Last Updated:
ಕೊಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ಕೆಕೆಆರ್ 207 ರನ್‌ಗಳ ಟಾರ್ಗೆಟ್ ನೀಡಿದ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ 205 ರನ್ ಗಳಿಸಿ 1 ರನ್ ಅಂತರದಲ್ಲಿ ಗೆದ್ದು ಕೆಕೆಆರ್ ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿದೆ.
ಕೊಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ನಡೆದ ಮೊದಲ 53ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (RR) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 207 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಇದಕ್ಕೆ ಉತ್ತರವಾಗಿ ನಾಯಕ ರಿಯಾನ್ ಪರಾಗ್ (Riyan Parag) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 205 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಕೆಕೆಆರ್ 1 ರನ್ ಅಂತರದಲ್ಲಿ ಗೆದ್ದು ಕೆಕೆಆರ್ ಪ್ಲೇ ಆಫ್ ರೇಸ್‌ನಲ್ಲಿ ಇನ್ನೂ ಜೀವಂತವಾಗಿದೆ.
ಇದಕ್ಕೂ ಮೊದಲು ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ಕೇವಲ 13 ರನ್ಗಳಾಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಸುನಿಲ್ ನರೈನ್ ಕೇವಲ ಯುಧ್ವೀರ್ ಸಿಂಗ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ 2ನೇ ವಿಕೆಟ್‌ಗೆ ರೆಹ್ಮನುಲ್ಲಾ ಗುರ್ಬಜ್ ಹಾಗೂ ಅಜಿಂಕ್ಯ ರಹಾನೆ 56 ರನ್ಗಳಿಸಿದರು. ಗುರ್ಬಜ್ 25 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 35 ರನ್ಗಳಿಸಿ ತೀಕ್ಷಣ ಬೌಲಿಂಗ್ನಲ್ಲಿ ಹೆಟ್ಮೇಯರ್ಗೆ ಕ್ಯಾಚ್ ನೀಡಿದರು.
ನಂತರ ರಹಾನೆ ಜೊತೆಗೂಡಿದ ರಘವಂಶಿ ನಿಧಾನವಾಗಿ ವಿಕೆಟ್ ಉಳಿಸಿಕೊಂಡು 31 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟ ನೀಡಿದರು. ರಹಾನೆ 24 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 30 ರನ್ಗಳಿಸಿದರೆ, ರಘವಂಶಿ 31 ಎಸೆತಗಳಲ್ಲಿ 5 ಬೌಂಡರಿ ಸಹಿತ 44 ರನ್ಗಳಿಸಿದರು. ರಘುವಂಶಿ ರಸೆಲ್ ಜೊತೆಗೆ 61 ರನ್‌ಗಳ ಜೊತೆಯಾಟವನ್ನು ನೀಡಿದ್ದರು.
ರಸೆಲ್ ಅಬ್ಬರದ ಬ್ಯಾಟಿಂಗ್
ಇನ್ನು ರಸೆಲ್ 6ನೇ ಎಸೆತದಲ್ಲಿ ಖಾತೆ ತೆರೆದ ರಸೆಲ್ 8 ಎಸೆತಗಳಲ್ಲಿ ಕೇವಲ 2 ರನ್ಗಳಿಸಿದ್ದರು. ಆದರೆ ನಂತರ ಅಬ್ಬರ ವಿಧ್ವಂಸಕ ಪ್ರದರ್ಶನ ತೋರಿದರು. ಕೇವಲ 22 ಎಸೆತಗಳಲ್ಲಿ ಐಪಿಎಲ್ನ ತಮ್ಮ 12ನೇ ಅರ್ಧಶತಕ ಪೂರೈಸಿದರು. ಒಟ್ಟಾರೆ 25 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ಸಹಿತ ಅಜೇಯ 57 ರನ್ಗಳಿಸಿದರು. ರಿಂಕು ಸಿಂಗ್ ಕೇವಲ 6 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 19 ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು.
ರಾಜಸ್ಥಾನಕ್ಕೆ ಆರಂಭಿಕ ಆಘಾತ
ಇನ್ನೂ 207 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮೊದಲ 8 ಓವರ್‌ಗಳಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿದ್ದ ತಂಡಕ್ಕೆ ಆಸರೆಯಾಗಿದ್ದು, ಸ್ಪೋಟಕ ಬ್ಯಾಟರ್ ಹೇಟ್‌ಮಯರ್ ಹಾಗೂ ನಾಯಕ ರಿಯಾನ್ ಪರಾಗ್ ಈ ಇಬ್ಬರೂ 7ನೇ ವಿಕೆಟ್‌ಗೆ 92 ರನ್ ಗಳ ಜೊತೆಯಾಟ ಆಡಿದರು.
ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರಿಯಾನ್ ಪರಾಗ್
ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ರಿಯಾನ್ ಪರಾಗ್ 45 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ಸಹಿತ 95 ರನ್ ಗಳಿಸಿ ಔಟ್ ಆದರು. ಕೊನೆಯ ಓವರ್‌ನಲ್ಲಿ ರಾಜಸ್ಥಾನ ಗೆಲುವಿಗೆ 22 ರನ್ ಅಗತ್ಯವಿದ್ದಾಗ ಅಮೋಘ ಬ್ಯಾಟಿಂಗ್ ಆಡಿದ ಶುಭಂ ದುಬೆ 21 ರನ್ ಗಳಿಸಿದರು. ಆ ಮೂಲಕ ಅಂತಿಮ ಎಸೆತದಲ್ಲಿ ತಂಡದ ಗೆಲುವಿಗೆ ಗೆಲ್ಲಲು ಮೂರು ರನ್ ಅಗತ್ಯವಿದ್ದಾಗ 1 ರನ್ ಮಾತ್ರ ಗಳಿಸಲು ಶಕ್ತವಾದರು. ಆ ಮೂಲಕ ರಾಜಸ್ಥಾನ ರಾಯಲ್ಸ್ 1 ರನ್‌ಗಳ ರೋಚಕ ಸೋಲು ಅನುಭವಿಸಿತು.
ಕೆಕೆಆರ್ ಪರವಾಗಿ ಮೋಯಿನ್ ಅಲಿ 2, ಹರ್ಷಿತ್ ರಾಣಾ 2, ಹಾಗೂ ವರುಣ್ ಚಕ್ರವರ್ತಿ 2 ವಿಕೆಟ್ ಪಡೆಯುವ ಮೂಲಕ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಸದ್ಯ ಇಂದಿನ ಗೆಲವಿನೊಂದಿಗೆ ಕೆಕೆಆರ್ ಪ್ಲೇ ಆಫ್ ಆಸೆ ಇನ್ನೂ ಜೀವಂತವಾಗಿದೆ.