SA vs ENG: ಸಾಲ್ಟ್​​ ಶತಕ, ಬಟ್ಲರ್-ಬ್ರೂಕ್ ಸಿಡಿಲಬ್ಬರ! ದಕ್ಷಿಣ ಆಫ್ರಿಕಾ ವಿರುದ್ಧ 304 ರನ್ ಸಿಡಿಸಿ ಟಿ20ಯ ಅಲ್​ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಇಂಗ್ಲೆಂಡ್| T20I History Made: England’s 304/2 Surpasses India’s world Record | ಕ್ರೀಡೆ

SA vs ENG: ಸಾಲ್ಟ್​​ ಶತಕ, ಬಟ್ಲರ್-ಬ್ರೂಕ್ ಸಿಡಿಲಬ್ಬರ! ದಕ್ಷಿಣ ಆಫ್ರಿಕಾ ವಿರುದ್ಧ 304 ರನ್ ಸಿಡಿಸಿ ಟಿ20ಯ ಅಲ್​ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಇಂಗ್ಲೆಂಡ್| T20I History Made: England’s 304/2 Surpasses India’s world Record | ಕ್ರೀಡೆ

Last Updated:

ಬಟ್ಲರ್ ಅರ್ಧಶತಕ ಹಾಗೂ ಸಾಲ್ಟ್ ಶತಕ ಬಾರಿಸುವ ಮೂಲಕ ಇಂಗ್ಲೆಂಡ್ 20 ಓವರ್‌ಗಳಲ್ಲಿ 304 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಸಾಲ್ಟ್ 141 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ, ಬಟ್ಲರ್ 83 ಮತ್ತು ಹ್ಯಾರಿ ಬ್ರೂಕ್ 41 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ 158ಕ್ಕೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು.

ಫಿಲ್ ಸಾಲ್ಟ್ಫಿಲ್ ಸಾಲ್ಟ್
ಫಿಲ್ ಸಾಲ್ಟ್

ಇಂಗ್ಲೆಂಡ್ (England) ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ (Phil Salt and Jos Buttler)​ ಅಬ್ಬರದ ಆಟಕ್ಕೆ ಟಿ20 ಕ್ರಿಕೆಟ್​​ನ (T20I Cricket) ದಾಖಲೆಗಳೆಲ್ಲಾ ಧ್ವಂಸವಾಗಿದೆ. ಶುಕ್ರವಾರ ನಡೆದ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಧೂಳೀಪಟ ಮಾಡಿದ್ದಾರೆ. ಇಂಗ್ಲೆಂಡ್ ಬ್ಯಾಟರ್​ಗಳ ಅಬ್ಬರಕ್ಕೆ ಟಿ20 ಕ್ರಿಕೆಟ್​​ನಲ್ಲಿ ಐಸಿಸಿ ಪೂರ್ಣ ಸದಸ್ಯತ್ವದ ತಂಡದ ವಿರುದ್ಧ ಮೊದಲ ಬಾರಿಗೆ 300 ದಾಖಲಾಗಿದೆ. ಬಟ್ಲರ್ ಅರ್ಧಶತಕ ಹಾಗೂ ಸಾಲ್ಟ್ ಶತಕ ಬಾರಿಸುವ ಮೂಲಕ ಇಂಗ್ಲೆಂಡ್ 20 ಓವರ್‌ಗಳಲ್ಲಿ 304 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಸಾಲ್ಟ್ 141 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ, ಬಟ್ಲರ್ 83 ಮತ್ತು ಹ್ಯಾರಿ ಬ್ರೂಕ್ 41 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ 158ಕ್ಕೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು.

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿತು. ದಕ್ಷಿಣ ಆಫ್ರಿಕಾ ಬೌಲರ್​ಗಳ ಮೇಲೆ ಮುಗಿಬಿದ್ದ ಬಟ್ಲರ್​ ಕೇವಲ 18 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಬಟ್ಲರ್-ಸಾಲ್ಟ್​ ಸ್ಫೋಟಕ ಬ್ಯಾಟಿಂಗ್​​ನಿಂದ ಪವರ್​ಪ್ಲೇನಲ್ಲೇ ಇಂಗ್ಲೆಂಡ್ 100ರನ್​ಗಳಿಸಿತು. 8ನೇ ಓವರ್​​ನಲ್ಲಿ ಬಟ್ಲರ್​ ಔಟಾದರು. ಆದರೆ ಅಷ್ಟರಲ್ಲಿ 30 ಎಸೆತಗಳಲ್ಲಿ 8ಬೌಂಡರಿ, 7 ಸಿಕ್ಸರ್​ಗಳ ನೆರವಿನಿಂದ 83ರನ್​ ಸೂರೆಗೈದಿದ್ದರು. ಬಟ್ಲರ್ ವಿಕೆಟ್ ನಂತರ ಮತ್ತೊಬ್ಬ ಓಪನರ್ ಫಿಲ್ ಸಾಲ್ಟ್ ವಿಧ್ವಂಸ ಸೃಷ್ಟಿಸಿದರು. 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸಾಲ್ಟ್ ಕ್ರೀಸ್‌ನಲ್ಲಿರುವವರೆಗೂ ಅವರು ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಯಿತು.

10 ಓವರ್​ಗಳಲ್ಲೇ ವಿಶ್ವದಾಖಲೆಯ ಮೊತ್ತ

ಮೊದಲ 10 ಓವರ್​​ನಲ್ಲಿ ಇಂಗ್ಲೆಂಡ್ ತಂಡ 166 ರನ್​ಗಳಿಸಿತು. ಇದು ಐಸಿಸಿ ಪೂರ್ಣ ಸದಸ್ಯ ತಂಡದ ವಿರುದ್ಧ ಬಂದ ಅತ್ಯಧಿತ ಮೊತ್ತವಾಯಿತು. ನಂತರ ಕೇವಲ 12.1 ಓವರ್​ಗಳಲ್ಲಿ 200ರ ಗಡಿ ದಾಟಿತು. ಸಾಲ್ಟ್​​ಗೆ ಜೊತೆಗೂಡಿದ ಯುವ ಆಟಗಾರ ಜೇಕಬ್ ಬೆಥೆಲ್ ಕೂಡ 14 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ಗಳ ನೆರವಿನಿಂದ 26 ರನ್​ಗಳಿಸಿದರು. ಇವರ ನಂತರ ಬಂದ ನಾಯಕ ಹ್ಯಾರಿ ಬ್ರೂಕ್ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 37 ಎಸೆತಗಳಲ್ಲಿ 83 ರನ್​ ಕಲೆಯಾಕಿದರು. 39 ಎಸೆತಗಳಲ್ಲಿ ಶತಕ ಪೂರೈಸಿದ ಸಾಲ್ಟ್, ಒಟ್ಟಾರೆ 60 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್​ ಸಹಿತ 141 ರನ್​ಗಳಿಸಿ ಅಜೇಯರಾಗಿ ಉಳಿದರು. ಬ್ರೂಕ್ 21 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 41 ರನ್​ಗಳಿಸಿ ಅಜೇಯರಾಗಿ ಉಳಿದರು.

ಟಿ20ಯಲ್ಲಿ ಗರಿಷ್ಠ ಮೊತ್ತ

ಇಂಗ್ಲೆಂಡ್ ತಂಡದ ಬಿರುಗಾಳಿ ಬ್ಯಾಟಿಂಗ್​​ಗೆ ಟಿ20 ಕ್ರಿಕೆಟ್​​ನ ಹಲವು ದಾಖಲೆ ಉಡೀಸ್ ಆದವು. 304 ರನ್​ ಸಿಡಿಸಿದ ಇಂಗ್ಲೆಂಡ್ ಟೆಸ್ಟ್ ಆಡುವ ರಾಷ್ಟ್ರದ ವಿರುದ್ಧ ಟಿ20 ಸ್ವರೂಪದಲ್ಲಿ 300ರ ಗಡಿ ದಾಟಿದ ಮೊದಲ ತಂಡ ಎಂಬ ವಿಶ್ವದಾಖಲೆ ನಿರ್ಮಾಣವಾಯಿತು. ಈ ಹಿಂದೆ ಅಸೋಸಿಯೇಟ್ ತಂಡಗಳ ವಿರುದ್ಧ 2 ಬಾರಿ 300ರ ಸ್ಕೋರ್ ಬಂದಿವೆ. ನೇಪಾಳ 2023ರಲ್ಲಿ ಮಂಗೋಲಿಯಾ ವಿರುದ್ಧ 314 ಹಾಗೂ ಜಿಂಬಾಬ್ವೆ ಗ್ಯಾಂಬಿಯಾ ವಿರುದ್ಧ 344 ರನ್​ಗಳಿಸಿತ್ತು. ಆದರೆ ಇಂಗ್ಲೆಂಡ್ ಟೆಸ್ಟ್ ಆಡುವ ತಂಡದ ವಿರುದ್ಧ ಈ ಸಾಧನೆ ಮಾಡಿ ಎಲ್ಲರ ಹುಬ್ಬೇರಸಿದೆ.

305 ರನ್​ಗಳ ಬೃಹತ್ ಗುರಿಯೊಂದಿಗೆ ಮೈದಾನಕ್ಕೆ ಇಳಿದ ದಕ್ಷಿಣ ಆಫ್ರಿಕಾ ತಂಡವು ಸ್ಪರ್ಧೆಯನ್ನು ನೀಡಲು ಸಹ ಸಾಧ್ಯವಾಗಲಿಲ್ಲ. ನಾಯಕ ಐಡೆನ್ ಮಾರ್ಕ್ರಾಮ್ ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ಬೌಲರ್​ಗಳನ್ನ ಸಮರ್ಥವಾಗಿ ಎದುರಿಸಲಿಲ್ಲ. ಮಾರ್ಕ್ರಾಮ್ 20 ಎಸೆತಗಳಲ್ಲಿ 41 ರನ್ ಗಳಿಸಿ ಗರಿಷ್ಠ ಸ್ಕೋರರ್​ ಆದರು. ದಕ್ಷಿಣ ಅಫ್ರಿಕಾ 16.1 ಓವರ್‌ಗಳಲ್ಲಿ 158 ರನ್‌ಗಳಿಗೆ ಆಲೌಟ್ ಆಗಿ ಇಂಗ್ಲೆಂಡ್​ಗೆ 146 ರನ್‌ಗಳಿಂದ ಶರಣಾಯಿತು.