Sachin Shetty: 45 ದಿನಗಳಲ್ಲಿ 14,000 ಕಿಮೀ ಜಿಮ್ನಿ ಕಾರ್ ಟೂರ್; ಈಶಾನ್ಯ ಭಾರತ ಅನ್ವೇಷಣೆಗೆ ಹೊರಟ ಖ್ಯಾತ ಯೂಟ್ಯೂಬರ್! | Jimny car tour of 14000 km in 45 days; famous YouTuber Sachin Shetty who set out to explore Northeast India

Sachin Shetty: 45 ದಿನಗಳಲ್ಲಿ 14,000 ಕಿಮೀ ಜಿಮ್ನಿ ಕಾರ್ ಟೂರ್; ಈಶಾನ್ಯ ಭಾರತ ಅನ್ವೇಷಣೆಗೆ ಹೊರಟ ಖ್ಯಾತ ಯೂಟ್ಯೂಬರ್! | Jimny car tour of 14000 km in 45 days; famous YouTuber Sachin Shetty who set out to explore Northeast India

Last Updated:

ಪ್ರವಾಸದ ವೇಳೆ ಅವರು ಕಾರಿನ ಮೇಲೆಯೇ ಟೆಂಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಲ್ಲದೇ ಊಟ-ಉಪಹಾರಕ್ಕೂ ಕಾರಿನಲ್ಲೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗ್ಯಾಸ್, ಮಿನಿ ಫ್ರಿಡ್ಜ್, ಇನ್ವರ್ಟರ್ ವ್ಯವಸ್ಥೆಯನ್ನೂ ಕಾರಿನಲ್ಲಿ ಹಾಕಲಾಗಿದೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಕರಾವಳಿಯ ಪ್ರಸಿದ್ಧ ಯೂಟ್ಯೂಬರ್ ಶಟರ್ ಬಾಕ್ಸ್ ಫಿಲಂಸ್‌ನ ಸಚಿನ್ ಶೆಟ್ಟಿ ನೂತನ ಸಾಹಸಕ್ಕೆ ಕೈಹಾಕಿದ್ದಾರೆ. ತಮ್ಮ ಜಿಮ್ನಿ ಕಾರ್‌ನಲ್ಲಿ ಈಶಾನ್ಯ ಭಾರತ ಪ್ರವಾಸಕ್ಕೆ ಸಚಿನ್ ಹೊರಟಿದ್ದಾರೆ. 45 ದಿನಗಳಲ್ಲಿ 14,000 ಕಿ.ಮೀ. ದೂರವನ್ನು ಕ್ರಮಿಸಿ ಅಲ್ಲಿನ ಆಚಾರ-ವಿಚಾರಗಳನ್ನು ಅನ್ವೇಷಣೆ ಮಾಡಲು ಸಚಿನ್ ಮುಂದಾಗಿದ್ದಾರೆ.

ಜಿಮ್ನಿ ಕಾರಿನಲ್ಲಿ ಈಶಾನ್ಯ ಭಾರತ ಪ್ರವಾಸಕ್ಕೆ ಹೊರಟಿರುವ ಇವರು ಕರಾವಳಿಯ ಪ್ರಸಿದ್ಧ ಯೂಟ್ಯೂಬರ್ ಸಚಿನ್ ಶೆಟ್ಟಿ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಾಪು ಮಾರಿಯಮ್ಮ ಸನ್ನಿಧಿಯಲ್ಲಿ ಪ್ರಾರ್ಥಿಸಿ ತಮ್ಮ ಪ್ರಯಾಣ ಆರಂಭಿಸಿದ್ದಾರೆ. 45 ದಿನಗಳಲ್ಲಿ 14,000 ಕಿಲೋಮೀಟರ್ ಕ್ರಮಿಸಿ, ಈಶಾನ್ಯ ಭಾರತದ ಸಂಸ್ಕೃತಿಯನ್ನು ಅನ್ವೇಷಿಸುವುದು ಅವರ ಉದ್ದೇಶವಾಗಿದೆ.

ಕಾರಿನ ಮೇಲೆಯೇ ಟೆಂಟ್‌ನಲ್ಲಿ ವಾಸ್ತವ್ಯ

ಈವರೆಗೆ ಬೈಕ್‌ನಲ್ಲಿ ಪ್ರವಾಸ ಮಾಡುತ್ತಿದ್ದ ಸಚಿನ್ ಶೆಟ್ಟಿ, ಈ ಬಾರಿ ತಮ್ಮ ಸ್ನೇಹಿತ ಅಭಿಷೇಕ್ ಜತೆ ಜಿಮ್ನಿ ಕಾರಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಪ್ರವಾಸದ ವೇಳೆ ಅವರು ಕಾರಿನ ಮೇಲೆಯೇ ಟೆಂಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಲ್ಲದೇ ಊಟ-ಉಪಹಾರಕ್ಕೂ ಕಾರಿನಲ್ಲೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗ್ಯಾಸ್, ಮಿನಿ ಫ್ರಿಡ್ಜ್, ಇನ್ವರ್ಟರ್ ವ್ಯವಸ್ಥೆಯನ್ನೂ ಕಾರಿನಲ್ಲಿ ಹಾಕಲಾಗಿದೆ.

ಇದನ್ನೂ ಓದಿ: Mysuru Ambari: 1000 ವರ್ಷಗಳ ಇತಿಹಾಸವಿದೆ ಮೈಸೂರಿನ ಚಿನ್ನದ ಅಂಬಾರಿಗೆ- ಇದು ಮೂಲತಃ ಕರ್ನಾಟಕದ ಈ ಜಿಲ್ಲೆಯದ್ದು!

ಯೂಟ್ಯೂಬರ್ ಸಚಿನ್ ಶೆಟ್ಟಿಯವರ 45 ದಿನಗಳ ಈ ಪ್ರವಾಸದಲ್ಲಿಈಶಾನ್ಯ ಭಾರತದ ಸೆವೆನ್ ಸಿಸ್ಟರ್ ಅಂತ ಕರೆಸಿಕೊಳ್ಳುವ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅಲ್ಲಿನ ಜನರ ಆಹಾರ, ಜನಜೀವನ, ಸಂಸ್ಕೃತಿಯ ವೈವಿಧ್ಯತೆಯನ್ನು ತಿಳಿದುಕೊಂಡು ಅದನ್ನ ಜನರಿಗೆ ತಲುಪಿಸುವ ಗುರಿ ಹೊಂದಿದ್ದಾರೆ.

ಸಚಿನ್ ಒಬ್ಬ ಸಿನಿಮಾಟೋಗ್ರಾಫರ್ ಆಗಿದ್ದು, ಇತ್ತೀಚೆಗೆ ತೆರೆಕಂಡ ಕನ್ನಡದ ಕಲ್ಜಿಗ ಚಿತ್ರದ ಛಾಯಾಗ್ರಹಕರು ಹೌದು. ಅಲ್ಲದೇ ಹಲವು ತುಳು ಚಿತ್ರಗಳು, ಡಾಕ್ಯುಮೆಂಟರಿಗಳು, ಜಾಹೀರಾತು ಶೂಟಿಂಗ್‌ಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಅಷ್ಟಮಿಯ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ವೇಷ ಧರಿಸಿ ಕಾರ್ಕಳದ ಆಶ್ರಮವೊಂದಕ್ಕೆ ಹಣ ಸಂಗ್ರಹಿಸಿ ನೀಡಿದ್ದರು.