SA vs ENG: ದಕ್ಷಿಣ ಅಫ್ರಿಕಾ 72 ರನ್​ಗಳಿಗೆ ಆಲೌಟ್! ಏಕದಿನ ಚರಿತ್ರೆಯಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ಇಂಗ್ಲೆಂಡ್ | ಕ್ರೀಡೆ

SA vs ENG: ದಕ್ಷಿಣ ಅಫ್ರಿಕಾ 72 ರನ್​ಗಳಿಗೆ ಆಲೌಟ್! ಏಕದಿನ ಚರಿತ್ರೆಯಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ಇಂಗ್ಲೆಂಡ್ | ಕ್ರೀಡೆ
ಇಂಗ್ಲೆಂಡ್ ಬೃಹತ್ ಮೊತ್ತ

ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಬೆನ್ ಡಕೆಟ್ 31 ಜೇಮಿ ಸ್ಮಿತ್ 62 (48 ಎಸೆತಗಳಲ್ಲಿ9 ಬೌಂಡರಿ, 1 ಸಿಕ್ಸರ್ ಸಹಿತ 62), ಜೇಕಬ್ ಬೆಥೆಲ್ 110 (82 ಎಸೆತಗಳಲ್ಲಿ 13, ಬೌಂಡರಿ, 3 ಸಿಕ್ಸರ್, 110 ರನ್‌ಗಳು ), ಜೋ ರೂಟ್ ಶತಕ(ರೂಟ್ 96 ಎಸೆತಗಳಲ್ಲಿ 6 ಬೌಂಡರಿ ಸಹಿತ 100 ರನ್​) ಹಾಗೂ ಜೋಸ್ ಬಟ್ಲರ್​ ಸಿಡಿಸಿದ ಸ್ಫೋಟಕ ಅರ್ಧಶತಕದ (32 ಎಸೆತಗಳಲ್ಲಿ 62, 8 ಬೌಂಡರಿ, 1 ಸಿಕ್ಸರ್) ನೆರವಿನಿಂದ ಅತಿಥೇಯ ತಂಡ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 414 ರನ್ಗಳಿಸಿತ್ತು.

ದಕ್ಷಿಣ ಆಫ್ರಿಕಾ ಪರ, ಕೇಶವ್ ಮಹಾರಾಜ್ ಮತ್ತು ಕಾರ್ಬಿನ್ ಬಾಷ್ ತಲಾ 2 ವಿಕೆಟ್‌ ಪಡೆದರು.

ಪವರ್​ ಪ್ಲೇನಲ್ಲಿ 6 ವಿಕೆಟ್

415 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. 10 ಓವರ್​ಗಳ ಪವರ್​ಪ್ಲೇನಲ್ಲೇ 24 ರನ್ ಸೇರಿಸಿ ಮೊದಲ 6 ಬ್ಯಾಟರ್​ಗಳು ವಿಕೆಟ್ ಒಪ್ಪಿಸಿದರು. ಐಡೆನ್ ಮಾರ್ಕ್ರಮ್ (0), ವಿಯಾನ್ ಮಲ್ಡರ್(1), ರಯಾನ್ ರಿಕಲ್ಟನ್(0), ಮ್ಯಾಥ್ಯೂ ಬ್ರೀಟ್ಸ್​ಕಿ(4), , ಡೆವಾಲ್ಡ್ ಬ್ರೆವಿಸ್(6) ಒಂದಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, ಟ್ರಿಸ್ಟಾನ್ ಸ್ಟಬ್ಸ್(10) ಮಾತ್ರ 10ರನ್ ತಲುಪಿದರು. ಈ 6 ವಿಕೆಟ್​ಗಳಲ್ಲಿ ಜೋಫ್ರಾ ಆರ್ಚರ್ 4 ವಿಕೆಟ್ ಪಡೆದರೆ, ಬ್ರಿಡನ್ ಕಾರ್ಸ್​2 ವಿಕೆಟ್ ಪಡೆದರು.

ಎರಡಂಕಿ ದಾಟಿದ್ದು ಮೂವರು ಮಾತ್ರ

50 ರನ್​ಗಳ ಗಡಿ ದಾಟೋದು ಡೌಟ್ ಎನ್ನುವ ಪರಿಸ್ಥಿತಿಯಲ್ಲಿದ್ದ ತಂಡಕ್ಕೆ ಕೇಶವ್ ಮಹಾರಾಜ ಹಾಗೂ ಕಾರ್ಬಿನ್ ಬಾಷ್​ ಒಂದಷ್ಟು ಸಮಯ ಕ್ರೀಸ್​​ನಲ್ಲಿದ್ದು ಎರಡಂಕಿ ಮೊತ್ತದ ರನ್​ಗಳಿಸಿ ತಂಡದ ಮೊತ್ತವನ್ನ 72ರ ತನಕ ತಂದರು. ಮಹಾರಾಜ 17 ರನ್​ಗಳಿಸಿದರೆ, ಬಾಷ್​ 20 ರನ್​ಗಳಿಸಿ ಔಟ್ ಕೊನೆಯವರಾಗಿ ಆದರು. ಕೋಡಿ ಎಥಾನ್ ಯೂಸುಫ್ 5, ಬರ್ಗರ್ 2 ರನ್​ಗಳಿಸಿದರು. ಬವುಮಾ ಗಾಯದ ಕಾರಣ ಬ್ಯಾಟಿಂಗ್ ಮಾಡಲಿಲ್ಲ.

ಇಂಗ್ಲೆಂಡ್ ಪರ ಆರ್ಚರ್ 4, ಕಾರ್ಸೆ 2,ಆದಿಲ್ ರಶೀದ್ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ಏಕದಿನ ಇತಿಹಾಸದಲ್ಲೇ ಅತಿ ದೊಡ್ಡ ಗೆಲುವು

ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನ 72ಕ್ಕೆ ಆಲೌಟ್ ಮಾಡುವ ಮೂಲಕ 342 ರನ್​ಗಳ ಬೃಹತ್ ಗೆಲುವು ಸಾಧಿಸಿತು. ಇದು ಏಕದಿನ ಹಾಗೂ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಗೆಲುವಾಗಿದೆ. ಇದಕ್ಕೂ ಮುನ್ನ ಭಾರತ ತಂಡ ಶ್ರೀಲಂಕಾ ವಿರುದ್ಧ 317 ರನ್​ಗಳ ಗೆಲುವು ಸಾಧಿಸಿದ್ದು ವಿಶ್ವದಾಖಲೆಯಾಗಿತ್ತು.

ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, 342ರನ್​ಗಳ ಗೆಲುವು

ಭಾರತ vs ಶ್ರೀಲಂಕಾ, 317 ರನ್​ಗಳ ಗೆಲುವು

ಆಸ್ಟ್ರೇಲಿಯಾ vs ನೆದರ್ಲೆಂಡ್ಸ್, 309ರನ್​ಗಳ ಗೆಲುವು

ಜಿಂಬಾಬ್ವೆ vs ಯುಎಸ್​ಎ, 304 ರನ್​ಗಳ ಗೆಲುವು

ಭಾರತ vs ಶ್ರೀಲಂಕಾ, 302 ರನ್​ಗಳ ಗೆಲುವು