ ಭಾಯ್ ಮತ್ತು ನನಗೆ ತುಂಬಾ ಸಹಾಯ ಮಾಡಿತು. ನಾವು ಅದನ್ನು ಚಾಂಪಿಯನ್ಸ್ ಟ್ರೋಫಿಯಲ್ಲೂ ಅಳವಡಿಸಿಕೊಂಡಿ ಚಾಂಪಿಯನ್ ಆದೆವು” ಎಂದು ಹೇಳಿದ್ದಾರೆ.

ನಾಯಕತ್ವದಿಂದ ವಜಾ ಬಗ್ಗೆಯೂ ರೋಹಿತ್ ಶರ್ಮಾ ಮಾತು

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ, ರೋಹಿತ್ ಅಲ್ಲ, ಶುಭ್​ಮನ್ ಗಿಲ್ ಭಾರತೀಯ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. “ನನಗೆ ಅವಕಾಶ ಸಿಕ್ಕಾಗಲೆಲ್ಲಾ, ನಾನು ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಆಡುವುದನ್ನು ನಾನು ಆನಂದಿಸುತ್ತೇನೆ. ಅಲ್ಲಿ ಕ್ರಿಕೆಟ್ ಆಡುವುದು ತುಂಬಾ ಸವಾಲಿನ ಕೆಲಸ. ನನಗೆ ಅಲ್ಲಿ ಸಾಕಷ್ಟು ಅನುಭವವಿದೆ, ಆದ್ದರಿಂದ ನನಗೆ ಹೇಗೆ ಆಡಬೇಕೆಂದು ತಿಳಿದಿದೆ” ಎಂದು ರೋಹಿತ್ ಹೇಳಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Rohit Sharma: ಚಾಂಪಿಯನ್​ ಟ್ರೋಫಿ ಗೆಲ್ಲಲು ಗಂಭೀರ್​ ಅಲ್ಲ, ಕನ್ನಡಿಗ ಕಾರಣ! ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ರೋಹಿತ್ ಶಾಕಿಂಗ್​ ಹೇಳಿಕೆ