Last Updated:
ಕಾರ್ಡಿಫ್‌ನ ಸೊಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವಮ್ಮ ಮಳೆಯ ಕಾರಣದಿಂದ 40 ಓವರ್ಗಳ ಬದಲಾಗಿ ಕೇವಲ 12.5 ಓವರ್‌ಗಳಿಗೆ ಸೀಮಿತವಾಗಿತು. ದಕ್ಷಿಣ ಆಫ್ರಿಕಾ 7.5 ಓವರ್ ಆಡಿದರೆ, ಇಂಗ್ಲೆಂಡ್‌ಗೆ 5 ಓವರ್‌ಗಳಿಗೆ 69 ರನ್ಸ್ ಟಾರ್ಗೆಟ್ ಫಿಕ್ಸ್ ಮಾಡಲಾಗುತ್ತು.
ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಮೂರು T20I ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಅಡಚಣೆ ಉಂಟಾಯಿತು. ಕಾರ್ಡಿಫ್‌ನ ಸೊಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವಮ್ಮ ಮಳೆಯ ಕಾರಣದಿಂದ 40 ಓವರ್ಗಳ ಬದಲಾಗಿ ಕೇವಲ 12.5 ಓವರ್‌ಗಳಿಗೆ ಸೀಮಿತವಾಗಿತು. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ದಕ್ಷಿಣ ಆಫ್ರಿಕಾವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ದಕ್ಷಿಣ ಆಫ್ರಿಕಾ 7.5 ಓವರ್‌ಗಳಲ್ಲಿ 5 ವಿಕೆಟ್‌ಗೆ 97 ರನ್ ಗಳಿಸಿತು, ಮತ್ತು ಡಕ್‌ವರ್ಥ್-ಲ್ಯೂಯಿಸ್-ಸ್ಟರ್ನ್ (DLS) ವಿಧಾನದಲ್ಲಿ ಇಂಗ್ಲೆಂಡ್‌ಗೆ 5 ಓವರ್‌ಗಳಲ್ಲಿ 69 ರನ್‌ಗಳ ಗುರಿ ನೀಡಲಾಗಿತ್ತು. ಆದರೆ, ಇಂಗ್ಲೆಂಡ್ ಆ 5 ಓವರ್‌ಗಳಲ್ಲಿ 54/5ಕ್ಕೆ ಸೀಮಿತವಾಗಿ ಸೋಲು ಕಂಡಿತು. ಮತ್ತು ದಕ್ಷಿಣ ಆಫ್ರಿಕಾ 14 ರನ್‌ಗಳಿಂದ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದರು.
ಪಂದ್ಯವು ಮಳೆಯಿಂದಾಗಿ 9 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ, 7.5 ಓವರ್‌ಗಳಲ್ಲಿ 5 ವಿಕೆಟ್‌ಗೆ 97 ರನ್ ಗಳಿಸಿದ್ದ ಮಳೆ ಬಂದಿದ್ದರಿಂದ ಅಲ್ಲಿಗೆ ಮೊದಲ ಇನ್ನಿಂಗ್ಸ್ ಅಂತ್ಯಗೊಳಿಸಲಾಯಿತು. ನಾಯಕ ಐಡೆನ್ ಮಾರ್ಕ್ರಾಮ್ 14 ಎಸೆತಗಳಲ್ಲಿ 28 ರನ್ (2 ಬೌಂಡರಿ, 2 ಸಿಕ್ಸರ್) ಬಾರಿಸಿ ತಂಡಕ್ಕೆ ಆರಂಭ ನೀಡಿದರು, ಡೊನೋವನ್ ಫೆರೈರಾ 11 ಎಸೆತಗಳಲ್ಲಿ ಅಜೇಯ 25 ರನ್ (3 ಸಿಕ್ಸರ್) ಬಾರಿಸಿದರೆ ಗೋಲ್ಡನ್ ಫಾರ್ಮ್ನಲ್ಲರುವ ಡೆವಾಲ್ಡ್ ಬ್ರೆವಿಸ್ 10 ಎಸೆತಗಳಲ್ಲಿ 23 ರನ್ (3 ಸಿಕ್ಸರ್) ಗಳಿಸಿ ತಂಡಕ್ಕೆ ನೆರವಾದರು.
ಇಂಗ್ಲೆಂಡ್‌ನ ಬೌಲರ್‌ಗಳ ಪೈಕಿ ಲೂಕ್ ವುಡ್ 22ಕ್ಕೆ2 ವಿಕೆಟ್ ಪಡೆದರೆ, ಜೇಮಿ ಓವರ್ಟನ್, ಆದಿಲ್ ರಶೀದ್, ಸ್ಯಾಮ್ ಕರ್ರನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು. ತಂಡದಲ್ಲಿ ಜೋಫ್ರಾ ಆರ್ಚರ್ ಇದ್ದರೂ ಅವರನ್ನು ತೇವ ಪರಿಸ್ಥಿತಿಯಲ್ಲಿ ಆಡಿಸದೆ ಇಂಗ್ಲೆಂಡ್ ತಂಡ ರಿಸ್ಕ್ ತೆಗೆದುಕೊಳ್ಳಲಿಲ್ಲ, ಒಂದು ವೇಳೆ ಅವರು ಆಡಿದ್ದರೆ ದಕ್ಷಿಣ ಆಫ್ರಿಕಾ ಬ್ಯಾಟರ್ಗಳನ್ನ ದೊಡ್ಡ ಸ್ಕೋರ್ ಗಳಿಸಲು ಅವಕಾಶ ನೀಡುತ್ತಿರಲಿಲ್ಲ.
DLS ವಿಧಾನದಲ್ಲಿ ಇಂಗ್ಲೆಂಡ್‌ಗೆ 5 ಓವರ್‌ಗಳಲ್ಲಿ 69 ರನ್‌ಗಳ ಗುರಿ ನೀಡಲಾಯಿತು, ಇದಕ್ಕೆ ಓವರ್‌ಗೆ ಸುಮಾರು 14 ರನ್ ಗಳಿಸಬೇಕಿತ್ತು. ಆದರೆ, ಒತ್ತಡದಲ್ಲಿ ಇಂಗ್ಲೆಂಡ್ ಕೆಟ್ಟ ಆರಂಭ ಪಡೆಯಿತು. ಮೊದಲ ಬಾಲ್‌ನಲ್ಲಿ ಫಿಲ್ ಸಾಲ್ಟ್ ಕಾಗಿಸೋ ರಬಾಡಾ ಬೌಲಿಂಗ್‌ನಲ್ಲಿ ಕ್ಯಾಚ್ ಔಟ್ ಆದರು. ನಾಯಕ ಹ್ಯಾರಿ ಬ್ರೂಕ್ ಡಕ್‌ಗೆ ಔಟ್ ಆದರು. ಹಿಂದಿನ ODIಯಲ್ಲಿ ತಮ್ಮ ಮೊದಲ ಶತಕ ಗಳಿಸಿದ್ದ ಜೇಕಬ್ ಬೆಥೆಲ್, ಕೇವಲ 7 ರನ್ ಮಾಡಿ ಮಾರ್ಕೋ ಜ್ಯಾನ್ಸನ್‌ಗೆ ಕ್ಯಾಚ್ ನೀಡಿದರು.
ಜೋಸ್ ಬಟ್ಲರ್ 25 ರನ್ ಗಳಿಸಿ ತಂಡದ ಏಕೈಕ 20ಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು. 5 ಓವರ್‌ಗಳಲ್ಲಿ ಇಂಗ್ಲೆಂಡ್ ಆಟ 54/5ರಲ್ಲಿ ಸ್ಥಗಿತಗೊಂಡಿತು. ದಕ್ಷಿಣ ಆಫ್ರಿಕಾ ಪರ ಮಾರ್ಕೋ ಜ್ಯಾನ್ಸನ್ (2/18) ಮತ್ತು ಕಾರ್ಬಿನ್ ಬಾಷ್ (2/20) ದಕ್ಷಿಣ ಆಫ್ರಿಕಾದ ಅತ್ಯುತ್ತಮ ಬೌಲರ್‌ಗಳಾಗಿದ್ದರು, ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕವನ್ನು ಧ್ವಂಸಗೊಳಿಸಿದರು.
September 11, 2025 4:44 PM IST