Sandalwood Cinema: ತೆರೆಕಂಡ ಕರಾವಳಿ ಕಲಾವಿದರ ಕನ್ನಡ ಸಿನಿಮಾ ʻಸ್ಕೂಲ್ ಲೀಡರ್ʼ! | Coastal Artists Kannada Cinema ʻ School Leader release

Sandalwood Cinema: ತೆರೆಕಂಡ ಕರಾವಳಿ ಕಲಾವಿದರ ಕನ್ನಡ ಸಿನಿಮಾ ʻಸ್ಕೂಲ್ ಲೀಡರ್ʼ! | Coastal Artists Kannada Cinema ʻ School Leader release

Last Updated:

‘ಸ್ಕೂಲ್ ಲೀಡರ್’ ಕನ್ನಡ ಸಿನಿಮಾ ಮೇ 30ರಂದು ದಕ್ಷಿಣ ಕನ್ನಡ, ಉಡುಪಿಯಲ್ಲಿ ಬಿಡುಗಡೆಯಾಗಿದೆ. 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭಿನಯಿಸಿದ್ದು, ಮಕ್ಕಳ ಶಿಕ್ಷಣ ಮತ್ತು ಗುರಿಯನ್ನು ಕೇಂದ್ರೀಕರಿಸಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಸನ್ ಮ್ಯಾಟ್ರಿಕ್ಸ್(Sun Matrix) ಬ್ಯಾನರಿನಡಿ ತಯಾರಾದ, ಕೆ.ಸತ್ಯೇಂದ್ರ ಪೈ ನಿರ್ಮಾಣದ ಬಹು ನಿರೀಕ್ಷಿತ ಕನ್ನಡ ಸಿನಿಮಾ ’ಸ್ಕೂಲ್ ಲೀಡರ್’(School Leader Cinema) ಕರಾವಳಿಯಾದ್ಯಂತ ಮೇ 30ರಂದು ಶುಕ್ರವಾರ ತೆರೆಕಂಡಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 13 ಥಿಯೇಟರ್ ಗಳಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ. ಮಕ್ಕಳ ಶಿಕ್ಷಣ ಮತ್ತು ಗುರಿಯನ್ನು ಕೇಂದ್ರೀಕರಿಸಿ ಮಾಡಲಾಗಿರುವ ಈ ಚಿತ್ರವನ್ನು ಉಡುಪಿಯ(Udupi) ಕಟಪಾಡಿಯ ಒಂದೇ ಶಾಲೆಯಲ್ಲಿ ಚಿತ್ರೀಕರಣ ಮಾಡಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 25 ಶಾಲೆಯ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರದಲ್ಲಿ ಅಭಿನಯಿಸಿರುವುದು ಚಿತ್ರದ ವಿಶೇಷವಾಗಿದೆ. ಮೊದಲಿಗೆ ದ.ಕ., ಉಡುಪಿ ಜಿಲ್ಲೆಯಲ್ಲಿ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಶಿವಮೊಗ್ಗ, ಕೊಪ್ಪ, ಕಾಸರಗೋಡು, ಬೆಂಗಳೂರಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಪೆನ್ಸಿಲ್ ಬಾಕ್ಸ್ ಖ್ಯಾತಿಯ ರಝಾಕ್ ಪುತ್ತೂರು ಚಿತ್ರಕಥೆ, ಸಂಭಾಷಣೆ ಜತೆಗೆ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳ ಶಾಲಾ ಜೀವನ ಹೇಗಿದೆ? ನಾಯಕತ್ವ ಹೇಗೆ ಬೆಳೆಸಬೇಕು ಎಂಬ ಸಂದೇಶವನ್ನು ಚಿತ್ರದ ಮೂಲಕ ನೀಡಲಾಗಿದೆ.

ʼಒಟ್ಟಾರೆಯಾಗಿ ಮಕ್ಕಳು, ಹಿರಿಯರು ಎಲ್ಲರೂ ವೀಕ್ಷಿಸಬಹುದಾದ ಸಿನಿಮಾ ಆಗಿ ಸ್ಕೂಲ್ ಲೀಡರ್ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ತುಳು ಚಿತ್ರರಂಗದ ದಿಗ್ಗಜರಾದ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಕನ್ನಡದ ಹಿರಿಯ ನಟ ರಮೇಶ್ ಸಹಿತ ಹಲವಾರು ಕಲಾವಿದರು ನಟಿಸಿದ್ದಾರೆ. ನಾಯಕ ನಟಿಯಾಗಿ ದೀಕ್ಷಾ ಡಿ. ರೈ ನಟಿಸಿದ್ದಾರೆ.

ಮಕ್ಕಳನ್ನೇ ಕೇಂದ್ರವಾಗಿಸಿಕೊಂಡು ನಿರ್ಮಾಣಗೊಂಡ ಈ ಚಿತ್ರದಲ್ಲಿ ಹೈಸ್ಕೂಲ್ ಮಕ್ಕಳ ನಿತ್ಯ ಜೀವನದಲ್ಲಾಗುವ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ಹಿಂದೆ ಪೆನ್ಸಿಲ್ ಬಾಕ್ಸ್ ಎನ್ನುವ ಚಿತ್ರ ತಯಾರಿಸಿ ಯಶಸ್ಸು ಗಳಿಸಿರುವ ತಂಡ, ಇದೀಗ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಈ ಚಿತ್ರಕಥೆಯನ್ನು‌ ಹೆಣೆಯಲಾಗಿದೆ.