Last Updated:
ಶಬರಿಮಲೆ ಮಂಡಲ ಪೂಜೆಯು ಅಯ್ಯಪ್ಪ ಸ್ವಾಮಿಯ ವಾರ್ಷಿಕ ಯಾತ್ರೆಯ ಒಂದು ಪ್ರಮುಖ ಭಾಗವಾಗಿದೆ.
ವಿಶ್ವದ ಅತೀ ಹೆಚ್ಚು ಭಕ್ತರನ್ನು ಸೆಳೆಯುವ ಕ್ಷೇತ್ರವಾದ ಕೇರಳದ (Kerala) ಶಬರಿಮಲೆ (Sabarimala) ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲೀಗ (Temple) ಭಕ್ತರ ದಂಡೇ ಕಾಣಿಸಿಕೊಳ್ಳತೊಡಗಿದೆ. ಈ ಬಾರಿ ಹಿಂದೆಂದೂ ಕಾಣದ ರೀತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಲಕ್ಷಕ್ಕೂ ಮಿಕ್ಕಿದ ಜನ ಸ್ವಾಮಿಯ ಸನ್ನಿಧಾನಕ್ಕೆ ಸೇರುತ್ತಿದ್ದಾರೆ. ಇಂದು ಶಬರಿಮಲೆಯಲ್ಲಿ ಮಂಡಲ ಪೂಜೆ (Mandala Pooje) ನಡೆಯಲಿದ್ದು, ಈ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಮುಂದಿನ ಜನವರಿ 14 ರ ಮಕರ ಸಂಕ್ರಮಣದ ವರೆಗೂ ಈ ದಟ್ಟಣೆ ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿವೆ.
ಶಬರಿಮಲೆ ಮಂಡಲ ಪೂಜೆಯು ಅಯ್ಯಪ್ಪ ಸ್ವಾಮಿಯ ವಾರ್ಷಿಕ ಯಾತ್ರೆಯ ಒಂದು ಪ್ರಮುಖ ಭಾಗವಾಗಿದೆ. ಇದು ಸಾಮಾನ್ಯವಾಗಿ ನವೆಂಬರ್ನಿಂದ ಡಿಸೆಂಬರ್ ವರೆಗೆ ನಡೆಯುತ್ತದೆ, ಇದರಲ್ಲಿ ಭಕ್ತರು 41 ದಿನಗಳ ವ್ರತ, ಮಾಲೆ ಧರಿಸುವುದು, ಸರಳ ಜೀವನ ನಡೆಸಲು ಪ್ರಯತ್ನಿಸುವುದು ಮತ್ತು ಮಕರ ಸಂಕ್ರಾತಿಯ ಸಮಯದಲ್ಲಿ ಪೂಜೆಯನ್ನು ಆಚರಿಸುವುದನ್ನು ಒಳಗೊಂಡಿದೆ. ಕರಾವಳಿ ಭಾಗದಲ್ಲಿ ಹೆಚ್ಚಿನ ಅಯ್ಯಪ್ಪ ಮಾಲಾಧಾರಿಗಳು ಮಕರ ಸಂಕ್ರಾತಿಯ ಪೂಜೆಗೆ ತೆರಳುವ ವಾಡಿಕೆಯಿದ್ದು, ಈ ಕಾರಣಕ್ಕೆ ಕರಾವಳಿ ಭಾಗದಿಂದ ಮಕರ ಸಂಕ್ರಮಣದ ದಿನ ಹೆಚ್ಚಿನ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಳ್ಳುತ್ತಾರೆ.
ಈ ಬಾರಿ ಮಂಡಲ ಪೂಜೆಗೆ ಆಂದ್ರಪ್ರದೇಶ ಮತ್ತು ತಮಿಳುನಾಡು ರಾಜ್ಯದಿಂದ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದು, ಪಂಪಾದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ.
Dakshina Kannada,Karnataka
November 21, 2025 1:37 PM IST