Last Updated:
ದಕ್ಷಿಣ ಆಫ್ರಿಕಾ ನಾಯಕ ವಿಯಾನ್ ಮುಲ್ಡರ್ (Wiaan Mulder) ಅಜೇಯ 367 ರನ್ ಗಳಿಸಿ ಬೃಹತ್ ಜಯ ಸಾಧಿಸಲು ನೆರವಾದರು. ಮುಲ್ಡರ್ ಅವರ ಇನ್ನಿಂಗ್ಸ್ ಬಲದಿಂದ, ದಕ್ಷಿಣ ಆಫ್ರಿಕಾ ಪಂದ್ಯವನ್ನು ಇನ್ನಿಂಗ್ಸ್ ಮತ್ತು 236 ರನ್ಗಳಿಂದ ಗೆದ್ದಿದೆ. ಇದರೊಂದಿಗೆ, ದಕ್ಷಿಣ ಆಫ್ರಿಕಾ ಜಿಂಬಾಬ್ವೆ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧಿಸಿದೆ.
ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಜಿಂಬಾಬ್ವೆ Zimbabwe vs South Africa) ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾ ನಾಯಕ ವಿಯಾನ್ ಮುಲ್ಡರ್ (Wiaan Mulder) ಅಜೇಯ 367 ರನ್ ಗಳಿಸಿ ಬೃಹತ್ ಜಯ ಸಾಧಿಸಲು ನೆರವಾದರು. ಮುಲ್ಡರ್ ಅವರ ಇನ್ನಿಂಗ್ಸ್ ಬಲದಿಂದ, ದಕ್ಷಿಣ ಆಫ್ರಿಕಾ ಪಂದ್ಯವನ್ನು ಇನ್ನಿಂಗ್ಸ್ ಮತ್ತು 236 ರನ್ಗಳಿಂದ ಗೆದ್ದಿದೆ. ಇದರೊಂದಿಗೆ, ದಕ್ಷಿಣ ಆಫ್ರಿಕಾ ಜಿಂಬಾಬ್ವೆ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧಿಸಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ದಾಖಲೆ ಸೃಷ್ಟಿಸಿದೆ.
ಜಿಂಬಾಬ್ವೆ ನಾಯಕ ಕ್ರೇಗ್ ಎರ್ವಿನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು, ಆದರೆ ಅವರ ನಿರ್ಧಾರ ಅವರ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಆರಂಭದಲ್ಲಿ 24 ರನ್ಗಳಿಗೆ 2 ವಿಕೆಟ್ ಪಡೆದರು ನಂತರ ವಿಯಾನ್ ಮುಲ್ಡರ್ ಮತ್ತು ಡೇವಿಡ್ ಬೆಡಿಂಗ್ಹ್ಯಾಮ್ ಮೂರನೇ ವಿಕೆಟ್ಗೆ 204 ರನ್ಗಳ ಜೊತೆಯಾಟ ನೀಡಿದರು. ನಂತರ ಮುಲ್ಡರ್ ಲುಹಾನ್-ಡ್ರೆ ಪ್ರಿಟೋರಿಯಸ್ ಅವರೊಂದಿಗೆ 200ಕ್ಕೂ ಹೆಚ್ಚು ಜೊತೆಯಾಟ ನೀಡಿದರು. ಇದರ ನಂತರ, ದಕ್ಷಿಣ ಆಫ್ರಿಕಾ ತಮ್ಮ ಇನ್ನಿಂಗ್ಸ್ ಅನ್ನು 626/5 ಕ್ಕೆ ಡಿಕ್ಲೇರ್ ಮಾಡಿಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಜಿಂಬಾಬ್ವೆ ಕೇವಲ 170 ರನ್ಗಳಿಗೆ ಆಲೌಟ್ ಆಗಿತ್ತು. ಇದಾದ ನಂತರ ದಕ್ಷಿಣ ಆಫ್ರಿಕಾ ಫಾಲೋ ಆನ್ ಏರಿತು. ಎರಡನೇ ಇನ್ನಿಂಗ್ಸ್ನಲ್ಲಿ ಜಿಂಬಾಬ್ವೆ 220 ರನ್ಗಳಿಗೆ ಆಲೌಟ್ ಆಯಿತು, ಇದರಿಂದಾಗಿ ತಂಡ ಮುಜುಗರದ ಸೋಲನ್ನು ಎದುರಿಸಬೇಕಾಯಿತು.
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದೆ. ಇದು ಟೆಸ್ಟ್ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾದ ಸತತ 10 ನೇ ಗೆಲುವು. ಮೊದಲ ಬಾರಿಗೆ, ದಕ್ಷಿಣ ಆಫ್ರಿಕಾ ಸತತ 10 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಅಲ್ಲದೆ, ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತ 10 ಪಂದ್ಯಗಳನ್ನು ಗೆದ್ದ ಮೂರನೇ ತಂಡವಾಗಿದೆ.
ಇದಕ್ಕೂ ಮೊದಲು, ಈ ಸಾಧನೆಯನ್ನ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಮಾಡಿವೆ. ಆಸ್ಟ್ರೇಲಿಯಾ ಸತತ ಎರಡು ಬಾರಿ 16 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ ಸತತ 11 ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ ತಂಡವು 1889 ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿದೆ, ಆದರೆ 136 ವರ್ಷಗಳ ನಂತರ ಮೊದಲ ಬಾರಿಗೆ ಸತತ 10 ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿದೆ.
July 08, 2025 9:07 PM IST