ಈ ಸಮಯದಲ್ಲಿ ಮಾತಿನ ನಡುವೆ ಇಬ್ಬರು ನಟರ ಜಗಳದ ವಿಷಯ ಕೂಡ ಪ್ರಸ್ತಾಪವಾಯಿತು, ಬಾಲಿವುಡ್ ಖ್ಯಾತರಾದ ಸಲ್ಮಾನ್ ಖಾನ್ ಮತ್ತು ನಟ ವಿವೇಕ್ ಒಬೆರಾಯ್ ನಡುವಿನ ದ್ವೇಷದ ಬಗ್ಗೆಯೂ ಮಾತುಕತೆ ನಡೆಯಿತು.
ಸಲ್ಮಾನ್, ವಿವೇಕ್ ಜಗಳ
ಸಲ್ಮಾನ್, ಹರ್ಭಜನ್ ಮತ್ತು ಯುವರಾಜ್ ನಡುವಿನ ತಮಾಷೆಯ ಮಾತುಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿತು ಮತ್ತು ಅಭಿಮಾನಿಗಳಿಗೆ ಈ ಕಾರ್ಯಕ್ರಮ ಸ್ಮರಣೀಯವಾಗಿ ಮೂಡಿಬಂದಿತು. ಉದ್ಯಮದಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ವಿವಾದಗಳಲ್ಲಿ ಸಲ್ಮಾನ್ ಹಾಗೂ ವಿವೇಕ್ ಅವರ ಜಗಳ ಕೂಡ ಹೆಸರು ಮಾಡಿದೆ.
ಸಲ್ಮಾನ್, ಹರ್ಭಜನ್ ಹಾಗೂ ಯುವರಾಜ್ ಫನ್ನೀಯಾಗಿ ಮಾತನಾಡುತ್ತಿದ್ದ ಸಮಯದಲ್ಲಿ ಸಲ್ಮಾನ್ ಎಂದಿನಂತೆ ತಮ್ಮ ಶೂಟಿಂಗ್ ಸೆಟ್‌ನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು ಮಾತಿನ ಭರಾಟೆಯಲ್ಲಿ ನಾನು ಶೂಟಿಂಗ್‌ನಲ್ಲಿದ್ದಾಗ ಓಡುವ ಒಂದು ಸೀನ್ ಇತ್ತು ಎಂದು ಹೇಳುತ್ತಾರೆ.
ಆಗ ನಡುವೆ ಮಾತನಾಡಿದ ಹರ್ಭಜನ್ ಯಾರ ಹಿಂದೆ ವಿವೇಕ್ ಒಬೆರಾಯ್ ಹಿಂದೆನಾ ಎಂದು ತಮಾಷೆಯಾಗಿ ಕೇಳಿದ್ದಾರೆ. ಇದಕ್ಕೆ ಅಲ್ಲಿದ್ದ ಪ್ರೇಕ್ಷಕರೆಲ್ಲಾ ನಗುತ್ತಾ ಸ್ಪಂದಿಸಿದರೆ ಸಲ್ಮಾನ್ ಮಾತ್ರ ಹಾಸ್ಯಮಿಶ್ರಿತವಾಗಿ ಉತ್ತರಿಸಿದರು ಹಾಗೂ ಈ ಉತ್ತರ ಅಲ್ಲಿದ್ದವರ ಗಮನ ಸೆಳೆಯಿತು.
ಇದನ್ನೂ ಓದಿ: 19,831 ಅಂತಾರಾಷ್ಟ್ರೀಯ ರನ್, 53 ಶತಕ, 6 ದ್ವಿಶತ! ಆದ್ರೂ ಐಪಿಎಲ್ನಲ್ಲಿ ಈತನಿಗೆ ಚಾನ್ಸೇ ಸಿಕ್ತಿಲ್ಲ!
ವ್ಯಂಗ್ಯವಾಗಿ ಉತ್ತರಿಸಿದ್ದ ಸಲ್ಮಾನ್
ಸಲ್ಮಾನ್ ಮುಖದಲ್ಲಿ ತುಂಟನಗೆ ಬೀರುತ್ತಾ ವಿವೇಕ್ ಒಬೆರಾಯ್, ಅವರನ್ನು ಬಿಡಿ! ಅವರು ತಮ್ಮ ಜೀವನವನ್ನು ಆನಂದದಿಂದ ಕಳೆಯುತ್ತಿದ್ದಾರೆ, ಕಳೆಯಲಿ ಬಿಡಿ ಇಲ್ಲದಿದ್ದರೆ ಜೀವನ ಚಿಕ್ಕದಾಗಬಹುದು ಎಂದು ವ್ಯಂಗ್ಯವಾಗಿ ಹೇಳುತ್ತಾರೆ.
ಇದಕ್ಕೆ ಹರ್ಭಜನ್ ಹಾಗೂ ಯುವರಾಜ್ ನಗುತ್ತಾ ಪ್ರತಿಕ್ರಿಯಿಸಿದರು, ಇದರೊಂದಿಗೆ ಸಲ್ಮಾನ್ ಹಾಗೂ ವಿವೇಕ್ ನಡುವಿನ ದ್ವೇಷ ಕೂಡ ಎಲ್ಲರಿಗೂ ಖಾತ್ರಿಯಾಯಿತು ಹಾಗೂ ದ್ವೇಷಕ್ಕೆ ಕಾರಣವೇನು ಎಂಬುದಾಗಿಯೂ ಜನ ಚರ್ಚಿಸತೊಡಗಿದರು.
ಐಶ್ ಗೆಳೆತನ ಮಾಡಿದ್ದಕ್ಕೆ ವಿವೇಕ್‌ಗೆ ಸಲ್ಮಾನ್ ಬೆದರಿಸಿದ್ದರೇ?
ಇಬ್ಬರ ದ್ವೇಷವು ಐಶ್ ಜೊತೆಗಿನ ಗೆಳೆತನದೊಂದಿಗೆ ಬೆರೆತುಕೊಂಡಿದ್ದು, ಸಲ್ಮಾನ್ ಖಾನ್‌ರನ್ನು ತೊರೆದು ಐಶ್ವರ್ಯಾ ಆ ಸಮಯದಲ್ಲಿ ವಿವೇಕ್ ಅವರೊಂದಿಗೆ ಗೆಳೆತನ ಮಾಡಿದ್ದರು, ಇದು ಸಲ್ಮಾನ್ ಅವರಿಗೆ ಕೋಪ ತರಿಸಿತ್ತು ಹಾಗೂ ಇಬ್ಬರ ನಡುವೆ ಜಗಳ ಕೂಡ ಉಂಟಾಗಿದೆ ಎಂದು ಕೆಲವೊಂದು ವರದಿಗಳು ತಿಳಿಸಿವೆ.
ಸಲ್ಮಾನ್ ತಮಗೆ ರಾತ್ರಿ ವೇಳೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರು ಎಂದು ವಿವೇಕ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದು ಇಬ್ಬರ ನಡುವಿನ ದ್ವೇಷವನ್ನು ಇನ್ನಷ್ಟು ಹದಗೆಡಿಸಿತು. ಮಾಧ್ಯಮಗಳಲ್ಲಿ ವಿವೇಕ್ ಹೇಳಿಕೆ ಹೈಲೈಟ್ ಆಗಿ ಸಲ್ಮಾನ್ ಒಬ್ಬ ಅಪಾಯಕಾರಿ, ಕ್ರೂರಿ ವ್ಯಕ್ತಿ ಎಂಬಂತೆ ಜನರು ನೋಡತೊಡಗಿದರು.
ಇದನ್ನೂ ಓದಿ: ಸ್ಟಾರ್ಕ್, ಆರ್ಚರ್, ಆ್ಯಂಡರ್ಸನ್ ಅಲ್ಲ! ಈ ಬೌಲರ್ ಎದುರಿಸುವುದು ಕೊಹ್ಲಿಗೆ ತುಂಬಾ ಕಷ್ಟವಂತೆ!
ಬಹಿರಂಗ ಹೇಳಿಕೆ ನೀಡಿದ್ದ ವಿವೇಕ್ ಒಬೆರಾಯ್
ವಿವೇಕ್ ಪತ್ರಿಕಾಗೋಷ್ಠಿ ನಡೆಸಿ ಅಲ್ಲಿ ಸಲ್ಮಾನ್ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಇದು ಇಬ್ಬರ ನಡುವಿನ ಜಗಳವನ್ನು ಇನ್ನಷ್ಟು ತೀವ್ರಗೊಳಿಸಿತು. ಇಂತಹ ವಿವಾದ, ಆರೋಪಗಳ ನಡುವೆ ಕೂಡ ಸಲ್ಮಾನ್ ಅವರ ವೃತ್ತಿ ಜೀವನ ಉತ್ತಮವಾಗಿತ್ತು, ಆದರೆ ಇದರ ಪರಿಣಾಮ ವಿವೇಕ್ ಮೇಲೆ ಉಂಟಾಗಿತ್ತು.
ಸಲ್ಮಾನ್ ಅವರನ್ನು ವಿವೇಕ್ ಎದುರು ಹಾಕಿಕೊಂಡಿದ್ದಾರೆ ಎಂದರಿತ ಅನೇಕ ನಿರ್ಮಾಪಕರು ವಿವೇಕ್‌ರಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದರು. ಇದರ ಪರಿಣಾಮ ಕೈಯಲ್ಲಿ ಚಿತ್ರಗಳಲ್ಲಿದೆ ವಿವೇಕ್ ಸಾಕಷ್ಟು ಆರ್ಥಿಕವಾಗಿ ಕಂಗೆಟ್ಟರು. ಸಲ್ಮಾನ್ ಬಗ್ಗೆ ವಿವೇಕ್ ಬಹಿರಂಗವಾಗಿ ಹೇಳಿಕೆ ನೀಡಿದ್ದೇ ವಿವೇಕ್ ಅಧಃಪತನಕ್ಕೆ ಕಾರಣವಾಯಿತು ಎಂಬ ವದಂತಿಗಳೂ ಇವೆ.
March 18, 2025 11:26 PM IST
Salman Khan: ಐಶ್ ಗೆಳೆತನ ಮಾಡಿದ್ದಕ್ಕೆ ವಿವೇಕ್ ಒಬೆರಾಯ್‌ಗೆ ಸಲ್ಮಾನ್ ಬೆದರಿಕೆ ಹಾಕಿದ್ರಾ? ದಸ್ ಕಾ ದಮ್ ಕಾರ್ಯಕ್ರಮದಲ್ಲಿ ಖಾನ್ ಹೇಳಿದ್ದೇನು?