Sabarimala Deepotsava: ಅಯ್ಯಪ್ಪ ದೀಪೋತ್ಸವದಲ್ಲಿ ಪಾಲಸ ಮರದ ಮಹತ್ವ! | Sabarimala ayyappa Deepotsava at Dakshina Kannada

Sabarimala Deepotsava: ಅಯ್ಯಪ್ಪ ದೀಪೋತ್ಸವದಲ್ಲಿ ಪಾಲಸ ಮರದ ಮಹತ್ವ! | Sabarimala ayyappa Deepotsava at Dakshina Kannada

Last Updated:

ಶಬರಿಮಲೆಯಲ್ಲಿ ಯಾವ ರೀತಿಯಲ್ಲಿ ಅಯ್ಯಪ್ಪ ಸ್ವಾಮಿಯ ಗುಡಿ ಮತ್ತು ಇತರ ಗುಡಿಗಳಿವೆಯೋ, ಅದೇ ರೀತಿಯ ಕುಟೀರಗಳನ್ನು ದೀಪೋತ್ಸವಕ್ಕಾಗಿಯೇ ಮಾಲಾಧಾರಿಗಳು ನಿರ್ಮಿಸುತ್ತಾರೆ. ಈ ಗುಡಿಗಳ ಜೊತೆಗೆ ಭದ್ರಕಾಳಿ ದೇವಿಯ ಗುಡಿಯನ್ನೂ ನಿರ್ಮಿಸಲಾಗುತ್ತದೆ. ಈ ದೇವಿಯ ಮಂಟಪಕ್ಕೆ ಪಾಲಸ ಮರ ತರುವ ಒಂದು ಆಚರಣೆಯೂ ಅಯ್ಯಪ್ಪ ದೀಪೋತ್ಸವದಲ್ಲಿ ನಡೆಯುತ್ತದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ಮಕರ ಸಂಕ್ರಾತಿ ಹಬ್ಬ(Makara Sankranti Festival) ಸಮೀಪಿಸುತ್ತಿದ್ದು, ಅಯ್ಯಪ್ಪ ಸ್ವಾಮಿಯ ಪುಣ್ಯಕ್ಷೇತ್ರವಾದ ಶಬರಿಮಲೆಗೆ(Sabarimala) ಹೊರಡಲು ಮಾಲೆ ಹಾಕಿದ ಸ್ವಾಮಿಗಳ ದಂಡು ಸಿದ್ಧವಾಗುತ್ತಿದೆ. ಶಬರಿಮಲೆಗೆ ತಲುಪುವ ಮೊದಲು ಅಯ್ಯಪ್ಪಸ್ವಾಮಿ‌ ಮಾಲಾಧಾರಿಗಳ ತಂಡಗಳು ತಮ್ಮ-ತಮ್ಮ ಊರುಗಳಲ್ಲಿ ಅಯ್ಯಪ್ಪ ಸ್ವಾಮಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಭಕ್ತಿಯನ್ನು ಮೆರೆಯುತ್ತಾರೆ. ಇಂಥಹುದೇ ಒಂದು ಕಾರ್ಯಕ್ರಮ ಅಯ್ಯಪ್ಪ ದೀಪೋತ್ಸವವಾಗಿದೆ(Ayyappa Deepotsava).

ಪ್ರಮುಖವಾಗಿ ಅಯ್ಯಪ್ಪ ಸ್ವಾಮಿಯ ಜೀವನ ಚರಿತ್ರೆ, ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲೆಂದೇ ಪಕ್ಕದ ಕೇರಳ ಭಾಗದಿಂದ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಾರೆ. ಶಬರಿಮಲೆಯಲ್ಲಿ ಯಾವ ರೀತಿಯಲ್ಲಿ ಅಯ್ಯಪ್ಪ ಸ್ವಾಮಿಯ ಗುಡಿ ಮತ್ತು ಇತರ ಗುಡಿಗಳಿವೆಯೋ, ಅದೇ ರೀತಿಯ ಕುಟೀರಗಳನ್ನು ದೀಪೋತ್ಸವಕ್ಕಾಗಿಯೇ ಮಾಲಾಧಾರಿಗಳು ನಿರ್ಮಿಸುತ್ತಾರೆ. ಈ ಗುಡಿಗಳ ಜೊತೆಗೆ ಭದ್ರಕಾಳಿ ದೇವಿಯ ಗುಡಿಯನ್ನೂ ನಿರ್ಮಿಸಲಾಗುತ್ತದೆ. ಈ ದೇವಿಯ ಮಂಟಪಕ್ಕೆ ಪಾಲಸ ಮರ ತರುವ ಒಂದು ಆಚರಣೆಯೂ ಅಯ್ಯಪ್ಪ ದೀಪೋತ್ಸವದಲ್ಲಿ ನಡೆಯುತ್ತದೆ.

ಇದನ್ನೂ ಓದಿ: Dakshina Kannada: ಜಿಲ್ಲಾಡಳಿತದಿಂದ ಐಷಾರಾಮಿ ಕಾರು, ಬೈಕ್‌ಗಳ ಪ್ರದರ್ಶನ- ಕುಡ್ಲದಲ್ಲಿದೆ ದೇಶದಲ್ಲಿರುವ ಏಕೈಕ ಐಷಾರಾಮಿ ಕಾರು

ಅಯ್ಯಪ್ಪ ದೀಪೋತ್ಸವ ನಡೆಯುವ ಸ್ಥಳಕ್ಕೆ ಸಮೀಪವಿರುವ ದೇವಿ ಕ್ಷೇತ್ರ ಅಥವಾ ಕೃಷ್ಣ ಮಂದಿರದಿಂದ ಹೆಚ್ಚಾಗಿ ಈ ಪಾಲಸ ಮರದ ಮೆರವಣಿಗೆಯನ್ನು ನಡೆಸಲಾಗುತ್ತದೆ‌. ಪಾಲಸ ಮರ ಔಷಧೀಯ ಗುಣಗಳುಳ್ಳ ಮರವಾಗಿದ್ದು, ಈ ಮರದಲ್ಲಿ ದೇವಿಯು ನೆಲೆಸಿದ್ದಾಳೆ ಎನ್ನುವ ನಂಬಿಕೆಯೂ ಇದೆ. ಇದೇ ಕಾರಣಕ್ಕೆ ದೇವಿಯ ಮಂಟಪಕ್ಕೆ ಈ ಮರದ ಕೊಂಬೆಯನ್ನೇ ಇಡಲಾಗುತ್ತದೆ.

ಈ ಪಾಲಸ ಮರವನ್ನು ದೀಪೋತ್ಸವ ನಡೆಯುವ ಜಾಗಕ್ಕೆ ಮೆರವಣಿಗೆಯ ಮೂಲಕ ತರಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯು ಪಾಲಸ ಮರವನ್ನು ಹಿಡಿದ ಅಯ್ಯಪ್ಪ ಸ್ವಾಮಿಯ ಮೇಲೆ ಆವಾಹನೆಯಾಗುತ್ತಾಳೆ ಎನ್ನುವ ನಂಬಿಕೆಯೂ ಇದೆ.