Sachin Tendulkar: 2011ರ ವಿಶ್ವಕಪ್​​ ಫೈನಲ್​ನಲ್ಲಿ ಯುವಿಗಿಂತ ಮೊದಲು ಧೋನಿ ಬ್ಯಾಟಿಂಗ್​​ ಮಾಡುವ ಪ್ಲಾನ್ ಯಾರದ್ದು? ಕೊನೆಗೂ ಸಚಿನ್​​ರಿಂದಲೇ ಬಹಿರಂಗ | ಕ್ರೀಡೆ

Sachin Tendulkar: 2011ರ ವಿಶ್ವಕಪ್​​ ಫೈನಲ್​ನಲ್ಲಿ ಯುವಿಗಿಂತ ಮೊದಲು ಧೋನಿ ಬ್ಯಾಟಿಂಗ್​​ ಮಾಡುವ ಪ್ಲಾನ್ ಯಾರದ್ದು? ಕೊನೆಗೂ ಸಚಿನ್​​ರಿಂದಲೇ ಬಹಿರಂಗ | ಕ್ರೀಡೆ

Last Updated:

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಈ ಫೈನಲ್​​ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್‌ಗಳ ನಷ್ಟಕ್ಕೆ 274 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 114 ರನ್‌ಗಳಿಗೆ 3 ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ವೇಳೆ ಯುವಿ ಬದಲಾಗಿ ಧೋನಿ ಕ್ರೀಸ್​ಗೆ ಆಗಮಿಸಿದ್ದರು. ಈ ಗೇಮ್ ಚೇಂಜಿಂಗ್ ನಿರ್ಧಾರ ಯಾರದ್ದು ಎನ್ನುವುದನ್ನ ಸಚಿನ್ ಬಹಿರಂಗಪಡಿಸಿದ್ದಾರೆ.

ಎಂಎಸ್ ಧೋನಿ- ಯುವರಾಜ್ ಸಿಂಗ್ಎಂಎಸ್ ಧೋನಿ- ಯುವರಾಜ್ ಸಿಂಗ್
ಎಂಎಸ್ ಧೋನಿ- ಯುವರಾಜ್ ಸಿಂಗ್

2011ರ ವಿಶ್ವಕಪ್ ಫೈನಲ್‌ನಲ್ಲಿ (World Cup) ಯುವರಾಜ್ ಸಿಂಗ್‌ಗಿಂತ (Yuvraj Singh) ಮೊದಲು ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ಬ್ಯಾಟಿಂಗ್‌ಗೆ ಕಳುಹಿಸಬೇಕೆಂದು ಸಚಿನ್ ತೆಂಡೂಲ್ಕರ್ ಸ್ವತಃ ಸೂಚಿಸಿದ್ದಾಗಿ ಬಹಿರಂಗಪಡಿಸಿದ್ದಾರೆ, ವೀರೇಂದ್ರ ಸೆಹ್ವಾಗ್ ಈ ಹಿಂದೆ ಹೇಳಿದಂತೆ. ಈ ನಿರ್ಧಾರದ ಹಿಂದಿನ ಎರಡು ಪ್ರಮುಖ ಕಾರಣಗಳನ್ನು ಸಚಿನ್ ಇತ್ತೀಚೆಗೆ ವಿವರಿಸಿದ್ದಾರೆ. ‘ಕ್ರಿಕೆಟ್ ದೇವರು’ (God Of Cricket) ಎಂದು ಅಭಿಮಾನಿಗಳಿಂದ ಆರಾಧಿಸಲ್ಪಡುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಸೋಮವಾರ ರೆಡ್ಡಿಟ್ ವೇದಿಕೆಯಲ್ಲಿ ಆಯೋಜಿಸಲಾದ ‘ASk Me anything’ ಸೆಷನ್​ ನಡೆಸಿ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಂದರ್ಭದಲ್ಲಿ, 2011ರ ವಿಶ್ವಕಪ್ ಫೈನಲ್‌ನಲ್ಲಿ ಯುವರಾಜ್ ಸಿಂಗ್‌ಗಿಂತ ಮೊದಲು ಮಹೇಂದ್ರ ಸಿಂಗ್ ಧೋನಿಯನ್ನು ಬ್ಯಾಟಿಂಗ್‌ಗೆ ಕಳುಹಿಸಬೇಕೆಂದು ತಾವೂ ಸೂಚಿಸಿದ್ದರ ಹಿಂದಿನ ಕಾರಣವನ್ನ ಬಹಿರಂಗಪಡಿಸಿದ್ದಾರೆ.

ಫೈನಲ್​ ಪಂದ್ಯದಲ್ಲಿ ಸಚಿನ್‌ನ ತಂತ್ರ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಈ ಫೈನಲ್​​ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್‌ಗಳ ನಷ್ಟಕ್ಕೆ 274 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 114 ರನ್‌ಗಳಿಗೆ 3 ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿತು. ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಪೆವಿಲಿಯನ್ ತಲುಪಿದ ನಂತರ, ಯುವರಾಜ್ ಸಿಂಗ್ ಬ್ಯಾಟಿಂಗ್‌ಗೆ ಬರಬೇಕಿತ್ತು. ಆದರೆ ಯುವರಾಜ್ ಬದಲಿಗೆ ನಾಯಕ ಧೋನಿ ಬ್ಯಾಟಿಂಗ್ ಮಾಡಲು ಬಂದರು. ಈ ನಿರ್ಧಾರ ಧೋನಿಯವರದ್ದಲ್ಲ, ಆದರೆ ಸಚಿನ್ ತೆಂಡೂಲ್ಕರ್ ಆಗಿನ ಕೋಚ್ ಗ್ಯಾರಿ ಕರ್ಸ್ಟನ್ ಅವರಿಗೆ ಈ ಸಲಹೆಯನ್ನು ನೀಡಿದ್ದರು ಎಂದು ವೀರೇಂದ್ರ ಸೆಹ್ವಾಗ್ ನಂತರ ಬಹಿರಂಗಪಡಿಸಿದ್ದರು.

ಅಲ್ಲಿಯವರೆಗೂ ಧೋನಿ ಬೇಕೆಂದೇ ತಾವಾಗಿ ಬ್ಯಾಟಿಂಗ್​​ಗೆ ಬಡ್ತಿ ಪಡೆದು ಬಂದಿದ್ದರೆಂದು ಟೀಕಿಸಲಾಗಿತ್ತು. ಆ ಟೀಕೆಗೆಲ್ಲಾ ಸೆಹ್ವಾಗ್​ ಹೇಳಿಕೆ ಉತ್ತರ ಕೊಟ್ಟಿತ್ತು. ಇದೀಗ ಸ್ವತಃ ಸಚಿನ್ ತೆಂಡೂಲ್ಕರ್ ಸಂದರ್ಭಸಹಿತ ವಿವರಿಸಿದ್ದಾರೆ.

ಎರಡು ಕಾರಣ ಕೊಟ್ಟ ತೆಂಡೂಲ್ಕರ್

ರೆಡ್ಡಿಟ್ ಸೆಷನ್​ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಸಚಿನ್ ತೆಂಡೂಲ್ಕರ್ ಈ ಕಾರ್ಯತಂತ್ರದ ಬದಲಾವಣೆಯ ಹಿಂದಿನ ಎರಡು ಪ್ರಮುಖ ಕಾರಣಗಳನ್ನು ವಿವರಿಸಿದ್ದಾರೆ. ಶ್ರೀಲಂಕಾ ತಂಡದಲ್ಲಿ ಇಬ್ಬರು ಆಫ್-ಸ್ಪಿನ್ನರ್‌ಗಳಿರುವುದರಿಂದ ಎಡಗೈ ಬೌಲರ್​ನನ್ನ ಗೌತಮ್ ಗಂಭೀರ್, ಬಲಗೈ ಬೌಲರ್​ನನ್ನ ಎದುರಿಸಲು ಧೋನಿಯನ್ನು ಬ್ಯಾಟಿಂಗ್‌ಗೆ ಕಳುಹಿಸುವುದು ಸರಿಯಾದ ನಿರ್ಧಾರ ಎಂದು ಭಾವಿಸಿದೆವು. ಈ ಸಂಯೋಜನೆಯಿಂದ ಲಂಕಾ ಆಫ್-ಸ್ಪಿನ್ನರ್‌ಗಳಿಗೆ ಬೌಲಿಂಗ್ ಮಾಡಲು ಕಷ್ಟವಾಗುತ್ತದೆ. ಮತ್ತೊಂದೆಡೆ, ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 2008 ರಿಂದ 2010 ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು. ಆ ಮೂರು ಋತುಗಳಲ್ಲಿ ಎಂಎಸ್ ಧೋನಿ ಹಲವು ಬಾರಿ ನೆಟ್ಸ್‌ನಲ್ಲಿ ಮುರಳೀಧರನ್ ಅವರನ್ನು ಎದುರಿಸಿದ್ದರು. ಅದಕ್ಕಾಗಿಯೇ ಮುರಳೀಧರನ್ ಅವರ ಬೌಲಿಂಗ್ ಅನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಧೋನಿಗೆ ಉತ್ತಮ ಅನುಭವವಿದೆ ಎಂದು ಆ ನಿರ್ಧಾರ ತೆಗೆದುಕೊಂಡೆವು ಎಂದು ಉತ್ತರಿಸಿದ್ದಾರೆ.

ಟರ್ನಿಂಗ್ ಪಾಯಿಂಟ್ ಆದ ಸಚಿನ್ ನಿರ್ಧಾರ

ಆ ಪಂದ್ಯದಲ್ಲಿ, ಭಾರತ ತಂಡವು ಸೆಹ್ವಾಗ್ ರೂಪದಲ್ಲಿ ಕೇವಲ ಒಂದು ರನ್‌ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ, ಸಚಿನ್ 30 ರನ್‌ಗಳ ನಂತರ ಸಚಿನ್​ 18 ರನ್‌ಗಳಿಗೆ ಔಟಾದರು. ಆ ಸಮಯದಲ್ಲಿ, ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಅವರ ಜೊತೆಯಾಟ ತಂಡಕ್ಕೆ ಸಹಾಯ ಮಾಡಿತು. ಆದಾಗ್ಯೂ, ವಿರಾಟ್ ಕೊಹ್ಲಿ 114 ರನ್‌ಗಳಿದ್ದಾರೆ 35 ರನ್‌ಗಳಿಗೆ ಔಟಾದರು. ನಂತರ, ಸಚಿನ್ ತೆಂಡೂಲ್ಕರ್ ಅವರ ಸಲಹೆಯ ಮೇರೆಗೆ ಕ್ರೀಸ್‌ಗೆ ಬಂದ ಧೋನಿ, ಗೌತಮ್ ಗಂಭೀರ್ ಅವರೊಂದಿಗೆ 119 ರನ್‌ಗಳ ನಿರ್ಣಾಯಕ ಜೊತೆಯಾಟ ಕಲೆ ಹಾಕಿದರು. ಗೌತಮ್ ಗಂಭೀರ್ 97 ರನ್‌ಗಳಿಗೆ ಔಟಾದ ನಂತರ, ಯುವರಾಜ್ ಸಿಂಗ್ ಕ್ರೀಸ್‌ಗೆ ಬಂದರು. ಕೊನೆಯಲ್ಲಿ, ಧೋನಿ ಮತ್ತು ಯುವರಾಜ್ ಸಿಂಗ್ ಒಟ್ಟಾಗಿ ಭಾರತವನ್ನು ವಿಶ್ವ ಚಾಂಪಿಯನ್‌ಗಳನ್ನಾಗಿ ಮಾಡಿದರು. ಆ ಪಂದ್ಯದಲ್ಲಿ ಧೋನಿ 79 ಎಸೆತಗಳಲ್ಲಿ 91 ರನ್ ಗಳಿಸಿ ಅಜೇಯರಾಗುಳಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Sachin Tendulkar: 2011ರ ವಿಶ್ವಕಪ್​​ ಫೈನಲ್​ನಲ್ಲಿ ಯುವಿಗಿಂತ ಮೊದಲು ಧೋನಿ ಬ್ಯಾಟಿಂಗ್​​ ಮಾಡುವ ಪ್ಲಾನ್ ಯಾರದ್ದು? ಕೊನೆಗೂ ಸಚಿನ್​​ರಿಂದಲೇ ಬಹಿರಂಗ