Last Updated:
ಸಂಜಯ್ ಮಂಜ್ರೇಕರ್ ಹೇಳಿದಂತೆ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲ. ಆದರೆ ಹಿಟ್ ಮ್ಯಾನ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್ಮನ್ ಆಗಿ ಮುಂದುವರೆದಿದ್ದಾರೆ. ಅವರು ಮೂರು ಸ್ವರೂಪಗಳಲ್ಲಿ 19,700 ರನ್ ಗಳಿಸಿದ್ದಾರೆ.
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿ ನೀಡಿ ಸುದ್ದಿಯಾಗುವ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ (Sanjay Manjrekar) ಇದೀಗ ರೋಹಿತ್ ಶರ್ಮಾ ಮೇಲೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ ಎಂದು ಹೇಳಿದ್ದಾರೆ. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿಯಂತಹ ದಂತಕಥೆಗಳ ಮಟ್ಟವನ್ನು ರೋಹಿತ್ ಶರ್ಮಾ ತಲುಪಿಲ್ಲ ಎಂದು ಅವರು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ದೂರದರ್ಶನದಲ್ಲಿ ನಡೆದ ಗ್ರೇಟ್ ಇಂಡಿಯನ್ ಕ್ರಿಕೆಟ್ ಶೋನಲ್ಲಿ ಭಾಗವಹಿಸಿದ್ದ ಸಂಜಯ್ ಮಂಜ್ರೇಕರ್ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ರೋಹಿತ್ ಶರ್ಮಾ 3 ದ್ವಿಶತಕ, 10 ಸಾವಿರ ರನ್ ಸಿಡಿಸಿ ಅಸಾಧಾರಣ ಪ್ರದರ್ಶನ ನೀಡಿದ್ದರೂ ಅವರು ಲೆಜೆಂಡ್ಸ್ ಪಟ್ಟಿಯಲ್ಲಿರಲು ಅರ್ಹರಲ್ಲ ಎಂದಿರುವುದಕ್ಕೆ ಅಭಿಮಾನಿಗಳು ಕಿಡಿ ಕಾರಿದ್ದಾರೆ.
‘ನನ್ನ ಅಭಿಪ್ರಾಯದಲ್ಲಿ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿಲ್ಲ. ಅವರ ಪ್ರದರ್ಶನ ಅದಕ್ಕೆ ಸಾಕಾಗುವುದಿಲ್ಲ. ಏಕೆಂದರೆ ರೋಹಿತ್ ಶರ್ಮಾ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿಯಂತಹ ದಂತಕಥೆಗಳ ಮಟ್ಟವನ್ನು ತಲುಪಿಲ್ಲ. ಆದಾಗ್ಯೂ, ರೋಹಿತ್ ಶರ್ಮಾ ನಾಯಕನಾಗಿ ಹಿಂದೆ ಹಿಂದೆ ಬಿದ್ದಿಲ್ಲ. ಅವರ ನಿಸ್ವಾರ್ಥ ನಾಯಕತ್ವವನ್ನು ಖಂಡಿತವಾಗಿಯೂ ಪ್ರಶಂಸಿಸಬೇಕು. ವಿಶೇಷವಾಗಿ 2023ರ ಏಕದಿನ ವಿಶ್ವಕಪ್ ನಂತರ, ಜನರಲ್ಲಿ ಅವರ ಮೇಲಿನ ಪ್ರೀತಿ ದ್ವಿಗುಣಗೊಂಡಿದೆ. ಅವರು ಎಂದಿಗೂ ತಮ್ಮ ಬಗ್ಗೆ ಯೋಚಿಸುವುದಿಲ್ಲ, ತಂಡಕ್ಕಾಗಿ ತಮ್ಮ ಹಿತಾಸಕ್ತಿಗಳನ್ನು ಸಹ ತ್ಯಾಗ ಮಾಡಲು ಸಿದ್ಧರಾಗಿದ್ದರು. ಅದೇ ಅವರನ್ನು ವಿಶೇಷವಾಗಿಸಿತು. ಸೀಮಿತ ಸಂಓವರ್ಗಳ ಕ್ರಿಕೆಟ್ನಲ್ಲಿ ಅವರ ಪ್ರಾಬಲ್ಯವನ್ನು ನೋಡಲುತೋಷವಾಯಿತು.
” ರೋಹಿತ್ ಏಕದಿನ ಇನ್ನಿಂಗ್ಸ್ನಲ್ಲಿ 300 ರನ್ ಗಳಿಸುವ ಹಂತಕ್ಕೆ ತಲುಪಿ ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ ನಾವು ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳ ಬಗ್ಗೆ ಮಾತನಾಡುವಾಗ, ಟೆಸ್ಟ್ ಕ್ರಿಕೆಟ್ ಅನ್ನು ಸಹ ಪರಿಗಣಿಸಬೇಕು. ಆದರೆ ಟೆಸ್ಟ್ ಸ್ವರೂಪದಲ್ಲಿ ರೋಹಿತ್ ಶರ್ಮಾ ಹೆಚ್ಚು ಪ್ರಭಾವ ಬೀರಿಲ್ಲ. ಅದಕ್ಕಾಗಿಯೇ ಅವರು ಭಾರತದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಲ್ಲ ಎಂದು ನಾನು ಹೇಳುತ್ತೇನೆ ” ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಈ ಕಾಮೆಂಟ್ಗಳ ಬಗ್ಗೆ ರೋಹಿತ್ ಅಭಿಮಾನಿಗಳು ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೊಹ್ಲಿ,ಸಚಿನ್ ಮತ್ತು ಗವಾಸ್ಕರ್ಗಿಂತ ರೋಹಿತ್ ಉತ್ತಮ ಆಟಗಾರ ಮತ್ತು ನಾಯಕ ಎಂದು ಅವರು ಕಾಮೆಂಟ್ ಮಾಡುತ್ತಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದೆ, ಆದರೆ ಅವರನ್ನ ಲೆಜೆಂಡ್ಸ್ ಪಟ್ಟಿಗೆ ಸೇರಿಸಲಾಗಲ್ಲ ಎನ್ನುವ ಸಂಜಯ್ ಮಂಜ್ರೇಕರ್ ಬುದ್ಧಿ ಇಲ್ಲ ಎಂದು ಟೀಕಿಸುತ್ತಿದ್ದಾರೆ.
ಸಂಜಯ್ ಮಂಜ್ರೇಕರ್ ಹೇಳಿದಂತೆ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲ. ಆದರೆ ಹಿಟ್ ಮ್ಯಾನ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್ಮನ್ ಆಗಿ ಮುಂದುವರೆದಿದ್ದಾರೆ. ಅವರು ಮೂರು ಸ್ವರೂಪಗಳಲ್ಲಿ 19,700 ರನ್ ಗಳಿಸಿದ್ದಾರೆ. 67 ಟೆಸ್ಟ್ಗಳಲ್ಲಿ 4301 ರನ್ ಗಳಿಸಿರುವ ಹಿಟ್ ಮ್ಯಾನ್.. ಏಕದಿನಗಳಲ್ಲಿ 11,168 ರನ್ ಗಳಿಸಿದ್ದಾರೆ. ಏಕದಿನ ಸ್ವರೂಪದಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್ಮನ್. ಇದಲ್ಲದೆ, ಅತ್ಯಧಿಕ ವೈಯಕ್ತಿಕ ಸ್ಕೋರ್ (264) ದಾಖಲೆಯೂ ರೋಹಿತ್ ಹೆಸರಿನಲ್ಲಿದೆ.
September 09, 2025 6:44 PM IST
Rohit Sharma: ರೋಹಿತ್ ಭಾರತದ ಶ್ರೇಷ್ಠ ಬ್ಯಾಟರ್ಗಳ ಸಾಲಿನಲ್ಲಿರಲು ಅರ್ಹರಲ್ಲ! 3 ದ್ವಿಶತಕ ವೀರರನ್ನ ಅಪಮಾನಿಸಿದ್ರಾ ಭಾರತದ ಮಾಜಿ ಕ್ರಿಕೆಟರ್?